ಬೆಂಗಳೂರು
ವಾಯುಮಾರ ಕುಸಿತ ಸೇರಿದಂತೆ ವಾತಾವರಣದಲ್ಲಿ ಆದ ಬದಲಾವಣೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದು ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ.
ಕಳೆದ ವಾರದ ದಾಖಲೆಯ ಮಳೆಯ ನಂತರ ರಸ್ತೆಗಳು ಹದಗೆಟ್ಟಿದೆ, ಇದು ಸಾಮಾನ್ಯ ಜೀವನದ ಮೇಲೆ ತೀವ್ರ ಪರಿಣಾಮ ಬೀರಿತ್ತು. ವಿಶೇಷವಾಗಿ ಉತ್ತರ ಬೆಂಗಳೂರು ಮತ್ತು ಮಹದೇವಪುರ, ಬೊಮ್ಮನಹಳ್ಳಿ ಮತ್ತು ಸರ್ಜಾಪುರ ರಸ್ತೆಯ ಐಟಿ ಬೆಲ್ಟ್‌ಗಳಲ್ಲಿ ಭಾರೀ ಮಳೆಯಿಂದಾಗಿ ಸಾವಿರಾರು ಗುಂಡಿಗಳು ಮತ್ತೆ ತಲೆ ಎತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕೆಲವು ರಸ್ತೆಗಳಲ್ಲಿ ನೀರು ನಿಂತು ಗುಂಡಿಗಳು ಸೃಷ್ಟಿಯಾಗಿದೆ ರಾಜಕಾಲುವೆಗಳು ಕಸದಿಂದ ಕಟ್ಟಿಕೊಂಡಿವೆ. ಈ ಎಲ್ಲವುಗಳನ್ನು ತಕ್ಷಣವೇ ದುರಸ್ತಿ ಮಾಡಲು ರಾಜ್ಯ ಸರ್ಕಾರ 28 ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ
ಈ ಹಣ ಬಳಸಿಕೊಂಡು ಸಮರೋಪಾದಿಯಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಮಾಡಬೇಕು ಎಂದು ಬೆಂಗಳೂರು ಗಳೂರು ನಗರ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ