Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪಾಶ್ಚಾತ್ಯ ದೇಶಗಳಲ್ಲಿ ಭಾರಿ ಕ್ರೇಜ್ ಹುಟ್ಟಿಸಿದ RRR
    ಸಿನೆಮ

    ಪಾಶ್ಚಾತ್ಯ ದೇಶಗಳಲ್ಲಿ ಭಾರಿ ಕ್ರೇಜ್ ಹುಟ್ಟಿಸಿದ RRR

    vartha chakraBy vartha chakraಜನವರಿ 17, 2023Updated:ಜನವರಿ 17, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಇತ್ತೀಚೆಗಷ್ಟೇ RRR ಚಿತ್ರದ “ನಾಟು ನಾಟು” ಹಾಡು Golden Globe Award ಪಡೆದು ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿತ್ತು. 2022 ರ March ನಲ್ಲಿ ಬಿಡುಗಡೆಗೊಂಡ ಈ ಚಿತ್ರ, ದೇಶದೆಲ್ಲಡೆ ಮೆಚ್ಚುಗೆಯನ್ನು ಪಡೆದು ಜನಪ್ರಿಯವಾಗಿದ್ದಲ್ಲದೆ, ಅಮೇರಿಕಾ ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಕೂಡ ಜನಪ್ರಿಯತೆಯನ್ನು ಮತ್ತು ಜನಮೆಚ್ಚುಗೆಯನ್ನು ಗಳಿಸಿತ್ತು.

    ಅಮೇರಿಕಾದಲ್ಲಿ ಬಿಡುಗಡೆಗೊಂಡ ಇತರ ಭಾರತೀಯ ಚಲನಚಿತ್ರಗಳಿಗಿಂತ, RRR ಹೆಚ್ಚು ಹಿಟ್ ಆಗಲು ಕಾರಣಗಳೇನಿರಬಹುದು?
    * ಮನೋರಂಜನೆಯ ವಿಷಯದಲ್ಲಿ, SS Rajamouli ನಿರ್ದೇಶನದಲ್ಲಿ ಮೂಡಿ ಬಂದ RRR ಚಿತ್ರ, ‘ಈಗ’, ‘ಬಾಹುಬಲಿ’ ಚಿತ್ರಗಳಷ್ಟು ಮನಸೂರೆಗೊಳ್ಳಲಿಲ್ಲ ಎಂದು ಭಾರತೀಯ ಪ್ರೇಕ್ಷಕರು ಅಭಿಪ್ರಾಯಪಟ್ಟರೂ, ಈ ಚಿತ್ರ ಹೊರ ರಾಷ್ಟ್ರದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿದೆ. ಭಾರತೀಯ ಚಿತ್ರಗಳಲ್ಲಿ, ಥ್ರಿಲ್ಲರ್, ಕಾಮಿಡಿ, ಪ್ರಣಯ, ಫೈಟ್ಸ್, ಸೆಂಟಿಮೆಂಟ್ಸ್, ಸಂಗೀತಗಳೆಲ್ಲ ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ, ಹಾಲಿವುಡ್ ನ ಚಿತ್ರಗಳಲ್ಲಿ ಈ ಬಗೆಯ ಹಲವು ಎಮೋಷನ್ ಗಳನ್ನು ಒಂದೇ ಚಿತ್ರದಲ್ಲಿ ಕಾಣುವುದು ಅಪರೂಪ ಎಂದೇ ಹೇಳಬಹುದು. ಹಾಗಾಗಿ, ತಿಳಿ ಹಾಸ್ಯ, ಭರ್ಜರಿ action sequence ಗಳು, ಇಷ್ಟವಾಗುವ ಒಳ್ಳೆಯ ಹಾಡುಗಳು, ರೋಮ್ಯಾನ್ಸ್ , ಇಬ್ಬರು ನಾಯಕರ ಅದ್ಭುತ ಅಭಿನಯ ಇವೆಲ್ಲವುಗಳನ್ನು ಹದವಾಗಿ ಹೊಂದಿರುವ RRR ಚಿತ್ರ ಅಲ್ಲಿನ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
    * SS Rajamouli ನಿರ್ದೇಶನದ ಬಾಹುಬಲಿ ಚಿತ್ರ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಕಂಡರೂ, ಅಮೇರಿಕಾದಲ್ಲಿ ಹೇಳಿಕೊಳ್ಳುವ ಸದ್ದು ಮಾಡಿರಲಿಲ್ಲ. ಬಹುಶಃ ಹಾಲಿವುಡ್ ಸಿನಿಮಾಗಳಾದ ಗ್ಲೇಡಿಯೇಟರ್ ಗಳಂತಹ action ಸಿನಿಮಾಗಳು ರಂಜಿಸಿದಷ್ಟು ಕಾಲ್ಪನಿಕ ಚಿತ್ರಕಥೆಯುಳ್ಳ ಬಾಹುಬಲಿ ಅಷ್ಟಾಗಿ ಅಲ್ಲಿಯ ಪ್ರೇಕ್ಷಕರನ್ನು ರಂಜಿಸಿರಲಿಕ್ಕಿಲ್ಲ.
    * RRR ಚಿತ್ರದ ಚಿತ್ರಕಥೆಯನ್ನು ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಜೀವನದ ಸುತ್ತ ಕಾಲ್ಪನಿಕವಾಗಿ ಹೆಣೆಯಲ್ಪಟ್ಟಿದೆ. ಜೊತೆಗೆ ಚಿತ್ರದಲ್ಲಿ ಮಿಳಿತವಾದ ಭಾರತೀಯ ಸಂಸ್ಕೃತಿ, ಇತಿಹಾಸ ಕೂಡ ಅಲ್ಲಿನ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಿರಬಹುದು.
    * ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಅಲ್ಲೂರಿ ಸೀತಾರಾಮ್ ರಾಜು ಮತ್ತು ಕೋಮರಂ ಭೀಮ್ ಎನ್ನುವ ಯುವ ಕ್ರಾಂತಿಕಾರರಿಬ್ಬರು ನಡೆಸುವ ಹೋರಾಟವೇ ಚಿತ್ರದ ಜೀವಾಳ. ಇಂತಹ ಕಥೆಗಳು ಅಮೇರಿಕಾದ ಸಿನಿಪ್ರಿಯರನ್ನು ರಂಜಿಸಿದ ಹಲವು ಸಾಕ್ಷಿಗಳಿವೆ. ಹಾಗಾಗಿ, ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಹೋರಾಟಗಾರರ ಹೋರಾಟದ ಈ ಚಿತ್ರ ಅಲ್ಲಿನ ಜನರಿಗೆ ಇಷ್ಟವಾಗಿರಬಹುದು. ಅಲ್ಲದೆ, ಈ ಚಿತ್ರಕ್ಕೆ ಅಪೂರ್ಣ ಕ್ಲೈಮ್ಯಾಕ್ಸ್ ನೀಡಲಾಗಿದೆ. ಇದು ಪ್ರೇಕ್ಷಕರಲ್ಲಿ, ಸ್ವಾತಂತ್ರ್ಯ ಹೋರಾಟದ ನಂತರ ಅಲ್ಲೂರಿ ಸೀತಾರಾಮ್ ರಾಜು ಮತ್ತು ಕೋಮರಂ ಭೀಮ್ ಜೀವನದಲ್ಲಿ ಮುಂದೇನಾಯಿತು ಎಂಬ ಕುತೂಹಲವನ್ನು ಕೆರಳಿಸಿದೆ.

    ಚಿಕಾಗೋ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, “RRR ಚಿತ್ರದ ಮುಂದಿನ ಭಾಗವನ್ನು ಚಿತ್ರೀಕರಿಸುವ ಬಗ್ಗೆ ಈಗಾಗಲೇ ಯೋಚಿಸಿದ್ದೇವೆ. ನನ್ನ ತಂದೆಯೇ ನನ್ನ ಚಿತ್ರಗಳ ಚಿತ್ರಕಥೆಯನ್ನು ಬರೆದಿದ್ದಾರೆ. ನಾನು ಅವರೊಂದಿಗೆ RRR 2 ಚಿತ್ರದ ಕಥೆಯ ಬಗ್ಗೆ ಚರ್ಚಿಸಿದ್ದೇನೆ. ಅವರು ಈಗಾಗಲೇ ಅದರೆಡೆಗೆ ಕೆಲಸವನ್ನು ಆರಂಭಿಸಿದ್ದಾರೆ” ಎಂದು ನಿರ್ದೇಶಕ SS Rajamouli ಹೇಳಿದ್ದಾರೆ. ಅಲ್ಲದೆ, ಚಿತ್ರದ ಪ್ರಮುಖ ನಾಯಕರಾದ ರಾಮ್ ಚರಣ್ (Ram Charan) ಮತ್ತು Junior NTR ಕೂಡ ಈ ಚಿತ್ರದ ಎರಡನೇ ಭಾಗವನ್ನು ಚಿತ್ರೀಕರಿಸಲು ಒತ್ತಾಯಿಸಿದ್ದಾರಂತೆ. RRR ಚಿತ್ರಕ್ಕೆ ಒಂದು ತಾರ್ಕಿಕ ಅಂತ್ಯ ದೊರೆಯಲೇ ಬೇಕು ಮತ್ತದು ಹೊಸ ಚರಿತ್ರೆಯನ್ನೇ ಬರೆಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

    ಇಂತಹ ಅದ್ಭುತ ಚಿತ್ರಕಥೆಗಳುಳ್ಳ ಸಿನಿಮಾಗಳು ಖಂಡಿತವಾಗಿಯೂ ಪಾಶ್ಚಾತ್ಯ ದೇಶಗಳಲ್ಲಿ ಭಾರತೀಯ ಚಿತ್ರರಂಗಕ್ಕೊಂದು ವೇದಿಕೆ ಸೃಷ್ಟಿಸುತ್ತಿವೆ ಮತ್ತು ಅದ್ಭುತ ಚಿತ್ರಗಳನ್ನು ನೀಡುವಲ್ಲಿ ನಮ್ಮ ಭಾರತೀಯ ಸಿನಿಮಾ ತಯಾರಕರು ಎಂದಿಗೂ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗುತ್ತಲಿದೆ.

    Verbattle
    Verbattle
    Verbattle
    Globe gold m ward ಚಲನಚಿತ್ರ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleBJP ವಿಜಯಸಂಕಲ್ಪ ಅಭಿಯಾನ
    Next Article ನೇಪಾಳದಲ್ಲಿ ಭೀಕರ ವಿಮಾನ ಅಪಘಾತ. 72 ಜನರ ದುರ್ಮರಣ!
    vartha chakra
    • Website

    Related Posts

    ರಿಯಾಲಿಟಿ ಶೋ ಅಲ್ಲ, ಇದು ಪಕ್ಕಾ ‘ಸ್ಕ್ರಿಪ್ಟೆಡ್’ ಡ್ರಾಮಾ: ಬಿಗ್ ಬಾಸ್ ಮನೆಯ ಕರಾಳ ಸತ್ಯ ಬಯಲು?!

    ಜನವರಿ 19, 2026

    ಐಪಿಎಲ್ 2026: ಆರ್‌ಸಿಬಿ ಅಂಗಳಕ್ಕೆ ‘ನಂದಿನಿ’ ಎಂಟ್ರಿ?

    ಜನವರಿ 18, 2026

    ದುರಹಂಕಾರಕ್ಕೆ ಸಿಕ್ಕ ಬಳುವಳಿ!

    ಜನವರಿ 16, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jeffreymaf ರಲ್ಲಿ ಕೆಲಸ ಆರಂಭಿಸಿದ ಟಿ.ಬಿ.ಜಯಚಂದ್ರ | TB Jayachandra
    • Daviddek ರಲ್ಲಿ ಯಾರೇ.. ಕೂಗಾಡಲಿ…
    • Daviddek ರಲ್ಲಿ ನೇಮಕಾತಿ, ಭಡ್ತಿ ಗೆ ಇದ್ದ ಆತಂಕ ದೂರ !
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಜನವರಿ 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನವರಿ 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನವರಿ 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.