ನವದೆಹಲಿ.
ಮಾಹಿತಿ ಮತ್ತು ಸಂವಹನಕ್ಕೆ ಸಾಮಾಜಿಕ ಜಾಲತಾಣಗಳು ಸ್ಪಂದಿಸುವಷ್ಟು ವೇಗವಾಗಿ ಬೇರೆ ಯಾವುದೇ ಮಾಧ್ಯಮ ಸ್ಪಂದಿಸುವುದಿಲ್ಲ ಈ ಮಾರ್ಗದ ಮೂಲಕ ತಮಗೆ ಬೇಕಾದವರನ್ನು ಬೇಕಾದ ಸಮಯದೊಳಗೆ ತಲುಪವ ಅವಕಾಶ ಲಭ್ಯವಾಗಿದೆ.
ರಾಜಕೀಯ ಪಕ್ಷಗಳಿಗಂತೂ ಸಾಮಾಜಿಕ ಜಾಲತಾಣಗಳು ತಮ್ಮ ಬೆಂಬಲಿಗರು ಮತ್ತು ಮತದಾರರನ್ನು ತಲುಪಲು ಸಿಕ್ಕಿರುವ ವರದಾನವೆಂದು ಭಾವಿಸಲಾಗಿದೆ ಇಲ್ಲಿಯವರೆಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಈ ಮಾಧ್ಯಮವನ್ನು ಬಳಸಿಕೊಂಡು ಕೋಟ್ಯಾಂತರ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಇದರ ಸಮೀಪಕ್ಕೂ ತಲುಪಲು ಸಾಧ್ಯವಾಗಿರಲಿಲ್ಲ
ಆದರೆ ಇದೀಗ ಎಲ್ಲಾ ಲೆಕ್ಕಾಚಾರ ಅದಲು ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಅತ್ಯಂತ ಜನಪ್ರಿಯ ಪಕ್ಷ ಎಂಬುದು ಸಾಬೀತಾಗಿದೆ ‘ಇಂಡಿಯಾ ಟುಡೇ’ ಮಾಡಿರುವ ವರದಿಯ ಪ್ರಕಾರ ಸಾಮಾಜಿಕ ಜಾಲತಾಣಗಳ ಫಾಲೋಯಿಂಗ್ ಸಂಖ್ಯೆಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಆದರೆ ಇಲ್ಲಿ ವ್ಯಕ್ತವಾಗುವ ಪಕ್ಷದ ಅಭಿಪ್ರಾಯಗಳು ಮತ್ತು ನಿಲುವುಗಳು ಕೆಲವೇ ಸಂಖ್ಯೆಯ ಹಿಂಬಾಲಕರನ್ನು ತಲುಪುತ್ತವೆ ಅದು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಆಗುವುದಿಲ್ಲ. ಈ ಮೊದಲು ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಆಗುತ್ತಿದ್ದವು ಕಾಂಗ್ರೆಸ್ ಇದರ ಹತ್ತಿರವೂ ಇರಲಿಲ್ಲ.
ಈಗ ಸಂಪೂರ್ಣ ಚಿತ್ರಣ ಬದಲಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ತಿಳಿಸಿದೆ. ಜಾಲತಾಣಗಳಲ್ಲಿ ಕಾಂಗ್ರೆಸ್ ಪಾಲೊಯರ್ ಗಳು ಸಂಖ್ಯೆ ಕಡಿಮೆ ಇದೆ ಆದರೂ ಇಲ್ಲಿ ವ್ಯಕ್ತವಾಗುವ ಪಕ್ಷದ ನಿಲುವುಗಳು ನಾಯಕರ ಹೇಳಿಕೆಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ತಲುಪುತ್ತದೆ ಹಾಗೆಯೇ ಶೇರ್ ಗಳ ಸಂಖ್ಯೆ ಕೂಡ ಅತ್ಯಂತ ಹೆಚ್ಚಾಗಿದೆ.
ಯುವ ಜನತೆ ಮತ್ತು ವಿದ್ಯಾವಂತ ವರ್ಗ ಕಾಂಗ್ರೆಸ್ ನಿಲುವುಗಳನ್ನು ಜಾಲತಾಣಗಳಲ್ಲಿ ಬೆಂಬಲಿಸುತ್ತಿದೆ ಮತ್ತು ಅದನ್ನು ಹೆಚ್ಚು ಜನರಿಗೆ ಅತ್ಯಂತ ವೇಗವಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣಗಳು ಇಷ್ಟೊಂದು ಪರಿಣಾಮಕಾರಿ ಎಂದು ಕಾಂಗ್ರೆಸ್ ಮೊದಲಿಗೆ ಭಾವಿಸಿರಲಿಲ್ಲ ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದರ ಬಗ್ಗೆ ಸ್ಪಷ್ಟ ಅರಿವಿತ್ತು ಹೀಗಾಗಿ 2009ರಲ್ಲಿಯೇ ಅವರು ಟ್ವಿಟರ್ ಖಾತೆ ಬಳಸತೊಡಗಿದ್ದರು 2011ರ ಸುಮಾರಿಗೆ ಜಾಲತಾಣಗಳ ಎಲ್ಲಾ ಪ್ಲಾಟ್ ಫಾರಂ ಗಳನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಂಡಿತು. 2019ರ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪಕ್ಷ ಎಂಬ ಖ್ಯಾತಿಯನ್ನು ಪಡೆಯಿತು.
ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಜಾಲತಾಣಗಳ ಮೇಲೆ ಅಷ್ಟೊಂದು ಅವಲಂಬನೆಯಾಗಿಲಲಿಲ್ಲ. ರಾಹುಲ್ ಗಾಂಧಿ ಅವರು ಟ್ವಿಟರ್ ಖಾತೆ ತೆರೆದಿದ್ದು 2015ರಲ್ಲಿ ಎಂದು ಹೇಳಿದೆ ಇಂಡಿಯಾ ಟುಡೇ ವರದಿ.
ಇದಾದ ನಂತರ ಕಾಂಗ್ರೆಸ್ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸತೊಡಗಿತು. ಈಗಂತೂ ಜಾಲತಾಣಗಳಲ್ಲಿ ಕಾಂಗ್ರೆಸ್ ಅತ್ಯಂತ ಜನಪ್ರಿಯ ಪಕ್ಷವಾಗಿದೆ ಎಂದು ತಿಳಿಸಿರುವ ಇಂಡಿಯಾ ಟುಡೇ ವರದಿ ಯುವ ಜನತೆ ಮತ್ತು ಸುಶಿಕ್ಷಿತ ವರ್ಗ ಜಾಲತಾಣಗಳಲ್ಲಿ ಕಾಂಗ್ರೆಸ್ ಅಭಿಪ್ರಾಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದೆ ಎಂದು ಹೇಳಿದೆ
Previous Articleದರ್ಶನ್ ಹಿಂಡಲಗಾ ಜೈಲಿನ ಅಂದೇರಿ ಸೆಲ್ ಗೆ ಶಿಫ್ಟ್.?
Next Article ಮದ್ಯ ಮಾರಾಟ ದರ ಇಳಿಕೆ.