ಬೆಂಗಳೂರು, ನ.21- ವಿಶ್ವಕಪ್ ಕ್ರಿಕೆಟ್ ಫೈನಲ್ ಮ್ಯಾಚ್ ಗೆ ಬೆಟ್ಟಿಂಗ್ (Cricket Betting) ದಂಧೆ ನಡೆಸುತ್ತಿದ್ದ ರಾಜರಾಜೇಶ್ವರಿನಗರದ ಫ್ಲಾಟ್ ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಒಂದು ಕೆಜಿ ಚಿನ್ನ, ಲ್ಯಾಪ್ ಟಾಪ್, ಮೊಬೈಲ್ ಜಪ್ತಿ ಮಾಡಿದ್ದಾರೆ.
ಆನ್ ಲೈನ್ ನಲ್ಲಿ ಕೆಲ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರಾಜರಾಜೇಶ್ವರಿನಗರದ ಫ್ಲಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ದಾಳಿ ವೇಳೆ 100 ಗ್ರಾಂನ ಹತ್ತು ಚಿನ್ನದ ಬಿಸ್ಕೆಟ್ಗಳು ಸೇರಿದಂತೆ ಬರೋಬ್ಬರಿ ಒಂದು ಕೆಜಿ ಚಿನ್ನ ಪತ್ತೆಯಾಗಿದೆ.
ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಹೀಗಾಗಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ರೌಡಿ ಸಂತು ಗ್ಯಾಂಗ್ ಸೆರೆ: ಕುಖ್ಯಾತ ರೌಡಿ ರವಿ ಅಲಿಯಾಸ್ ಟ್ಯಾಂಗೋ ರವಿ ಕೊಲೆಗೆ ಸಂಚು ರೂಪಿಸಿದ್ದ ಸಂತು ಗ್ಯಾಂಗ್ ನ್ನು ಕೃತ್ಯಕ್ಕೂ ಮೊದಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್ ನ ಸಂತೋಷ್ ಅಲಿಯಾಸ್ ಸಂತು, ಕಿರಣ್ ಹರೀಶ್, ರಘು ಹಾಗೂ ಕುಮಾರ್ ನನ್ನು ಬಂಧಿಸಿದ್ದು,
ಆನಂದ್ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರುವ ಉಮೇಶ್ ಅಲಿಯಾಸ್ ಮಿಕಾನ ಸಹಚರ ಸಂತೋಷ್ ನ ಕೊಲೆಗೆ
ಗ್ಯಾಂಗ್ ಕೊಲೆಗೆ ಸಂಚು ರೂಪಿಸಿರುವುದು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ನೆಲಮಂಗಲ ಬಳಿ ಇಸ್ವೀಟ್ ಅಡ್ಡೆಯಲ್ಲಿ ಭೇಟಿಯಾಗಿದ್ದ ರೌಡಿ ರವಿ ಮತ್ತು ಸಂತೋಷ್ಗೆ ಫೈನಾನ್ಸ್ ಮಾಡುವಾಗ ಗಲಾಟೆ ನಡೆದಿತ್ತು.
ಈ ವೇಳೆ ಟ್ಯಾಂಗೋ ರವಿ ಸಂತೂ ಮೇಲೆ ಹಲ್ಲೆ ನಡೆಸಿದ್ದು,ಹಲ್ಲೆ ವಿಚಾರ ಉಮೇಶ್ ಬಳಿ ಹೇಳಿಕೊಂಡಿದ್ದ. ನಂತರ ಟ್ಯಾಂಗೋ ರವಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ಸುಮಾರು ಏಂಟರಿಂದ ಹತ್ತು ಮಂದಿ ಕಾರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಟ್ಯಾಂಗೋ ಊರಾದ ಅಮೃತೂರಿಗೆ ಹೋಗಿತ್ತು. ಸಿಕ್ಕ ಸಿಕ್ಕಲ್ಲಿ ಹೊಡೆದು ಬಿಡಬೇಕು ಅಂದುಕೊಂಡಿದ್ದ ಗ್ಯಾಂಗ್ ಗೆ ಟ್ಯಾಂಗೋ ಮನೆಯಲ್ಲಿರದೇ ಪರಾರಿಯಾಗಿ ತಪ್ಪಿಸಿಕೊಂಡಿದ್ದ, ವಿಚಾರ ತಿಳಿದರೂ ಸಹ ಅಮೃತೂರು ಪೊಲೀಸರು ಪ್ರಕರಣ ದಾಖಲಿಸದೆ ಎಚ್ಚರಿಕೆ ನೀಡಿ ಕಳಿಸಿದ್ದರು.
ಬಳಿಕ ಪೀಣ್ಯ ಬಳಿ ಟ್ಯಾಂಗೋ ರವಿ ಕೊಲೆಗೆ ಸಂತೂ ಮತ್ತೊಂದು ಸಂಚು ಮಾಡಿದ್ದ ಮಾಹಿತಿ ಪಡೆದಿದ್ದ ಸಿಸಿಬಿಯ ಒಸಿಡ್ಲ್ಯೂ ವಿಭಾಗದ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ ರೌಡಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಮಚ್ಚು ಲಾಂಗ್ ಪೆಪ್ಪರ್ ಸ್ಪ್ರೇ ವಶಕ್ಕೆ ಪಡೆಯಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.