ಲಕ್ನೋ : ನಾಲ್ವರು ಕಾಮುಕರು ಯುವತಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿ ಎಂದು ತಿಳಿದ ಬಳಿಕ ಮತ್ತೆ ಆಕೆಯ ಮೇಲೆ ಹಲ್ಲೆ ನಡೆಸಿ ಗರ್ಭಪಾತವಾಗುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ದೇವ್ ಬಂದ್ ನಲ್ಲಿ ನಡೆದಿದೆ. ಮೊದಲಿಗೆ ಒಬ್ಬ ಮನೆಯಲ್ಲಿ ಯುವತಿಯೊಬ್ಬಳೇ ಇದ್ದಾಗ ಆಕೆಯನ್ನು ಅತ್ಯಾಚಾರ ಮಾಡಿ ವಿಡಿಯೋ ಚಿತ್ರೀಕರಿಸಿ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಾನೆ. ಅಷ್ಟೇ ಅಲ್ಲದೇ ದೆವಬಂದ್ ಎನ್ನುವ ಸ್ಥಳಕ್ಕೆ ಕರೆದೋಯ್ದು ತನ್ನ ಇತರ ಮೂವರು ಗೆಳೆಯರಿಂದ ಅತ್ಯಾಚಾರ ಮಾಡಿಸಿದ್ದಾನೆ. ಆದರೆ ಜೂನ್ 24ರಂದು ಆಕೆ ಗರ್ಭವತಿಯಾಗಿದ್ದಾಳೆಂದು ವಿಷಯ ತಿಳಿದು ಮತ್ತೆ ಕರೆದೋಯ್ದು ಹಲ್ಲೆ ಮಾಡಿ ಗರ್ಭಪಾತವಾಗುವಂತೆ ಮಾಡಿದ್ದಾರೆ. ಉತ್ತರ ಪ್ರದೇಶದ ದೇವ್ ಬಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.