ಬೆಂಗಳೂರು,ಜ.10-
ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟ ಎಂದು ಪರಿಗಣಿಸಲ್ಪಡುವ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ.
ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ -1 ಹಾಗೂ ಮಾರ್ಚ್ 21ರಿಂದ ಏಪ್ರಿಲ್ 04ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ದ್ವೀತೀಯ ಪಿಯು ಎಲ್ಲ ಅಂತಿಮ ಪರೀಕ್ಷೆಯು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿವೆ. ಎಲ್ಲ ವಿಷಯಗಳಿಗೂ ವಿಷಯ ಸಂಕೇತಗಳನ್ನು ಕೊಡಲಾಗಿದ್ದು, ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಗರಿಷ್ಠ 80 ಅಂಕಗಳಿಗೆ ಲಿಖಿತ ಪರೀಕ್ಷೆಗಳು ನಡೆಯಲಿವೆ.
ಪಿಯುಸಿ ವೇಳಾಪಟ್ಟಿ:
ಮಾ.1- ಕನ್ನಡ, ಅರೇಬಿಕ್
ಮಾ.3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾ.4- ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ
ಮಾ.5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.6- ಪರೀಕ್ಷೆ ಇಲ್ಲ
ಮಾ.7- ಇತಿಹಾಸ, ಭೌತಶಾಸ್ತ್ರ
ಮಾ.8- ಪರೀಕ್ಷೆ ಇಲ್ಲ
ಮಾ.9 – ಭಾನುವಾರ ರಜೆ
ಮಾ.10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮಾ.11- ಪರೀಕ್ಷೆ ಇಲ್ಲ
ಮಾ.12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
ಮಾ.13- ಅರ್ಥಶಾಸ್ತ್ರ
ಮಾ.14 – ಪರೀಕ್ಷೆ ಇಲ್ಲ
ಮಾ.15- ಇಂಗ್ಲೀಷ್
ಮಾ.16 – ಭಾನುವಾರ ರಜೆ
ಮಾ.17 – ಭೂಗೋಳ ಶಾಸ್ತ್ರ
ಮಾ.18- ಜೀವಶಾಸ್ತ್ರ, ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮಾ.19- ಹಿಂದೂಸ್ಥಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್,
ಮಾ.20- ಹಿಂದಿ
ಎಸ್ ಎಸ್ ಎಲ್ ಸಿ ವೇಳಾಪಟ್ಟಿ:
ಮಾ.21 – ಕನ್ನಡ (ಪ್ರಥಮ ಭಾಷೆಗಳು)
ಮಾ.24 – ಗಣಿತ (ಐಚ್ಛಿಕ-ಸಮಾಜ ಶಾಸ್ತ್ರ)
ಮಾ.26 – ಇಂಗ್ಲೀಷ್ (ದ್ವಿತೀಯ ಭಾಷೆ – ಕನ್ನಡ..)
ಮಾ.29 – ಸಮಾಜ ವಿಜ್ಞಾನ
ಏ.02 – ವಿಜ್ಞಾನ
ಏ.04 – ಹಿಂದಿ (ತೃತೀಯ ಭಾಷೆಗಳು)