ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ವಾಹನ ಸಂಚಾರ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ.ಸುಗಮ ಸಂಚಾರಕ್ಕೆ ಸರ್ಕಾರ ಹಲವು ಪ್ರಯೋಗ ಮಾಡಿದರೂ ಅವುಗಳಿಂದ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ.
ಸಂಚಾರ ದಟ್ಟಣೆಯಿಂದ ಬೇಸತ್ತಿರುವ ಜನತೆ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬಂಡವಾಳ ಹೂಡಿಕೆ, ವ್ಯಾಪಾರ ವಹಿವಾಟಿಗೂ ಇದರಿಂದ ಧಕ್ಕೆಯಾಗಿದೆ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದಕ್ಕಾಗಿ, ಸಂಚಾರ ವಿಭಾಗದ ಹೊಣೆಯನ್ನು ನಿರ್ವಹಿಸಲು ವಿಶೇಷ ಕಮಿಷನರ್ ಹುದ್ದೆ ಸೃಷ್ಟಿಸಲಾಗಿದೆ ಈ ಹುದ್ದೆಗೆ ಎಡಿಜಿಪಿ ಎಂ.ಎ. ಸಲೀಂ ಅವರನ್ನು ನೇಮಕ ಮಾಡಿದೆ.
ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಂ.ಎ. ಸಲೀಂ ಅವರು ಈ ಹಿಂದೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿ ಕೆಲಸ ಮಾಡಿದ್ದರು.ಈ ವೇಳೆ ನಗರದ ಸಂಚಾರ ದಟ್ಟಣೆ ನಿವಾರಿಸಲು
ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರು.ಇವುಗಳಲ್ಲಾ ಉತ್ತಮ ಫಲಿತಾಂಶ ನೀಡಿದ್ದವು.ಹೀಗಾಗಿ ಸದ್ಯ ಕಾಡುತ್ತಿರುವ ಸಮಸ್ಯಗಳಿಗೆ ಪರಿಹಾರ ಕಲ್ಪಿಸಬಹುದು ಎಂಬ ಭಾರಿ ನಿರೀಕ್ಷೆಯೊಂದಿಗೆ ಸಲೀಂ ಅವರನ್ನೇ ವಿಶೇಷ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಎಂ.ಎ.ಸಲೀಂ ಅವರ ನೇಮಕವನ್ನು ಬೆಂಗಳೂರಿಗರು ತುಂಬಾ ಸಂತೋಷದಿಂದ ಸ್ವಾಗತಿಸಿ ದ್ದಾರೆ.
ಸಂಚಾರಿ ಪೊಲೀಸ್ ಮತ್ತು ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣಗಳಿಗೆ ಸಲೀಂ ಅವರನ್ನು ಸ್ವಾಗತಿಸಿ ಸಾವಿರಾರು ಪೋಸ್ಟ್ ಗಳು ಬಂದಿವೆ. ಬಹುತೇಕರು ಸಲೀಂ ಅವರು ಬಂದಿರುವ ಹಿನ್ನೆಲೆಯಲ್ಲಿ ನಗರದ ರಸ್ತೆ ಸಂಚಾರ ಸಮಸ್ಯೆಗಳಿಗೆ ಬ್ರೇಕ್ ಬೀಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಲಹೆಗಳಿಗೂ ಕೊರತೆಯೇನಿಲ್ಲ.ಬಹುತೇಕರು ಸಂಚಾರಿ ಪೊಲೀಸ್ ಸಂಪನ್ಮೂಲ ಸಂಗ್ರಹ ಇಲಾಖೆಯಲ್ಲ. ಸಂಚಾರಿ ಪೊಲೀಸರು ಸುಗಮ ಸಂಚಾರ ವ್ಯವಸ್ಥೆಗೆ ಗಮನ ಹರಿಸುವ ಬದಲು ದಂಡ ವಸೂಲಿ ಗುರಿಯಾಗಿಸಿಕೊಂಡಿದ್ದಾರೆ.ಸಿಗ್ನಲ್ ಸೇರಿ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಮರಗಳ ಮರೆಯಲ್ಲಿ, ಗೋಡೆ ಪಕ್ಕದಲ್ಲಿ, ವಿದ್ಯುತ್ ಕಂಬಗಳ ಮರೆಯಲ್ಲಿ ಅವಿತಿರುತ್ತಾರೆ.ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನೇ ಕಾಯುತ್ತಿದ್ದು ತಕ್ಷಣವೇ ದಂಡ ವಿಧಿಸುತ್ತಾರೆ.ಮೊದಲು ಇದನ್ನು ನಿಯಂತ್ರಿಸಿ. ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕಾಣುವಂತೆ ನಿಂತರೆ ಸಾಕು ಸಂಚಾರಿ ನಿಯಮ ಉಲ್ಲಂಘನೆ ಶೇ 80ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಹಾಗೆಯೇ ರಸ್ತೆಗಳಲ್ಲಿ ,ಹೋಟೆಲ್, ವಾಣಿಜ್ಯ ಸಮುಚ್ಚಯಗಳ ಬಳಿ ಪಾರ್ಕಿಂಗ್ ದೊಡ್ಡ ಸಮಸ್ಯೆ. ಇಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಸಂಚಾರಿ ಪೊಲೀಸರು ಸಿಗ್ನಲ್ ಗಳಲ್ಲಿ ದಂಡ ವಸೂಲಿಗೆ ಕಾಯದೆ ಈ ಕಡೆ ಗಮನ ಹರಿಸಿದರೆ ಸಂಚಾರ ಸಮಸ್ಯೆಗೆ ದೊಡ್ಡ ಪರಿಹಾರ ಸಿಗಲಿದೆ ಎಂದು ಸಲಹೆ ಮಾಡಿದ್ದಾರೆ.
ಈ ಎಲ್ಲವೂಗಳಿಗೆ ಪ್ರತಿಕ್ರಿಯೆ ನೀಡಿರುವ ಸಲೀಂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಸಿಗ್ನಲ್ ಗಳಲ್ಲಿ ದಂಡ ವಸೂಲಿಗೆ ಕಾಯುವ ಸಂಚಾರಿ ಪೊಲೀಸರ ಸಂಖ್ಯೆ ಕಡಿಮೆಯಾಗಿದೆ.ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆಯ ಅವಧಿಯಲ್ಲಿ ಸರಕು ಸಾಗಾಣಿಕೆಯ ಭಾರಿ ವಾಹನಗಳ ನಿಷೇಧ ಜನ ಮೆಚ್ಚುಗೆ ಗಳಿಸಿದೆ.ಈ ಮೂಲಕ ಉತ್ತಮ ಆರಂಭ ಪಡೆದಿರುವ ಟ್ರಾಫಿಕ್ ಸಲೀಂ ಬೆಂಗಳೂರು ಜನರ ನಿರೀಕ್ಷೆ ಹುಸಿಗೊಳಿಸದಿರಲಿ ಎನ್ನುವುದು ವಾರ್ತಾಚಕ್ರ ದ ಹಾರೈಕೆ…