ರಶ್ಮಿಕಾ ಮಲಯಾಳಂ ಸಿನಿಮಾವಾದ ನಟ ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಚಿತ್ರವು ಇಂದು (ಆಗಸ್ಟ್ 5) ಬಿಡುಗಡೆ ಆಗಲಿದೆ. ಆದರೆ ರಿಲೀಸ್ಗೂ ಮುನ್ನವೇ ಚಿತ್ರತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಕೆಲವು ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ವಿಷಯಗಳಿವೆ ಎಂದು ಚಿತ್ರ ಬಿಡುಗಡೆಗೆ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿವೆಯಂತೆ.ಗಲ್ಫ್ ದೇಶಗಳಲ್ಲಿ ಅಲ್ಲಿನ ಸೆನ್ಸಾರ್ ಮಂಡಳಿ, ಸಿನಿಮಾ ಪ್ರದರ್ಶನಕ್ಕೆ ನಿಷೇಧ ನೀಡಿದೆ. ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಚಿತ್ರ ಪ್ರದರ್ಶನ ಬ್ಯಾನ್ ಮಾಡಿದೆ. ಇದಾಗ್ಯೂ ಚಿತ್ರತಂಡ ಚಿತ್ರಪ್ರದರ್ಶನಕ್ಕೆ ಮರು ಸೆನ್ಸಾರ್‌ಗೆ ಅರ್ಜಿ ಸಲ್ಲಿಸಿದೆ.ಅರಬ್ ರಾಷ್ಟ್ರಗಳಲ್ಲಿ ದುಲ್ಕರ್ ಸಲ್ಮಾನ್ ಅವರ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಒಂದು ವೇಳೆ ಬ್ಯಾನ್ ಖಚಿತವಾದರೆ ‘ಸೀತಾ ರಾಮಂ’ ಚಿತ್ರಕ್ಕೆ ಹೆಚ್ಚು ನಷ್ಟ ಆಗಲಿದೆ ಎಂಬ ಮಾತು ಕೇಳಿಬಂದಿದೆ. ಟ್ರೇಲರ್ ಮೂಲಕವೇ ನಿರೀಕ್ಷೆ ಮೂಡಿಸಿರುವ ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್
Previous Articleಆಂಜನೇಯ ದೇವಸ್ಥಾನಕ್ಕೆ ಕನ್ನ
Next Article ದಾವೂದ್ ಭಂಟ ಸಲೀಂ ಖುರೇಶಿ ಅಲಿಯಾಸ್ ಸಲೀಂ ಫ್ರೂಟ್ ಸೆರೆ..