Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Site ಖಾಲಿ ಇದ್ರೆ ಅಷ್ಟೇ…!
    ಸುದ್ದಿ

    Site ಖಾಲಿ ಇದ್ರೆ ಅಷ್ಟೇ…!

    vartha chakraBy vartha chakraಮೇ 20, 2022Updated:ಮೇ 20, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಮೇ.20- ನಗರದಲ್ಲಿ ಖಾಲಿಯಿರುವ ನಿವೇಶನಗಳನ್ನು ಗುರುತಿಸಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂ ಹಣ ಸಂಪಾದನೆ‌ ಮಾಡಿದ್ದ ಮೂವರು ಮಹಿಳೆಯರು ಸೇರಿ ಐವರು ಗ್ಯಾಂಗ್ ನ್ನು ಬಂಧಿಸುವಲ್ಲಿ‌ ವಿದ್ಯಾರಣ್ಯಪುರ‌ ಪೊಲೀಸರು ಯಶಸ್ವಿಯಾಗಿದ್ದಾರೆ.
    ಆರ್ ಟಿನಗರದ ಎಲ್ ಆರ್ ಬಂಡೆಯ ಫೈಜ್ ಸುಲ್ತಾನಾ(33)ಸಹಕಾರ ನಗರದ ಶಾಂತಿವನದ ಕಬೀರ್ ಅಲಿಯಾಸ್ ಬಾಬು (35)ಕಲ್ಪನಾ, ಯೋಗೇಶ್ ಹಾಗು ಪೂಜಾ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಅನೂಪ್ ಶೆಟ್ಟಿ ತಿಳಿಸಿದ್ದಾರೆ.
    ಬಂಧಿತರಿಂದ 2.87 ಲಕ್ಷ ನಗದು,102 ಗ್ರಾಂ ಚಿನ್ನಾಭರಣ, ಟಾಟಾ ಸಫಾರಿ ಕಾರು, ನಕಲಿ ಆಧಾರ್, ಮತದಾರರ ಗುರುತಿನ ಪತ್ರ, ಪ್ಯಾನ್ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್ ಗಳ ನಕಲು, ಹಾಗು ನೊಂದಾಯಿತ ಕಾಗದ ಪತ್ರಗಳ ನಕಲನ್ನು ಜಪ್ತಿ ಮಾಡಿ ಹೆಚ್ಚಿನ
    ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
    ನರಸೀಪುರ ಗ್ರಾಮದ ನಿವಾಸಿ ಸುವರ್ಣಮ್ಮ‌ ಅವರಿಗೆ 1988ರಲ್ಲಿ‌ ಎಚ್​ಎಂಟಿ‌ ಲೇಔಟ್​ನಲ್ಲಿ ನಿವೇಶನ ಹಂಚಿಕೆಯಾಗಿತ್ತು. ಅವರ ಹೆಸರಿನಲ್ಲಿ ಕ್ರಯಪತ್ರ ಮಾಡಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ನಿವೇಶನದ ಬಳಿ ತೆರಳಿದ್ದಾಗ ತನ್ನ‌ ಹೆಸರಿನ ಮೂಲಕವೇ ನಿವೇಶನ ಮಾರಾಟ ಮಾಡಿ ವಂಚಿಸಿರುವುದು ಎಂದು ಗೊತ್ತಾಗಿದೆ.‌ ಕೂಡಲೇ ಸುವರ್ಣಮ್ಮ ಅವರು ವಿದ್ಯಾರಣ್ಯಪುರ‌ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್​ಪೆಕ್ಟರ್ ಅನಿಲ್‌ ಕುಮಾರ್ ತನಿಖೆ ಕೈಗೊಂಡಿದ್ದರು.
    ಖಚಿತವಾದ ಮಾಹಿತಿ ಆಧರಿಸಿ ಬಂಧಿಸಿದ ಆರೋಪಿ ಕಬೀರ್ ಅಲಿ ಆರ್.ಟಿ. ನಗರ‌‌ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ನಗರದಲ್ಲಿ ಖಾಲಿಯಿರುವ ನಿವೇಶನಗಳನ್ನು ಗುರುತಿಸಿಕೊಂಡು ಅಕ್ಕಪಕ್ಕದವರನ್ನು ವಿಚಾರಿಸಿ ನಿವೇಶನದ ಮಾಲೀಕರ ಹೆಸರು ಹಾಗು ವಿವರ ಪಡೆದುಕೊಳ್ಳುತ್ತಿದ್ದ. ಅದೇ ರೀತಿ ಸುವರ್ಣಮ್ಮಗೆ ಸೇರಿದ‌ ಸುಮಾರು 65 ಲಕ್ಷ ಮೌಲ್ಯದ ನಿವೇಶನದ ಕಾಗದಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡಿದ್ದ.
    ಸುವರ್ಣಮ್ಮ ‘ನಕಲಿ’ ಮಗಳಾದ ಆರೋಪಿ ಕಲ್ಪನಾಗೆ ದಾನ ಮಾಡಿರುವುದಾಗಿ, ನಂತರ ‘ನಕಲಿ’ ಪತಿ ಮತ್ತೊಬ್ಬ ಆರೋಪಿ ಯೋಗೇಶ್ ನಿವೇಶನ ಹಸ್ತಾಂತರಿಸಿದ್ದ. ಬಳಿಕ ಪ್ರಮುಖ ಆರೋಪಿ ಪೈಜ್ ಸುಲ್ತಾನ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಸಿಕೊಂಡು‌ ಕೆಲ ದಿನಗಳ ಬಳಿಕ ರದ್ದು ಮಾಡಿಸಿ ಆರೋಪಿ ಯೊಗೇಶ್ ಮುಖಾಂತರ ವೆಂಕಟಸ್ವಾಮಿ ಅವರಿಗೆ 65 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಬಂದ ಹಣದಲ್ಲಿ‌ ಸಹಚರರಿಗೆ ಕಮಿಷನ್ ನೀಡಿ ಉಳಿದ ಹಣವನ್ನು ಕಬೀರ್ ಹಾಗು ಫೈಜ್ ಸುಲ್ತಾನ ಮೋಜು ಮಸ್ತಿ ಮಾಡಿರುವುದು ಪತ್ತೆಯಾಗಿದೆ.
    ಪದವೀಧರೆ ಸುಲ್ತಾನ:
    ವಂಚನೆ‌ ಪ್ರಕರಣದಲ್ಲಿ ಪ್ರಮುಖ‌ ಆರೋಪಿಯಾಗಿರುವ ಪೈಜ್ ಸುಲ್ತಾನ ಪದವೀಧರೆಯಾಗಿದ್ದಾಳೆ. ವಿವಾಹಿತೆಯಾಗಿರುವ ಈಕೆ ವೈಯಕ್ತಿಕ ಕಾರಣಕ್ಕಾಗಿ ಪತಿಯನ್ನು ತೊರೆದಿದ್ದಳು‌. ಪರಿಚಿತನಾಗಿದ್ದ ಕಬೀರ್ ಜೊತೆ ಸೇರಿಕೊಂಡು ವಂಚನೆ‌ ಮಾರ್ಗ ಕಂಡುಕೊಂಡಿದ್ದಳು. ಸುಶಿಕ್ಷಿತೆಯಾಗಿರುವ ಈಕೆ ಗ್ರಾಹಕರೊಂದಿಗೆ ಹೇಗೆ‌ ಮಾತನಾಡಬೇಕೆಂದು ಅರಿತಿದ್ದಳು. ಪೊಲೀಸರಿಗೆ ಅನುಮಾನ ಬಾರದಿರಲು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದರು.‌ ಹಣ ಬ್ಯಾಂಕಿನಲ್ಲಿ ಜಮೆಯಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಳು ಎಂದು ತಿಳಿಸಿದರು.
    ಎರಡು ಪ್ರಕರಣ ಪತ್ತೆ:
    ಪ್ರಮುಖ‌ ಆರೋಪಿಯಾಗಿರುವ ಪೈಜ್ ಸುಲ್ತಾನ ಮತ್ತೊಬ್ಬ ಆರೋಪಿ ಕಬೀರ್ ಅಲಿ ಸೇರಿ ಇದೇ ರೀತಿಯಾಗಿ ಸಂಜಯನಗರದ
    ನಿವೇಶನವೊಂದಕ್ಕೆ ನಕಲು ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವೆಸಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಕಲಂ 447, 427, 465, 468, 471, 420, 120(ಬಿ), 34 ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಎರಡು ಪ್ರಕರಣ ಪತ್ತೆಯಾಗಿವೆ.

    Verbattle
    Verbattle
    Verbattle
    nakli asthi patra vidyaranyapura ನಕಲಿ ಆಸ್ತಿ ಪತ್ರ
    Share. Facebook Twitter Pinterest LinkedIn Tumblr Email WhatsApp
    Previous Articleವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ
    Next Article ಕವಿವಿ ತರಗತಿಗಳಿಗೂ ರಜೆ ಘೋಷಣೆ
    vartha chakra
    • Website

    Related Posts

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಜನವರಿ 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನವರಿ 23, 2026

    ಐಜಿಪಿ ರಾಮಚಂದ್ರರಾವ್ ಗೆ ಮತ್ತೊಂದು ಸಂಕಷ್ಟ.

    ಜನವರಿ 22, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RicardoCor ರಲ್ಲಿ ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.
    • Cocoplult ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • mine_qaSa ರಲ್ಲಿ ಚೈನಾ ವೈರಸ್ ಬಗ್ಗೆ ಆತಂಕ ಬೇಡವಂತೆ | China Virus
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಜನವರಿ 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನವರಿ 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನವರಿ 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.