ಕೊಲಂಬೊ: ಜನರ ಪ್ರತಿಭಟನೆ ತಾರಕಕ್ಕೇರಿರುವ ಶ್ರೀಲಂಕಾದಲ್ಲಿ ದೇಶವ್ಯಾಪಿಯಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮ ಸಿಂಘೆ ಈ ಆದೇಶ ಹೊರಡಿಸಿದ್ದಾರೆ.
ದೇಶದಲ್ಲಿ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಕಾಪಾಡಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಇದನ್ನು ಖಂಡಿಸಿ ಜನರು ಬೀದಿಗೆ ಇಳಿದಿದ್ದಾರೆ.
ಈ ಮಧ್ಯೆ ಶ್ರೀಲಂಕಾದಲ್ಲಿನ ಪರಿಸ್ಥಿತಿ ಕುರಿತು ಭಾರತ ತೀವ್ರ ನಿಗಾ ಇಟ್ಟಿದೆ. ಸರ್ವ ಪಕ್ಷಗಳ ಸಭೆ ಕೂಡ ಕರೆದಿದೆ.