ನವದೆಹಲಿ – ಒಂದು ಕಾಲದದಲ್ಲಿ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ, ಅತ್ಯಂತ ಎತ್ತರದ ನಾಯಕ ಎಂದು ಪರಿಗಣಿಸಲ್ಪಟ್ಟಿರುವ ಕೇಂದ್ರದ ಮಾಜಿ ಸಚಿವ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಣಿವೆ ರಾಜ್ಯದಲ್ಲಿ ತಮ್ಮದೇ ಆದ ಹೊಸ ಪಕ್ಷ ಹುಟ್ಟು ಹಾಕಿ ಸಂಘಟನೆಯಲ್ಲಿ ತೊಡಗಿದ್ದಾರೆ.
ಹೊಸ ಪಕ್ಷ ಹುಟ್ಟು ಹಾಕಿದ ನಂತರ ಸುದ್ದಿಯಲ್ಲಿ ಇಲ್ಲದ ಗುಲಾಂನಬಿ ಆಜಾದ್, ಏಕಾಏಕಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ತಮ್ಮ ಹೊಸ ಪಕ್ಷದ ಕುರಿತಂತೆ ಮಾತು ಆರಂಭಿಸಿದ ಅವರು, ತಮ್ಮ ಬಹುತೇಕ ಸಮಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೀಕೆಗೆ ಬಳಸಿಕೊಂಡರು.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿದ್ದ ಗುಲಾಂ ನಬಿ ಆಜಾದ್ ಇದೀಗ ಏಕಾಏಕಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲು ಕಾರಣವೇನು ಎಂದು ಪತ್ತೆ ಹಚ್ಚಲು ಹೊರಟವರಿಗೆ ಅಸಲಿ ಸಂಗತಿ ಪತ್ತೆಯಾಗಿದೆ.

ಅದು ದೆಹಲಿಯಲ್ಲಿರುವ ಸರ್ಕಾರಿ ಬಂಗ್ಲೆ. ಗುಲಾಮ್ ನಬಿ ಆಜಾದ್ ಅವರ ರಾಜ್ಯಸಭಾ ಸದಸ್ಯತ್ವ ದ ಅವಧಿ ಮುಕ್ತಾಯಗೊಂಡು ವರ್ಷಗಳೇ ಕಳೆದಿವೆ. ಆದರೂ ಕೂಡ, ಅವರಿನ್ನು ತಮ್ಮ ಸರ್ಕಾರಿ ಬಂಗ್ಲೆಯನ್ನು ತೆರವು ಮಾಡಿಲ್ಲ. ಇವರೊಬ್ಬರೇ ಅಲ್ಲ, ಅನೇಕ ಮಂದಿ ಕೇಂದ್ರದ ಮಾಜಿ ಮಂತ್ರಿಗಳು ಇನ್ನೂ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ ವಿಶೇಷವೆಂದರೆ ಅವರೆಲ್ಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೆಲ್ಲರೂ ಕಟು ಟೀಕಾಕಾರಾಗಿದ್ದಾರೆ.
ಇವರ ಸಾಲಿಗೆ ಇದೀಗ ಗುಲಾಂನಬಿ ಆಜಾದ್ ಕೂಡ ಸೇರ್ಪಡೆಯಾಗಿದ್ದಾರೆ. ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಿರುವಷ್ಟು ಕಾಲ ತಾವು ಆಭಾದಿತರಾಗಿ ಸರ್ಕಾರಿ ಬಂಗಲೆಯಲ್ಲಿ ವಾಸಿಸಬಹುದು ಎಂಬ ಸತ್ಯವನ್ನ ಅರಿತುಕೊಂಡಿದ್ದಾರೆ. ಯಾಕೆಂದರೆ, ದೆಹಲಿಯಲ್ಲಿ ಮನೆಗಳ ಮೌಲ್ಯ ಅತ್ಯಧಿಕ. ಅದರಲ್ಲೂ ಸರ್ಕಾರಿ ಬಂಗಲೆಗಳಷ್ಟು ವಿಶಾಲವಾಗಿ ಇರುವ ಮನೆಗಳು ಸಿಗುವುದೇ ಇಲ್ಲ. ಈ ಸತ್ಯವನ್ನ ಅರಿತಿರುವ ಗುಲಾಮ್ ನಬಿ ಅಜಾದ್ ತಮಗೆ ದೆಹಲಿಯಲ್ಲಿ ಸುಸಜ್ಜಿತವಾದ ಸಾಕಷ್ಟು ಭದ್ರತೆ ಉಳ್ಳ ವಿಶಾಲವಾದ ಬಂಗಲೇಬೇಕೆಂದರೆ, ರಾಹುಲ್ ಗಾಂಧಿ ಅವರನ್ನು ಟೀಕಿಸಬೇಕು, ಎಂದು ಕಂಡುಕೊಂಡಿರುವ ಗುಲಾಂ ನಬಿ ಆಜಾದ್ ಇದೀಗ ಅದೇ ಕೆಲಸ ಮಾಡುತ್ತಿದ್ದಾರೆ.
ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಮಾನಹಾನಿ ಪ್ರಕರಣ ಒಂದರಲ್ಲಿ ಜೈಲು ಶಿಕ್ಷೆಗೆ ಗುರಿಯಾದ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಆದಾದ ಮರುದಿನವೇ ಕೇಂದ್ರ ಸರ್ಕಾರ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿ, ತಮಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ಕೂಡಲೇ ಖಾಲಿ ಮಾಡಬೇಕೆಂದು ಸೂಚಿಸಿದೆ. ಆದರೆ ರಾಹುಲ್ ಗಾಂಧಿ ಅವರ ಕಟುಟೀಕಾಕಾರರಿಗೆ ಅವರ ಸದಸ್ಯತ್ವದ ಅವಧಿ ಮುಗಿದು ವರ್ಷಗಳೇ ಕಳೆದರು, ಅವರು ವಾಸಿಸುತ್ತಿರುವ ಸರ್ಕಾರಿ ಬಂಗ್ಲೆಯನ್ನು ಖಾಲಿ ಮಾಡುವಂತೆ ಯಾವುದೇ ನೋಟಿಸ್ ನೀಡಿಲ್ಲ.

