ಯುಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದಿನವರೆಗೆ ರಷ್ಯಾಕ್ಕೆ ಹೇಳಿಕೊಳ್ಳುವಂಥ ಯಶಸ್ಸೇನು ಸಿಗದಲ್ಲಿರುವುದು ಇಡೀ ವಿಶ್ವಕ್ಕೆ ಗೊತ್ತಿರುವ ಸಂಗತಿ. ಈಗಾಗಲೇ ಹತ್ತಾರು ಸಾವಿರ ಸೈನಿಕರನ್ನುಕಳೆದುಕೊಂಡು ಅದರೊಂದಿಗೆ ಬಹಳಷ್ಟು ಆರ್ಥಿಕ ನಷ್ಟವನ್ನೂ ಅನುಭವಿಸಿರುವ ರಷ್ಯಾ ಇತ್ತೀಚಿನ ದಿನಗಳಲ್ಲಿ ಯುದ್ಧದ ವಿಷಯದಲ್ಲಿ ತನ್ನ ದೇಶದ ನಾಗರಿಕರ ಬೆಂಬಲವನ್ನುಕ್ರೋಢೀಕರಿಸುವುದರಲ್ಲಿಯೂ ಹಿನ್ನಡೆ ಅನುಭವಿಸಿರುವುದು ಗೊತ್ತಾಗಿದೆ. ಈ ಹತಾಶ ಪರಿಸ್ಥಿತಿಯನ್ನು ತಲುಪಿರುವ ರಷ್ಯಾ ಈಗ ಯುಕ್ರೇನ್ ದೇಶದ ನೋವ ಕಾಕೋವ್ಕಾ ಆಣೆಕಟ್ಟನ್ನು ಧ್ವಂಸ ಮಾಡಿ ಈ ಯುದ್ಧದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.
ಯಾವುದೇ ಯುದ್ಧದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಮತ್ತು ಯೋಧರಲ್ಲದವರನ್ನು ಕೊಲ್ಲಬಾರದು ಎಂಬೆಲ್ಲ ನಿಯಮಗಳಿವೆ. ಆದರೆ ರಷ್ಯಾ ಈ ಎಲ್ಲಾ ನಿಯಮ ನಿಬಂಧನೆಗಳನ್ನು ಗಾಳಿಗೆ ತೋರಿ ತನ್ನ ಮನಸ್ಸಿಗೆ ತೋಚಿದ ರೀತಿಯಲ್ಲಿ ದಾಳಿ ಮಾಡುತ್ತಿರುವುದನ್ನು ವಿಶ್ವವೇ ಗಮನಿಸಿದೆ. ಇಂಥದ್ದರ ಮಧ್ಯೆ ಈಗ ರಷ್ಯಾ ಯುಕ್ರೇನ್ ದೇಶದ ಒಳಗಿನ ಆಣೆಕಟ್ಟನ್ನು ಒಡೆದು ಹಾಕಿರುವುದು ಇಡೀ ವಿಶ್ವವನ್ನೇ ದಂಗಾಗಿಸಿದೆ.
ಈ ವಿಧ್ವಂಸಕ ಕೃತ್ಯದಿಂದ ಯುಕ್ರೇನ್ ದೇಶದಲ್ಲಿ ವಿಪರೀತಿ ಆಸ್ತಿ ಪಾಸ್ತಿ ಮತ್ತು ಜನಜೀವಗಳ ನಷ್ಟವಾಗುವುದು ಖಂಡಿತ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶ್ವದ ರಾಷ್ಟ್ರಗಳ ಸಮೂಹ ಹೇಗೆ ಪ್ರತಿಕ್ರಯಿಸಬಹದುದು ಎಂದು ಕಾದು ನೋಡಬೇಕಾಗಿದೆ.

