ಖಾಸಗಿ ಚಾನಲ್ ಒಂದು ನಡೆಸಿದ ಕುಟುಕು ಕಾರ್ಯಾಚರಣೆ (Sting Operation) ಯಲ್ಲಿ BCCI ಮುಖ್ಯಸ್ಥ ಚೇತನ್ ಶರ್ಮಾ (Chetan Sharma, BCCI Chief Selector) ನೀಡಿದ ಹೇಳಿಕೆಗಳು ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಕೋಲಾಹಲವನ್ನೇ ಎಬ್ಬಿಸಿವೆ. ಮೈದಾನದ ಮೇಲೆ ಎಲ್ಲವೂ ಸರಿ ಇದ್ದಂತೆ ಕಂಡುಬರುತ್ತಿದ್ದರೂ, ತಂಡದಲ್ಲಿ ಮತ್ತು management ನಲ್ಲಿ ಅಸಮಾಧಾನಗಳಿವೆ ಎಂಬುದು ತಿಳಿದ ವಿಷಯವೇ. ಆದರೆ ಇದೀಗ ಚೇತನ್ ಶರ್ಮಾ ನೀಡಿದ ಹೇಳಿಕೆಗಳು ಅವುಗಳಿಗೆ ಮತ್ತಷ್ಟು ಸ್ಪಷ್ಟನೆಗಳನ್ನು ನೀಡಿವೆ.
ಕುಟುಕು ಕಾರ್ಯಾಚರಣೆಯ ವೇಳೆ ಬಹಿರಂಗಗೊಂಡ ಕೆಲವು ಸ್ಫೋಟಕ ಸತ್ಯಗಳು
- ಆಟಗಾರರು ನಿಷೇಧಿತ ಚುಚ್ಚುಮದ್ದನ್ನು (Fake injections) ತೆಗೆದುಕೊಳ್ಳುತ್ತಾರೆ. ಇದು ಡೋಪಿಂಗ್ (Doping) ಪರೀಕ್ಷೆಯಲ್ಲೂ ಸಹ ಬೆಳಕಿಗೆ ಬರುವುದಿಲ್ಲ. ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಆಡಲು ಅರ್ಹರಿರದಿದ್ದರೂ ಚುಚ್ಚುಮದ್ದು ನೀಡಿ, ಬಲವಂತದಿಂದ ಆಡಿಸಲಾಗಿತ್ತು.
- T20I ಫಾರ್ಮ್ಯಾಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ಬದಲಾಗಿ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ನಾಯಕನಾಗಿ ಮುಂದುವರೆಯಲಿದ್ದಾರೆ.
- ಹಾರ್ದಿಕ್ ಪಾಂಡ್ಯ ಮತ್ತು ಚೇತನ್ ಶರ್ಮಾ ಉತ್ತಮ ಬಾಂಧ್ಯವನ್ನು ಹೊಂದಿದ್ದಾರೆ. ಆಗಾಗ ಇವರೀರ್ವರ ಭೇಟಿ ನಡೆಯುತ್ತಲೇ ಇರುತ್ತದೆ.
- ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಾದ ಶುಭ್ಮನ್ ಗಿಲ್ (Shubman Gill), ಇಶಾನ್ ಕಿಶನ್ (Ishan Kishan), ದೀಪಕ್ ಹೂಡಾ (Deepak Hooda) ಸೇರಿದಂತೆ ಹಲವು ಯುವ ಆಟಗಾರರಿಗೆ ಸ್ಥಾನ ಕೊಡಿಸುವಲ್ಲಿ ಚೇತನ್ ಶರ್ಮಾ ಅವರ ಪಾತ್ರ ದೊಡ್ಡದಿದೆ.
- ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಚೇತನ್ ಶರ್ಮಾ ಅವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ.
- ಆಟಗಾರರ ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಯವರು ರೋಹಿತ್ ಶರ್ಮಾ (Rohit Sharma) ಅವರ ಪರ ವಹಿಸದಿದ್ದರೂ, ವಿರಾಟ್ ನೊಂದಿಗಿನ ಅವರ ಸಂಬಂಧ ಅಷ್ಟೇನು ಚೆನ್ನಾಗಿರಲಿಲ್ಲ.
- ಆದಾಗ್ಯೂ ವಿರಾಟ್ ಕೊಹ್ಲಿ (Virat Kohli), T20I ಫಾರ್ಮ್ಯಾಟ್ ನ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾಗ, ಅವರ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲು ಗಂಗೂಲಿ ವಿರಾಟ್ ಅವರಿಗೆ ಸಲಹೆ ನೀಡಿದ್ದರು.
- ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಡುವೆಯೂ ಕೂಡ ego ಸಮಸ್ಯೆಗಳಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಅಥವಾ ಕೆಲವು ನಿರ್ಣಯಗಳಲ್ಲಿ ಇಬ್ಬರಿಗೂ ಮನಸ್ತಾಪಗಳಾಗುತ್ತಿದ್ದವು.
ಕುಟುಕು ಕಾರ್ಯಾಚರಣೆಯಲ್ಲಿ ಹಲವು ಒಳ ಸತ್ಯಗಳನ್ನು ಬಿಚ್ಚಿಟ್ಟ ಚೇತನ್ ಶರ್ಮಾ ಅವರ ಹೇಳಿಕೆಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ವಿಷಯದ ಕುರಿತಾಗಿ BCCI ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ಎನ್ನುವುದು ಇನ್ನು ತಿಳಿಯಬೇಕಷ್ಟೆ.