ಅ , 16
ರೈತರಿಗೆ ಉತ್ತಮ ಆದಾಯ ದೊರೆಯಲು ಮತ್ತು ರಾಬಿ ಋತುವಿನ ಪ್ರಮುಖ ಬೆಳೆಗಳ ಕೃಷಿಯನ್ನು ಉತ್ತೇಜಿಸಲು ರಾಬಿ ಬೆಳೆಗಳಿಗೆ ಹೊಸ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಕೃಷಿಕ ರೈತರಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಮಾಡಲು ಹುಮ್ಮಸ್ಸು ನೀಡಿದಂತಾಗಿದೆ.
ಗೋಧಿಯ ಎಂಎಸ್‌ಪಿ ಪ್ರತಿ ಕ್ವಿಂಟಾಲ್‌ಗೆ 150 ರೂ. ಹೆಚ್ಚಳವಾಗಲಿದ್ದು, ಬೆಲೆ 2,275 ರೂ.ನಿಂದ 2,425 ರೂ.ಗೆ ಏರಿಕೆಯಾಗಲಿದೆ. ಸಾಸಿವೆಗೆ ಎಂಎಸ್‌ಪಿ 300 ರೂ. ಹೆಚ್ಚಳವಾಗಲಿದ್ದು, ಬೆಲೆ 5,950 ರೂ. ಏರಿಕೆಯಾಗಲಿದೆ. ಕಡಲೆ 210 ರೂ. ಎಂಎಸ್‌ಪಿ ಆಗಿದ್ದು, ಬೆಲೆ 5,650 ರೂ. ಆಗಿದೆ. ಹಾಗೆಯೇ, ಬಾರ್ಲಿ, ಮಸೂರ್, ಕುಸುಬೆಗಳ ಮೇಲಿನ ಎಂಎಸ್‌ಪಿಯನ್ನು ಕ್ರಮವಾಗಿ 1,980 ರೂ., 6,700 ಮತ್ತು 5,940 ರೂ.ಗೆ ಹೆಚ್ಚಿಸಲಾಗಿದೆ.
ಪ್ರಮುಖ ರಾಬಿ ಬೆಳೆಯಾದ ಗೋಧಿ ಈ ಹಿಂದೆ 2275 ಇದ್ದು ಎಂಎಸ್‌ಪಿ ಕ್ವಿಂಟಾಲ್‌ಗೆ 150 ರೂ. ಹೆಚ್ಚಿಸುವ ಮೂಲಕ ಗೋಧಿ ಪ್ರತಿ ಕ್ವಿಂಟಾಲ್‌ಗೆ ಹೊಸ ಬೆಲೆ 2,425 ರೂ.ಗೆ ತಲುಪಲಿದೆ.
ಸಾಸುವೆಯ ಬೆಲೆ ಎಂಎಸ್‌ಪಿ 300 ರೂ ಹೆಚ್ಚಳದಿಂದ 5650 ಯಿಂದ 5950 ರೂ ಗೆ ಹೆಚ್ಚಳವಾಗುತ್ತದೆ, ಇನ್ನು ಕಡಲೆಯ ಎಂಎಸ್‌ಪಿ ಬೆಲೆ 210 ರೂ ಹೆಚ್ಚಳದಿಂದ 5440 ಯಿಂದ 5650 ಗೆ ಹೆಚ್ಚಳವಾಗಲಿದೆ.
ಎಂಎಸ್‌ಪಿ ಅಥವಾ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿ ರೈತರಿಂದ ಕೆಲವು ಕೃಷಿ ಉತ್ಪನ್ನಗಳನ್ನು ಖರೀದಿಸುವ ಕೇಂದ್ರ ಸರ್ಕಾರದ ಈ ನೆಡೆಯಿಂದ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ. ಮಾರುಕಟ್ಟೆ ಬೆಲೆಗಳು ಕಡಿಮೆಯಾಗಿದ್ದರೂ ಸಹ ಅವರು ಆರ್ಥಿಕ ನಷ್ಟಕ್ಕೆ ಒಳಗಾಗದಂತೆ ರಕ್ಷಿಸಲು ಈ ಎಂಎಸ್‌ಪಿ ಸಹಾಯ ಮಾಡುತ್ತದೆ.