ಬೆಂಗಳೂರು: ಪುನೀತ್ ರಾಜ್ ಕುಮಾರ್ ಗೆ ಭಾರತರತ್ನ ನೀಡಬೇಕೆಂದು ನೆರೆರಾಜ್ಯದ ತೆಲುಗು ಅಭಿಮಾನಿ ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾರೆ.
ಪುನೀತ್ ಗೆ ಭಾರತ ರತ್ನ ನೀಡಬೇಕೆಂದು 2100 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ನಡೆಸಿರುವ
ತೆಲಂಗಾಣದ 55 ವರ್ಷ ರವಿಕುಮಾರ್ ನಿವೃತ್ತ CRPFಇನ್ಸ್ ಪೆಕ್ಟರ್ ರಾಗಿದ್ದಾರೆ. 100 ದಿನಗಳಲ್ಲಿ 3200 ಕಿಲೋಮೀಟರ್ ನಡೆಯುವ ಗುರಿ ಹೊಂದಿರುವ ರವಿಕುಮಾರ್ ಪ್ರತಿ ನಿತ್ಯ ಮೆಜೆಸ್ಟಿಕ್ ನಿಂದ ಶುರು ಮಾಡಿ ಕಬ್ಬನ್ ಪಾರ್ಕ್ ಲಾಲ್ ಬಾಗ್ ವರೆಗೆ ಕಾಲ್ನಡಿಗೆ ಮಾಡುತ್ತಿದ್ದು, ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ತಮ್ಮ ನಡಿಗೆ ಶುರುಮಾಡಿದ್ದಾರೆ. ಈಗಾಗಲೇ ರವಿಕುಮಾರ್ 2100 ಕಿಲೋಮೀಟರ್ ಕಂಪ್ಲೀಟ್ ಮಾಡಿದ್ದು, 98 ದಿನಗಳ ಹಿಂದೆ ಈ ಕಾಲ್ನಡಿಗೆ ಶುರುಮಾಡಿದ್ದಾರೆ. 120 ದಿನದೊಳಗಾಗಿ 3200 ಕಿಲೋಮೀಟರ್ ಪೂರ್ಣಗೊಳಿಸುವ ಗುರಿ ಹೊಂದಿದ್ದು ಪುನೀತ್ ಗೆ ಭಾರತ ರತ್ನ ನೀಡಬೇಕೆಂದು ಈ ಅಭಿಯಾನ ಶುರುಮಾಡಿದ್ದಾರೆ.
ಕನ್ನಡಿಗನಿಗೆ ಭಾರತ ರತ್ನ ಪ್ರಶಸ್ತಿ ನೀಡಲು 2100 ಕಿಲೋ ಮೀಟರ್ ನಡೆದ ತೆಲುಗು ಅಭಿಮಾನಿಯನ್ನ ಪಶ್ಚಿಮ ವಿಭಾಗ ಡಿಸಿಪಿ ಸಂಜೀಪ್ ಪಾಟೀಲ್ ತಮ್ಮ ಕಚೇರಿಗೆ ಕರೆಸಿ ಕುಶಲೋಪತಿ ವಿಚಾರಿಸಿದ್ದಾರೆ.