ಕೊಲಂಬಿಯಾ; ದಿವಾಳಿತನದಿಂದ ದಿಕ್ಕೆಟ್ಟ ಶ್ರೀಲಂಕಾ ಜನರ ದಂಗೆ ಮಿತಿಮೀರಿದ್ದು, ಅಧ್ಯಕ್ಷ ಗೊಟೆಬಯ ರಾಜಪಕ್ಸೆ ನಿವಾಸವನ್ನು ವಶಪಡಿಸಿಕೊಂಡಿದ್ದಾರೆ.
ಮನೆಗೆ ನುಗ್ಗಿದ ಪ್ರತಿಭಟನಾಕಾರರು ಅಧ್ಯಕ್ಷರ ಭವನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮ ವರದಿ ಮಾಡಿದೆ.
ನಮ್ಮಿಂದ ಕದ್ದ ಹಣವನ್ನು ಈ ದೇಶಕ್ಕೆ ಹಿಂದಿರುಗಿಸುವ ಸಮಯ ಬಂದಿದೆ. ಜನರು ತಮ್ಮ ಮನೆಗಳಲ್ಲಿ ವಿದ್ಯುತ್ ಇಲ್ಲದಿರುವಾಗ ರಾಷ್ಟ್ರಪತಿ ಭವನದಲ್ಲಿ ಎಸಿಗಳು ಕಾರ್ಯನಿರ್ವಹಿಸುತ್ತಿದ್ದವು,” ಎಂದು ಸ್ಥಳೀಯರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎ ಎನ್ಐ ವರದಿ ಮಾಡಿದೆ.
ಇನ್ನು ನಿವಾಸಿ ತೊರೆದ ರಾಜಪಕ್ಸೆ ಎಲ್ಲಿದ್ದಾರೆಂದು ತಿಳಿದಿಲ್ಲ. ಆದರೆ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದ್ದು, ಅಧ್ಯಕ್ಷರು ಬುಧವಾರ ರಾಜೀನಾಮೆ ನೀಡುತ್ತಾರೆ ಎಂದು ಘೋಷಣೆ ಮಾಡಲಾಗಿದೆ.