ಬೆಂಗಳೂರು,
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಹಾಗೂ ಅವರ ಪುತ್ರ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ವಿಧಾನಸಭಾ ಕ್ಷೇತ್ರ ಶಿಕಾರಿಪುರದಲ್ಲಿ ಅಕ್ರಮ ನಾಡ ಬಂದೂಕು ತಯಾರಿಕೆ ಪ್ರಕರಣ ಬೆಳಕಿಗೆ ಬಂದಿದೆ
ನಾಡ ಬಂದೂಕು ತಯಾರಿಸಿ ಮಾರಾಟಕ್ಕಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಶಿಕಾರಿಪುರ ಸಮೀಪದ ಭದ್ರಾಪುರ ಗ್ರಾಮದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಡಗಿ ವೃತ್ತಿ ಮಾಡುವ ಲಕ್ಷ್ಮಣಪ್ಪ (67) ಬಂಧಿತ ಆರೋಪಿಯಾಗಿದ್ದಾರೆ.ಇವರು ತಮ್ಮ ಮನೆಯಲ್ಲಿ ನಾಡ ಬಂದೂಕು ತಯಾರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದಾಗ ಸಿದ್ಧವಾಗಿರುವ 7ಬಂದೂಕು, ಮರದಲ್ಲಿ ಸಿದ್ಧಪಡಿಸುತ್ತಿರುವ ಮೂರು ಆಕೃತಿ, ಕಬ್ಬಿಣದ ನಳಿಕೆ ಸೇರಿ ಹಲವು ಪರಿಕರ ವಶಕ್ಕೆ ಪಡೆದಿದ್ದಾರೆ.
ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019ರ ಅನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Previous Articleಅಬ್ಬಾ ಎಷ್ಟೊಂದು ಮ್ಯೂಲ್ ಅಕೌಂಟ್‌ಗಳು!
Next Article ಶಾರೂಖ್ ಖಾನ್ ಪುತ್ರನಿಗೆ ರಿಲೀಫ್!


1 ಟಿಪ್ಪಣಿ
ОљОПЃОґО№ПѓОµ ПЂОµПЃО№ПѓПѓПЊП„ОµПЃО± ОјОµ П„Ої Betano. ОџО№ ОЅООїО№ ПЂО±ОЇОєП„ОµП‚ https://betanogame.org/el/ О±ПЂОїО»О±ОјОІО¬ОЅОїП…ОЅ ОП‰П‚ €500 ОјПЂПЊОЅОїП…П‚ ОєО±О№ 100 ОґП‰ПЃОµО¬ОЅ ПЂОµПЃО№ПѓП„ПЃОїП†ОП‚ ПѓОµ ОєОїПЃП…П†О±ОЇО± slots. ОЈП…ОјОјОµП„ОП‡Оµ ПѓОµ live П„ПЃО±ПЂОО¶О№О± О® П„ОїПЂОїОёОП„О·ПѓОµ ПѓП„ОїО№П‡О®ОјО±П„О± О±ОёО»О·ОјО¬П„П‰ОЅ ОјОµ ОµО№ОґО№ОєОП‚ О±ПЂОїОґПЊПѓОµО№П‚. О— ОґПЃО¬ПѓО· ОґОµОЅ ОєОїО№ОјО¬П„О±О№ ПЂОїП„О.