ಬೆಂಗಳೂರು, Sep 4 : ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಗಣೇಶೋತ್ಸವದ ಸಂಭ್ರಮ ಕಳೆದ ಐದು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ವಿವಿಧ ರೀತಿಯ ಅಲಂಕಾರ, ಪೂಜೆಗಳಿಂದ ಸಂತೃಪ್ತನಾದ ವಿಘ್ನ ನಿವಾರಕನನ್ನು ಖುಷಿಯಿಂದ ಕಳುಹಿಸಿಕೊಡಲಾಯಿತು.
ಅದರಲ್ಲೂ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರಾದ್ಯಂತ ಗಣೇಶ ವಿಸರ್ಜನಾ ಮಹೋತ್ಸವಂತೂ ಅದ್ದೂರಿಯಾಗಿ ನೆರವೇರಿತು.ವಿವಿಧ ಬಡಾವಣೆಗಳಲ್ಲಿ ವಿರಾಜಮಾನನಾಗಿದ್ದ ಗಣಪತಿಯನ್ನು ಸಾಮೂಹಿಕ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು.ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತ ಬಾಂಧವರು ಇಂದೇ ಸಂತ ಮೇರಿಯಮ್ಮ ಉತ್ಸವ ಕೂಡಾ ಆಯೋಜಿಸಿದ್ದರು.ಎರಡೂ ಕೂಡಾ ಅತ್ಯಂತ ಸಾಂಗವಾಗಿ ನೆರವೇರುವ ಮೂಲಕ ಹೊಸ ದಾಖಲೆ ಸೃಷ್ಟಿಯಾಯಿತು.
ಅದರಲ್ಲೂ ಗಣೇಶ ವಿಸರ್ಜನೆಗಾಗಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ವಿಶೇಷ ಆಸಕ್ತಿ ವಹಿಸಿ ಈ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದರು. ಬಹುತೇಕ ಎಲ್ಲಾ ಪೆಂಡಾಲ್ ಗಳಿಗೂ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರು ನಂತರ ಮೆರವಣಿಗೆಯಲ್ಲಿ ಸಾಗಿದರು
ಅತ್ಯಂತ ಸೂಕ್ಷ್ಮ ಪ್ರದೇಶವೆಂದೇ ಪರಿಗಣಿಸಲ್ಪಟ್ಟ ಟ್ಯಾನರಿ ರಸ್ತೆ, ಪಾಟರಿ ಟೌನ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮೆರವಣಿಗೆ ಸಾಗಿತು ಎಲ್ಲೆಡೆ ಖುಷಿಯಿಂದ ಹೆಜ್ಜೆ ಹಾಕಿದ ಕೆ.ಜೆ.ಜಾರ್ಜ್ ಅವರು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು.
ಆಗಾಗ್ಗೆ ಸುರಿಯುವ ತುಂತುರು ಮಳೆಯಲ್ಲೇ ಮೆರವಣಿಗೆ ಸಾಗಿತು.ಯಾವುದೇ ಸಣ್ಣ ಅಹಿತಕರ ಘಟನೆಯೂ ಇಲ್ಲದೆ ಮೋದಕಹಸ್ತನ ವಿಸರ್ಜನೆ ಕಾರ್ಯ ಸಂಪನ್ನವಾಯಿತು.ಇಂತಹದೊಂದು ಕಾರ್ಯಕ್ಕೆ ಸಹಕರಿಸಿದ ಕ್ಷೇತ್ರದ ಎಲ್ಲಾ ಜನರು, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಶಾಸಕ ಜಾರ್ಜ್ ಧನ್ಯವಾದ ಅರ್ಪಿಸಿದರೆ,ಕ್ಷೇತ್ರದಲ್ಲಿ ಇಂತಹದೊಂದು ಕಾರ್ಯಕ್ರಮ ಆಯೋಜಿಸುವಲ್ಲಿ ಶ್ರಮಿಸಿದ ತಮ್ಮ ಶಾಸಕರಿಗೆ ಜನತೆ ಕೃತಜ್ಞತೆ ಅರ್ಪಿಸಿದ್ದಾರೆ.
Previous Articleಪ್ರತಿಭಟನೆಯ ವೇದಿಕೆಯಲ್ಲಿ ರಾಹುಲ್ ಅಭಿನಂದಿಸಿದ ಡಿಕೆ
Next Article ಕಾಂಗ್ರೆಸ್ ಶಕ್ತಿ ಪ್ರದರ್ಶನ