ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಪಹಾರಕೂಟದ ಮೂಲಕ ಅಧಿಕಾರ ಹಸ್ತಾಂತರ ಕುರಿತಾದ ವಿಚಾರಕ್ಕೆ ಇತಿ ಶ್ರೀ ಹಾಡಿದ ಬೆನ್ನಲ್ಲೇ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಬಿಡುವುದು ಖಚಿತ. ಅದು 30 ತಿಂಗಳಾದ ನಂತರ ಆಗಬಹುದು ಅಥವಾ ಸ್ವಲ್ಪ ಸಮಯದ ನಂತರವೂ ಆಗಬಹುದು ಅವರು ಅಧಿಕಾರ ಬಿಡುವುದಂತೂ ನಿಶ್ಚಿತ. ಆದರೆ,ಅದು ಯಾವಾಗ ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ ಅಧಿಕಾರ ಹಸ್ತಾಂತರ ವಿಚಾರ ಬಗೆಹರಿದಂತಾಗಿದೆ ಎಲ್ಲರೂ ಹೈಕಮಾಂಡ್ ತೀರ್ಮಾನವನ್ನು ಎದುರು ನೋಡುತ್ತಿದ್ದೇವೆ ನಾವು ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅಧಿಕಾರ ಮತ್ತು ರಾಜಕೀಯ ಯಾರಿಗೂ ಶಾಶ್ವತವಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈರಾಗ್ಯದ ಕುರಿತಾದ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಹೇಳಿರುವುದು ನಿಜ ಅಧಿಕಾರ ಯಾರಿಗೂ ಶಾಶ್ವತವಲ್ಲ ಅವರು ತಮ್ಮ ಕುರ್ಚಿಯನ್ನು ಬಿಡಲು ಮಾನಸಿಕವಾಗಿ ಸಿದ್ದರಾಗಿದ್ದಾರೆ. ಅದು ಯಾವಾಗ ಬೇಕಾದರೂ ಆಗಬಹುದು ಅವಧಿ ಮುಗಿದ ನಂತರವಾದರೂ ಅವರ ಕುರ್ಚಿ ಬಿಡಬೇಕಲ್ಲ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಇದನ್ನು ಯಾವ ರೀತಿ ಹೈಕಮಾಂಡ್ ಬಗೆಹರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ ಪಕ್ಷದ ಕಾರ್ಯಕರ್ತರು ಒಳ್ಳೆಯ ವಾತಾವರಣದಲ್ಲಿ ಎಲ್ಲವೂ ಇತ್ಯರ್ಥವಾಗಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಡುವುದು ಖಚಿತ.
Previous Articleಜನ ಸುಮ್ಮನಿದ್ದಾಗ ಏನಾದ್ರೂ ಮಾಡಬೇಕು ಅಂದ್ರೆ ಏನ್ ಮಾಡ್ತಾರೆ?
Next Article ಜರ್ಮನಿ ತಂಡದೊಂದಿಗೆ ಮುಖ್ಯಕಾರ್ಯದರ್ಶಿ ಚರ್ಚೆ

