ಬೆಂಗಳೂರು, ಫೆ.20-
‘IAS ಅಧಿಕಾರಿಯಾಗಿರುವ ನನ್ನ ಪತ್ನಿ ರೋಹಿಣಿ ಸಿಂಧೂರಿ (Rohini Sindhuri) ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ hack ಮಾಡಿ ಎಲ್ಲಾ ವೈಯಕ್ತಿಕ ಫೋಟೋಗಳನ್ನು ಐಜಿಪಿ ಡಿ. ರೂಪಾ (D Roopa) ಅವರು ಕಳವು ಮಾಡಿದ್ದಾರೆ’ ಎಂದು ಪತಿ ಸುಧೀರ್ ರೆಡ್ಡಿ ( Sudheer Reddy) ಅವರು ಬಾಗಲಗುಂಟೆ ಪೊಲೀಸ್ ಠಾಣೆ (Bagalagunte Police Station) ಗೆ ದೂರು ನೀಡಿದ್ದಾರೆ.
ದೂರಿನಲ್ಲಿ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲ ವೈಯಕ್ತಿಕ ಫೋಟೋಗಳನ್ನು ಕದಿಯಲಾಗಿದೆ. ಈ ಬಗ್ಗೆ ರೂಪಾ ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರೂಪಾ ಯಾರು:
ತಮ್ಮನ್ನು ಪ್ರಶ್ನಿಸಲು ಈ ರೂಪಾ ಯಾರು ಎಂದು ಕೇಳಿರುವ ಅವರು ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಯಾವ್ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಮೊದಲು ಹೇಳಿ. ನಾನು ಹುಟ್ಟಿದ್ದು ಇಲ್ಲೇ, ನಾನು ಕನ್ನಡಿಗ. ಆಂಧ್ರಪ್ರದೇಶದಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲ. ನಮ್ಮ ಕುಟುಂಬದ ಎಲ್ಲರೂ ಇಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.