ಬೆಂಗಳೂರು – ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವೆಂದೇ ಪರಿಗಣಿಸಲಾಗಿರುವ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಇನ್ನೆಂದು ಕಾಣದ ದಾಖಲೆಯ ಶೇಕಡ 74.67 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯಾದ್ಯಂತ ಈ ಬಾರಿ ಒಟ್ಟು 7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ರಷ್ಟು ವಿದ್ಯಾರ್ಥಿನಿಯರು ಪಾಸಾಗಿದ್ದಾರೆ ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
ಈ ಬಾರಿಯು ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದರೆ, ಉಡುಪಿ 2ನೇ ಸ್ಥಾನ, ಕೊಡುಗು 3ನೇ ಸ್ಥಾನ ಪಡೆದಿದೆ .ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರಧ ಜ್ಞಾನಗಂಗೊತ್ರಿ ಕಾಲೇಜಿನ ಕೌಶಿಕ್ ಎಸ್– 596 ಅಂಕಗಳನ್ನು ಗಳಿಸಿದರೆ ಬೆಂಗಳೂರಿನ ಆರ್ . ಪಿಯು ಕಾಲೇಜಿನ ವಿದ್ಯಾರ್ಥಿನಿ ಸುರಭಿ ಎಸ್, 596 ಅಂಕ ಗಳಿಸಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ ಎ ಅನನ್ಯ 600 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ.
ಕಲಾವಿಭಾಗದಲ್ಲಿ ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನ ತಬಸುಮ್ ಶೇಕ್,593 ಅಂಕಗಳನ್ನು ಗಳಿಸುವ ಮೂಲಕ ದಾಖಲೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ 6,07,489 ಹೊಸ ವಿದ್ಯಾರ್ಥಿಗಳ ಪೈಕಿ 4,79,746 ವಿದ್ಯಾರ್ಥಿಗಳು ಉತ್ತೀರ್ಣರಾದರೆ, ಪುನಾವರ್ತಿತ 69,870 ವಿದ್ಯಾರ್ಥಿಗಳಲ್ಲಿ 36,833 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 24,708 ಖಾಸಗಿ ವಿದ್ಯಾರ್ಥಿಗಳ ಪೈಕಿ 10,630 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾವಿಭಾಗದಲ್ಲಿ 2,20,300 ವಿದ್ಯಾರ್ಥಿಗಳ ಪೈಕಿ 1,34,876 (ಶೇ.61.22) ವಿದ್ಯಾರ್ಥಿಗಳು ಉತ್ತೀರ್ಣರಾದರೆ, ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳ ಪೈಕಿ 1,82,246 ವಿದ್ಯಾರ್ಥಿಗಳು(ಶೇ.75.89), ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳಲ್ಲಿ 2,07,087( ಶೇ.85.71) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
3,52,166 ಹಾಜರಾದ ಬಾಲಕಿಯರಲ್ಲಿ 2,82,602 (ಶೇ.80.25) ಬಾಲಕಿಯರು ಉತ್ತೀರ್ಣರಾದರೆ, 3,49,901 ಬಾಲಕರಲ್ಲಿ 2,41,607(ಶೇ.69.05) ಬಾಲಕರು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದಕ್ಕೆ ಹೋಲಿಸಿದರೆ ಈ ಬಾರಿಯೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಭೇಷ್ ಎನಿಸಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ 1,60,260 ಪರೀಕ್ಷೆಗೆ ಹಾಜರಾದವರಲ್ಲಿ 1,19,860 ವಿದ್ಯಾರ್ಥಿಗಳು(ಶೇ.74.89) ಉತ್ತೀರ್ಣರಾದರೆ ನಗರಪ್ರದೇಶದಲ್ಲಿ 5,41,807 ವಿದ್ಯಾರ್ಥಿಗಳ ಪೈಕಿ 4,04,349(ಶೇ.74.63) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 2,20,305 ವಿದ್ಯಾರ್ಥಿಗಳ ಪೈಕಿ 1,34,876(ಶೇ.61.22) ವಿದ್ಯಾರ್ಥಿಗಳು ಉತ್ತೀರ್ಣರಾದರೆ, ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳ ಪೈಕಿ 1,82,246(ಶೇ 75.89) ಹಾಗೂ ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳ ಪೈಕಿ 2,07,087 (ಶೇ.85.71) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶ
ಜಿಲ್ಲೆಗಳು – ಶೇಕಡಾ
ದಕ್ಷಿಣ ಕನ್ನಡ – 95.33
ಉಡುಪಿ – 95.24
ಕೊಡಗು – 90.55
ಉತ್ತರ ಕನ್ನಡ – 89.74
ವಿಜಯಪುರ – 84.69
ಚಿಕ್ಕಮಗಳೂರು – 83.28
ಹಾಸನ – 83.14
ಶಿವಮೊಗ್ಗ – 83.13
ಬೆಂಗಳೂರು ಗ್ರಾಮಾಂತರ – 83.04
ಬೆಂಗಳೂರು ದಕ್ಷಿಣ – 82.30
ಬೆಂಗಳೂರು ಉತ್ತರ – 2.25
ಚಾಮರಾಜನಗರ – 81.92
ಮೈಸೂರು – 79.89
ಕೋಲಾರ – 79,20
ಬಾಗಲಕೋಟೆ – 78.79
ಚಿಕ್ಕೋಡಿ – 78.76
ರಾಮನಗರ – 78.12
ಬೀದರ್ – 78
ಚಿಕ್ಕಬಳ್ಳಾಪುರ – 77.77
ಮಂಡ್ಯ – 77.47
ದಾವಣಗೆರೆ – 75.72
ಕೊಪ್ಪಳ – 74.8
ತುಮಕೂರು – 74.50
ಹಾವೇರಿ – 74.13
ಬೆಳಗಾವಿ – 73.98
ಧಾರವಾಡ – 73.54
ಬಳ್ಳಾರಿ – 69.55
ಚಿತ್ರದುರ್ಗ – 69.50
ಕಲ್ಬರ್ಗಿ – 69.37
ಗದಗ – 66.91
ರಾಯಚೂರು – 66.21
ಯಾದಗಿರಿ – 62.98