ಹೊಸಪೇಟೆ- ಆಗದು ಎಂದು ಕೈಕಟ್ಟಿ ಕುಳಿತರೆ ಅಥವಾ ಅವರಂತೆ ನಮಗೇಕೆ ಇಲ್ಲ ಎಂದು ಇಲ್ಲದ ಭಾಗ್ಯವ ನೆನೆದು ದುಃಖಿತರಾಗುವುದರಿಂದ ಯಾವುದೇ ಪ್ರಯೋಜನವಿಲ್ಲ .ಬದಲಿಗೆ ದೊರೆತ ಅವಕಾಶ ಬಳಸಿಕೊಂಡು ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಹಿರಿಯ ಪತ್ರಕರ್ತ ಹಾಗೂ ಸಮೂಹ ಶಕ್ತಿಯ ಪ್ರೇರಕ ದೀಪಕ್ ತಿಮ್ಮಯ ಹೇಳಿದರು.
ವಿಜಯನಗರ ಜಿಲ್ಲೆಯ ತಿಮ್ಮಲಾಪುರ ಸಮೂಹ ಶಕ್ತಿ ಘಟಕ ಆಯೋಜಿಸಿದ್ದ ಅಂತರ್ ಜಿಲ್ಲಾ ವಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾನೇಕೆ ಅದಾನಿಯಂತಿಲ್ಲ ಎಂದು ಕೊರಗುವುದನ್ನು ಬಿಡಬೇಕು ಅದರ ಬದಲಿಗೆ ಅದಾನಿಯಂತೆ ನನಗೂ ಕೈಕಾಲು ಗಳಿವೆ ಮಾನಸಿಕವಾಗಿ ದೈಹಿಕವಾಗಿ ಸಬಲನಾಗಿದ್ದೇನೆಂದು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು ಎಂದು ಹೇಳಿದರು.
ಕೆಲವು ವ್ಯಕ್ತಿಗಳು ದೈಹಿಕವಾಗಿ ಸಬಲರಾಗಿದ್ದು, ಮಾನಸಿಕವಾಗಿ ದುರ್ಬಲರಾಗಿರುತ್ತಾರೋ.ಅಯ್ಯೋ ನನ್ನಿಂದ ಇದು ಸಾಧ್ಯವಿಲ್ಲ ಎಂಬ ನಕಾರಾತ್ಮಕ ಮನೋಭಾವ ಹೊಂದಿರುತ್ತಾರೆ ಇದನ್ನು ಬಿಟ್ಟು ಇದು ನನ್ನಿಂದ ಸಾಧ್ಯ ಎಂಬ ಮನೋಭಾವ ಹೊಂದಿರಬೇಕು ಆಗ ಮಾತ್ರ ಏನಾದರೂ ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ವ್ಯಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ.ಇದನ್ನು ಆತ ಒಂದು ಶಕ್ತಿಯಾಗಿ ಪರಿವರ್ತಿಸುವ ಗುಣ ಹೊಂದಿರಬೇಕು ಇದಕ್ಕಾಗಿ ತನ್ನಂತೆ ಆಲೋಚಿಸುವ ವ್ಯಕ್ತಿಗಳನ್ನು ಒಟ್ಟುಗೂಡಿಸಿ ಸಮೂಹವಾಗಿ ಮುನ್ನುಗ್ಗಿದರೆ ಬದಲಾವಣೆ ಸಾಧ್ಯ ಇಂತಹ ಬದಲಾವಣೆ ಸಮಾಜದ ಒಳಿತಾಗಾಗಿ ಇರಬೇಕಾಗುತ್ತದೆ. ಇಂತಹ ಒಳಿತಿನ ಮನಸ್ಸು ಬರುವುದು ಕ್ರೀಡೆಗಳಿಂದ ಆಟವಾಡುವ ವ್ಯಕ್ತಿಯಲ್ಲಿ ಸ್ರವಿಸುವ ಹಾರ್ಮೋನ್ ಗಳು ಆರೋಗ್ಯಕರ ಮನಸ್ಸನ್ನು ಕೊಡುತ್ತವೆ ಇಂತಹ ಮನಸ್ಸುಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯಕ್ ಮಾತನಾಡಿ ಸಮೂಹ ಶಕ್ತಿ ಸಂಘಟನೆ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲದೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ನಾನು ಇಂತಹ ಸಂಘಟನೆಯ ಸದಸ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಸದಾ ಸಮಾಜಮುಖಿಯಾಗಿ ಚಿಂತಿಸಿ ಆ ನಿಟ್ಟಿನಲ್ಲಿ ಕಾರ್ಯ ನ್ಮೋಖವಾಗುವ ಈ ಸಂಘಟನೆಗೆ ಎಲ್ಲರೂ ಸೇರುವ ಮೂಲಕ ಇದರ ಭಾಗವಾಗಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮೂಹ ಶಕ್ತಿಯ ಮುಖಂಡ ದೇವರಾಜ್ ತಮ್ಮ ಸಂಘಟನೆ ಅಶಕ್ತರ ನೆರವಿಗೆ ಧಾವಿಸುತ್ತದೆ.ಸಾಮಾಜಿಕ ಭದ್ರತಾ ಯೋಜನೆ ಸೇರಿದಂತೆ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವರನ್ನು ಫಲಾನುಭವಿಗಳಾಗುವಂತೆ ಮಾಡುತ್ತಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಅಗತ್ಯವಿರುವ ಜನರಿಗೆ ತಲುಪಿಸುವ ದೃಷ್ಟಿಯಿಂದ ಜನರು ಮತ್ತು ಸರ್ಕಾರದ ನಡುವೆ ಸಮನ್ವಯ ಸೇತುವೆಯಂತೆ ಕೆಲಸ ಮಾಡುತ್ತಿದೆ.ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಳ್ಳವರ ನೆರವು ಪಡೆದು ಆರೋಗ್ಯ ಶಿಬಿರ, ಕ್ರೀಡಾಕೂಟ ಸೇರಿದಂತೆ ಹಲವು ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ತಿಳಿಸಿ ಸಂಘಟನೆಯ ಸದಸ್ಯರಾಗುವ ಮೂಲಕ ಆಸಕ್ತರೆಲ್ಲರೂ ಸಮೂಹ ಶಕ್ತಿಯ ಭಾಗವಾಗಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ತಿಮ್ಮಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪಂಚಾಯತ್ ಸದಸ್ಯರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಛಲವಿದ್ದರೆ ಏನು ಬೇಕಾದರೂ ಮಾಡಬಹುದು-ದೀಪಕ್ ತಿಮ್ಮಯ
Previous Articleಜನವರಿ 6ಕ್ಕೆ ಥಗ್ಸ್ ಆಫ್ ರಾಮಘಡ
Next Article New Yearಗೆ ಕಟ್ಟುನಿಟ್ಟು Covid Rules