ಬೆಂಗಳೂರು : ಭಾರತ್ ಜೋಡೋ ಯಾತ್ರೆಯ ಯಶಸ್ಸಿನಲ್ಲಿ ಬೀಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣ ಸಾಕಷ್ಟು ವಿವಾದ ಸೃಷ್ಟಿಸಿದೆ.
ಈ ಸಭೆಯಲ್ಲಿ ಅವರು ಭಾರತದ ವಾಸ್ತವ ಸ್ಥಿತಿ ಹೇಳುತ್ತಾ ಕೇಂದ್ರ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಆದರೆ ಈ ಆರೋಪ ಮಾಡುವ ಸಮಯದಲ್ಲಿ ಪ್ರಸ್ತಾಪಿಸಿದ ಹಲವು ಅಂಶಗಳು ವ್ಯಾಪಕ ಚರ್ಚೆಯಾಗುತ್ತಿದ್ದು,ಸ್ವತಃ ರಾಹುಲ್ ಗಾಂಧಿ ಅವರೇ ಪೇಚಿಗೆ ಸಿಲುಕುವಂತಾಗಿದೆ.
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿಯಾಗುತ್ತಿದೆ. ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿದೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು.
ಇದಕ್ಕೆ ಅವರದೇ ಶೈಲಿಯಲ್ಲಿ ತಿರುಗೇಟು ನೀಡಿರುವ ಬಿಜೆಪಿ ನಾಯಕರು ರಾಹುಲ್ ಗಾಂಧಿ ಸುಳ್ಳು ಆರೋಪಗಳನ್ನು ಮಾಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಹಾಗೂ ಮೋದಿ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಇದರಿಂದ ಸ್ವತಂತ್ರವಾಗಿ ಏನೂ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಆಪಾದಿಸಿದ್ದರು.ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ,ರಾಹುಲ್ ಗಾಂಧಿ ಇತ್ತೀಚೆಗೆ 40,000 ಕಿಲೋಮೀಟರ್ ಯಾತ್ರೆ ಪೂರೈಸಿದ್ದಾರೆ. ಮೋದಿ ಸರ್ಕಾರ ನೀಡಿದ ಭದ್ರತೆಯಲ್ಲಿ ಯಾವುದೇ ಆತಂಕವಿಲ್ಲದೆ ಸಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನಾಯಕರನ್ನು ಹೇಗೆ ನಡೆಸಿಕೊಳ್ಳಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ ಎಂದಿದೆ
ನನ್ನ ಫೋನ್‌ನಲ್ಲಿ ಪೆಗಾಸಿಸ್ ಮಾಲ್‌ವೆರ್ ಇದೆ. ಮಾತನಾಡುವಾಗ ಎಚ್ಚರಿಕೆಂಯಿಂದ ಇರಿ ಎಂದು ಗುಪ್ರಚರ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ರಾಹುಲ್ ದೂರಿದ್ದರು.ಇದಕ್ಕೆ ಉತ್ತರಿಸಿದ ಬಿಜೆಪಿ
ಪೆಗಾಸಿಸ್ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ರಾಹುಲ್ ಗಾಂಧಿ ತಮ್ಮ ಫೋನ್ ವಿಚಾರಣೆಗಾಗಿ ಸಲ್ಲಿಕೆ ಮಾಡಿ ಎಂದು ಕೋರ್ಟ್ ಸೂಚಿಸಿತ್ತು. ಆದರೆ ರಾಹುಲ್ ಗಾಂಧಿ ಫೋನ್ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಪೆಗಾಸಿಸ್ ಕುರಿತು ಯಾವುದೇ ಆಧಾರವಿಲ್ಲ, ವಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದೆ ಎಂದು ಬಿಜೆಪಿ ಹೇಳಿದೆ.
ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಯಾಗುತ್ತಿದೆ. ಅವರನ್ನು ಎರಡನೇ ದರ್ಜೆ ನಾಗರೀಕರಾಗಿ ನೋಡಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದರೆ,2014ರ ಬಳಿಕ ಭಾರತದಲ್ಲಿ ದಾಖಲಾದ ಕೋಮುಗಲಭೆ ಸಂಖ್ಯೆ ಅತೀ ಕಡಿಮೆ. ಇನ್ನು ಅಲ್ಪಸಂಖ್ಯಾತ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದೆ. ಹಲವು ಅಲ್ಪಸಂಖ್ಯಾತ ನಾಯಕರು ಮೋದಿ ನಾಯಕತ್ವ ಮೆಚ್ಚಿಕೊಂಡು, ಬೆಂಬಲ ಸೂಚಿಸಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಭರತ್ ಜೋಡೋ ಯಾತ್ರೆಯ ಸಮಯದಲ್ಲಿ ನಾನು ಕಾಶ್ಮೀರದಲ್ಲಿ ಉಗ್ರರನ್ನು ನೋಡಿದೆ. ಅವರು ನನ್ನನ್ನು ನೋಡಿದರುಆದರೆ ಅವರು ನನ್ನನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ ಅನ್ನೋದು ಖಚಿತ ಎಂದು ರಾಹುಲ್ ಗಾಂಧಿ ಹೇಳಿದ್ದು ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಈ ಘಟನೆಯನ್ನು ಭದ್ರತಾ ಪಡೆಗೆ ರಾಹುಲ್ ಗಾಂಧಿ ಯಾಕೆ ವರದಿ ಮಾಡಿಲ್ಲ? ರಾಹುಲ್ ಗಾಂಧಿ ಹಾಗೂ ಉಗ್ರರ ನಡುವೆ ಯಾವುದಾದರೂ ಒಪ್ಪಂದ ಆಗಿದೆಯಾ? ಎಂದು ಪ್ರಶ್ನಿಸಿದೆ.
ಹೀಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಆಡಿದ ಪ್ರತಿಯೊಂದು ಮಾತಿಗೂ ಬಿಜೆಪಿ ನಾಯಕರು ದಾಖಲೆಯೊಂದಿಗೆ ಉತ್ತರ ನೀಡಿದ್ದಾರೆ ಅಷ್ಟೇ ಅಲ್ಲ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗುವಂತೆ ಮಾಡಿದ್ದಾರೆ ಬಿಜೆಯ ಈ ಉತ್ತರ ಕಾಂಗ್ರೆಸ್ ಅನ್ನು ಕಕ್ಕಾಬಿಕ್ಕಿಯಾಗಿದೆ.