ಬೆಂಗಳೂರು,ಮೇ.14- ಗಂಡ, ಹೆಂಡತಿ ಜಗಳ ಉಂಡು ಮಲಗುವರೆಗೂ ಎನ್ನುವ ಗಾದೆ ಮಾತನ್ನು ಸುಳ್ಳಾಗಿಸುವಂತೆ ಇಲ್ಲೊಬ್ಬ ಪತ್ನಿ ಪತಿ ಜೊತೆಗೆ ಜಗಳವಾಡಿ ಸಾಯುತ್ತೇನೆ ಎಂದು ಕೆರೆಯಲ್ಲಿ ಕೂತಿದ್ದು ಆಕೆಯನ್ನು ಹೊರಗೆ ತರಲು ಪೊಲೀಸರು ಹರಸಾಹಸ ನಡೆಸಿದ ಘಟನೆ ಕೋರಮಂಗಲದಲ್ಲಿ ನಡೆದಿದೆ.
ಕೋರಮಂಗಲ 3ನೇ ಬ್ಲಾಕ್‍ನಲ್ಲಿ ವಾಕಿಂಗ್ ಹೋಗುವ ವೇಳೆ ಪತಿ ಜೊತೆ ಪತ್ನಿ ಜಗಳವಾಡಿದ್ದಾರೆ. ನಂತರ ಕೋಪ ಮಾಡಿಕೊಂಡು ಅಕೆ ನಾನು ಸಾಯುತ್ತೇನೆ ಎಂದು ಕೋರಮಂಗಲ ಮೂರನೇ ಬ್ಲಾಕ್ ನಲ್ಲಿರುವ ಕೆರೆಯೊಳಗೆ ಕುಳಿತುಕೊಂಡಿದ್ದಾರೆ.
ನಂತರ ಆಕೆಯನ್ನು ಮನವೊಲಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಯಾರಾದರೂ ಹತ್ತಿರ ಬಂದರೆ ಕೆರೆಯೊಳಗೆ ಮುಳುಗಿ ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ.
ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯ ಮನವೊಲಿಸಿ ಕೆರೆಯಿಂದ ಹೊರಗೆ ಕರೆಸುವಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ.