ಬೆಂಗಳೂರು: ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ಮೂವರು ಹಾಗು ಜೆಡಿಎಸ್ ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿಗಳು ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ 353.42 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಸೇರಿದಂತೆ 576 ಕೋಟಿ ರೂಪಾಯಿ ಹೊಂದಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪ್ರಭಾಕರ್ ಪರಕಳ ವಾರ್ಷಿಕ ಆದಾಯ ವಿವರ ತಿಳಿದಿಲ್ಲ ಎಂದು ಘೋಷಿಸಿದ್ದಾರೆ.
ಲೆಹರ್ ಸಿಂಗ್ ಸಿರೋಯ್ 2.1 ಕೋಟಿ ರೂಪಾಯಿ ವಾರ್ಷಿಕ ಆದಾಯ ಹೊಂದಿದ್ದಾರೆ. 2016-17ರಲ್ಲಿ ಇವರ ಆಸ್ತಿ ಮೌಲ್ಯ 71.3 ಲಕ್ಷ ರೂಪಾಯಿ ಇತ್ತು. ಚಿತ್ರನಟ ಜಗ್ಗೇಶ್ 4.39 ಕೋಟಿ ರೂಪಾಯಿ ಚರಾಸ್ತಿ ಹಾಗು 13.25 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗು ಪತ್ನಿ ಪರಿಮಳಾ ಹೆಸರಿನಲ್ಲಿ 67.45 ಲಕ್ಷ ರೂಪಾಯಿ ಚರಾಸ್ತಿ ಹೊಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಬ್ಯಾಂಕಿನಲ್ಲಿ 90.59 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಹೊಂದಿದ್ದಾರೆ. 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಚೆನ್ನೈನಲ್ಲಿ 2 ಮನೆಗಳನ್ನು ಹೊಂದಿದ್ದಾರೆ.
ಮನ್ಸೂರ್ ಅಲಿ ಖಾನ್ 8.39 ಕೋಟಿ ರೂಪಾಯಿ ಚರಾಸ್ತಿ ಹಾಗು ಪತ್ನಿ 4.41 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದಾರೆ. 10 ಕಡೆ ಕೃಷಿ ಭೂಮಿ ಹಾಗು 9 ಕಡೆಗಳಲ್ಲಿ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ.
ರಾಜ್ಯಸಭೆ ಅಭ್ಯರ್ಥಿಗಳ ಆಸ್ತಿ ವಿವರ: ಎಲ್ಲರೂ ಕೋಟ್ಯಧೀಶರು!
Previous Articleನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಸಮನ್ಸ್
Next Article ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ