ಬೆಂಗಳೂರು; 2022 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.
ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ. ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆದಿತ್ತು. ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ 6,83,563 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಅವರಲ್ಲಿ 4,022,697 ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ 61,838 ವಿದ್ಯಾರ್ಥಿಗಳಲ್ಲಿ 14,403 ಮಂದಿ ಪಾಸಾಗಿದ್ದಾರೆ. 21,931 ಖಾಸಗಿ ವಿದ್ಯಾರ್ಥಿಗಳಲ್ಲಿ 5,866 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿಗಳು ವೆಬ್ಸೈಟ್ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಸೆಕೆಂಡ್ ಪಿಯುಸಿ ರಿಸಲ್ಟ್: ಶೇ.61.88 ಫಲಿತಾಂಶ, ವಿದ್ಯಾರ್ಥಿನಿಯರೇ ಮೇಲುಗೈ
Previous Articleಶಾಲೆ ಉಳಿವಿಗಾಗಿ ಶಾಲಾ ಮಕ್ಕಳ ಹೋರಾಟ
Next Article ಕೆಜಿಎಫ್ ಬೆಡಗಿಯ ಮಾರ್ಕ್ಸ್ ಕಾರ್ಡ್ ವೈರಲ್!