ಬಾಹುಬಲಿ ಖ್ಯಾತಿಯ ಪ್ರಭಾಸ್ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರ ಸಲಾರ್ (Salaar) ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜುಗೊಂಡಿದೆ.
ಹೊಂಬಾಳೆ ನಿರ್ಮಾಣದ ಈ ಸಿನಿಮಾದ ಕುರಿತು ಬಾಕ್ಸ್ ಆಫೀಸ್‌ನಲ್ಲಿ ನಾನಾ ರೀತಿಯ ಲೆಕ್ಕಾಚಾರಗಳು ನಡೆಯುತ್ತಿದ್ದರೆ,ಅಭಿಮಾನಿಗಳ ವಲಯದಲ್ಲಿ ಈ ಸಿನಿಮಾದ ಕತೆ ಏನು ?ಪ್ರಭಾಸ್ ರೋಲ್ ಏನು ? ಎಂಬ ಕುರಿತು ದೊಡ್ಡ ಪ್ರಮಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.
ಇದರ ನಡುವೆಯೇ ಇದು ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ತೆರೆ ಕಂಡು ಸೂಪರ್ ಹಿಟ್ ಆದ ಶ್ರೀ ಮುರುಳಿ ಅಭಿನಯದ ಉಗ್ರಂ ರಿಮೇಕ್ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶೇಷವೆಂದರೆ ಉಗ್ರಂ ಸಿನಿಮಾಕ್ಕೂ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದರು.ಈ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗಲಿದೆ ಎನ್ನಲಾಗಿತ್ತು.ಆದರೆ ಅದು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ ಈಗ ಅದೇ ಸಿನಿಮಾ ಸಲಾರ್ ಹೆಸರಲ್ಲಿ ಬೇರೊಂದು ರೂಪದಲ್ಲಿ ಬಂದಿದೆ ಎನ್ನಲಾಗುತ್ತಿದೆ.
ಉಗ್ರಂನಂತೆ ಸಲಾರ್ ನಲ್ಲೂ (Salaar) ಇಬ್ಬರೂ ಸ್ನೇಹಿತರ ಕಥೆ ಇದೆ. ತಾಯಿಗೆ ನೀಡಿದ ಆಣೆ ಇದೆ.ಅಂಡರ್ ವರ್ಲ್ಡ್ ಕತೆ ಅದರ ಜೊತೆಗೆ ಕೆಜಿಎಫ್ ಶೈಲಿಯ ದೊಡ್ಡ ಸಾಮ್ರಾಜ್ಯ, ಆ ಸಾಮ್ರಾಜ್ಯಕ್ಕಾಗಿ ಹೊಡೆದಾಡುವ ಗುಂಪುಗಳಿವೆ ಎನ್ನಲಾಗಿದೆ. ಹೀಗಾಗಿ ಇದು ಉಗ್ರಂ ರಿಮೇಕ್ ಅಥವಾ ಉಗ್ರಂ ಸ್ಟೋರಿ ಲೈನ್ ಇರುವ ಕೆಜಿಎಫ್ ನೆರಳು ಬೆಳಕಿನ ಸಿನಿಮಾ ಎಂಬ ಮಾತುಗಳಿದ್ದು,ಇದು ತಿಳಿಯಬೇಕಾದರೆ ಥಿಯೆಟರ್ ನಲ್ಲಿ ಸಿನಿಮಾ ನೋಡಬೇಕು.