ಹೆಸರಾಂತ ಚಲನಚಿತ್ರ ವಿಮರ್ಶಕ, ಕೌಶಿಕ್ L.M. ಹೃದಯ ಸ್ತಂಭನದಿಂದ ಚೆನ್ನೈನಲ್ಲಿ ನಿಧನರಾದರು. ಅವರ ಹಠಾತ್ ನಿಧನಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಕೌಶಿಕ್ ನಿದ್ರೆ ಮಾಡಿದವರು ಮತ್ತೆ ಎಚ್ಚರಗೊಳ್ಳಲಿಲ್ಲ. ನಿನ್ನೆ ಸಿನಿಮಾ ಸುದ್ದಿಗೋಷ್ಠಿಗೆ ಗೈರಾಗಿದ್ದ ಅವರನ್ನು ಹುಡುಕಿ ಹೋದಾಗ ಮನೆಯಲ್ಲೆ ನಿಧನವಾಗಿರುವುದು ತಿಳಿದುಬಂದಿದೆ. ಅವರು ಕನ್ನಡದ ಕೆಜಿಎಫ್ ಹಾಗು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆಯವರ ಸಿನಿಮಾಗಳನ್ನು ಪ್ರಮೋಟ್ ಮಾಡುತ್ತಿದ್ದರು. ಅಲ್ಲದೆ ಧನ್ವೀರ್ ಅಭಿನಯದ ವಾಮನ ಚಿತ್ರದ ಕುರಿತೂ ಅಪ್ಡೇಟ್ ನೀಡಿದ್ದರು.