ಬೆಂಗಳೂರು – ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಭಿನ್ನಮತ ದೊಡ್ಡ ಸವಾಲಾಗಿದೆ.
ಬಿಕ್ಕಟ್ಟು ಶಮದ ಅಖಾಡಕ್ಕೆ ಪಕ್ಷದ ಹೈಕಮಾಂಡ್ ಧುಮುಕಿದೆ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ರಾಜ್ಯದಲ್ಲಿ ಅಪಸ್ವರ ಎತ್ತಿರುವ ಹಲವು ನಾಯಕರನ್ನು ಸಂಪರ್ಕಿಸಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸೂಚಿಸುತ್ತಿದ್ದಾರೆ.
ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದ ಗೌಡ ಅವರು ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದರು ಆದರೆ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ ಈ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಿಸಲು ಯತ್ನಿಸಿದ ಅವರು ಅಂತಿಮವಾಗಿ ಸುಮ್ಮನಾದರು ಪಕ್ಷದ ಅಭ್ಯರ್ಥಿ ಪರವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿಲ್ಲ.
ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಖುದ್ದಾಗಿ ಸದಾನಂದ ಗೌಡ ಅವರನ್ನು ಸಂಪರ್ಕಿಸಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರೂ ಸದಾನಂದ ಗೌಡ ಇನ್ನು ಕೂಡ ಅಖಾಡಕ್ಕೆ ತಲುಪಿಲ್ಲ ಅಷ್ಟೇ ಅಲ್ಲ ತಮ್ಮ ಬೆಂಬಲಿಗರಿಗೂ ಯಾವುದೇ ಸೂಚನೆಯನ್ನು ನೀಡಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಶಕ್ತಿ ಕೇಂದ್ರ ಪ್ರಮುಖರ ಸಭೆಯಿಂದಲೂ ದೂರ ಉಳಿದ ಸದಾನಂದ ಗೌಡ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಇಲ್ಲಿಯವರೆಗೆ ಯಾವುದೇ ಪ್ರಚಾರದಲ್ಲಿ ತೊಡಗಿಲ್ಲ.
ಈ ಬಗ್ಗೆ ಪಕ್ಷದ ರಾಜ್ಯ ಸಮಿತಿ ಮತ್ತು ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ನೀಡಿರುವ ಮಾಹಿತಿಯನ್ನು ಆದರಿಸಿ ರಂಗ ಪ್ರವೇಶಿಸಿದ ಅಮಿತ್ ಶಾ ಅವರು ಸದಾನಂದ ಗೌಡ ಅವರಿಗೆ ದೂರವಾಣಿ ಕರೆ ಮಾಡಿದ್ದು ಎಲ್ಲವನ್ನು ಮರೆತು ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಪಕ್ಷದಿಂದ ಎಲ್ಲ ರೀತಿಯ ಅಧಿಕಾರ ಮತ್ತು ಸೌಲಭ್ಯಗಳನ್ನು ಪಡೆದುಕೊಂಡು ಈಗ ಅಪಸ್ವರ ಎತ್ತುವುದು ತಮ್ಮಂತಹ ಹಿರಿಯ ನಾಯಕರಿಗೆ ತಕ್ಕ ಕ್ರಮವಲ್ಲ. ಅವಕಾಶ ಲಭಿಸಿದಾಗ ನಾಯಕತ್ವ ತಮಗೆ ಅವಕಾಶ ನೀಡುವ ಮೂಲಕ ಹೆಚ್ಚಿನ ಗೌರವ ನೀಡಿದೆ ಇದನ್ನು ಮೂಡಿಸಿಕೊಂಡು ಹೋಗುವ ಜವಾಬ್ದಾರಿ ಇದೀಗ ತಮ್ಮ ಮೇಲಿದೆ ಇದನ್ನು ನನ್ನ ಮನವಿ ಎಂದಾದರೂ ಸ್ವೀಕರಿಸಿ ಇಲ್ಲವೇ ಸೂಚನೆ ಎಂದಾದರೂ ತಿಳಿದು ಪಾಲಿಸಬೇಕು ಎಂದು ಹೇಳಿದರೆನ್ನಲಾಗಿದೆ.
ಯಾವಾಗ ಆಫೀಸ್ ಅವರು ದೂರವಾಣಿ ಕರೆ ಮಾಡಿ ಈ ರೀತಿ ಹೇಳಿದ ತಕ್ಷಣ ತಮ್ಮ ನಿಲುವು ಸಡಿಲಿಸಿದ ಸದಾನಂದ ಗೌಡ ಅವರು ಇದೀಗ ಪಕ್ಷದ ರಾಜ್ಯ ನಾಯಕತ್ವವನ್ನು ಸಂಪರ್ಕಿಸಿ ತಾವು ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗುತ್ತೇನೆ ಅಲ್ಲದೆ ರಾಜ್ಯದ ಇತರ ಕಡೆಯೂ ಪ್ರಚಾರಕ್ಕೆ ಬರಲು ಸಿದ್ಧವಿದ್ದು ಈ ಬಗ್ಗೆ ಪಕ್ಷ ನೀಡುವ ಸೂಚನೆ ಪಾಲಿಸುತ್ತೇನೆ ಎಂದು ಹೇಳಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.