ದೇಶದ ರಾಜಕೀಯ ಚರಿತ್ರೆಯಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ದೊಡ್ಡ ಹೆಸರಾದ ಕ್ಷೇತ್ರ ಎಂದರೆ ಅದು ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರ (Bengaluru South).
ನಿವೃತ್ತರ ಸ್ವರ್ಗ ಬೆಂಗಳೂರು ಎಂಬ ವಿಶೇಷಣಗಳನ್ನು ಒಳಗೊಂಡಿರುವ ಮೂಲ ಬೆಂಗಳೂರಿನ ಎಲ್ಲ ಸೊಗಡನ್ನು ಹಾಸಿ ಹೊದೆದುಕೊಂಡಿರುವ ಈ ಕ್ಷೇತ್ರ ನಗರ ಜೀವನದ ಎಲ್ಲಾ ಪಟ್ಟುಗಳನ್ನು ಒಳಗೊಂಡಿದೆ.
70ರ ದಶಕದಲ್ಲಿ ದೇಶದಲ್ಲಿ ಜಾರಿಯಾದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಧಾನ ಭೂಮಿಕೆ ವಹಿಸಿದ ಈ ಪ್ರದೇಶ ಅಂದಿನ ಕಾಂಗ್ರೆಸ್ ವಿರುದ್ಧದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿತು. ಈ ಕ್ಷೇತ್ರದಲ್ಲಿ ತುರ್ತುಪರಿಸ್ಥಿತಿಯ ನಂತರದಲ್ಲಿ ನಡೆದ ಚುನಾವಣೆಗಳ ಪೈಕಿ ಒಂದು ಚುನಾವಣೆ ಹೊರತುಪಡಿಸಿದರೆ ಉಳಿದೆಲ್ಲ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರೋಧಿ ಅಭ್ಯರ್ಥಿಗಳೇ ಆಯ್ಕೆಯಾಗುತ್ತಾ ಬಂದಿದ್ದಾರೆ.
ತುರ್ತು ಪರಿಸ್ಥಿತಿಯ ನಂತರ ಬೆಂಗಳೂರು ದಕ್ಷಿಣದಲ್ಲಿ ಒಟ್ಟು ಹನ್ನೆರಡು ಚುನಾವಣೆಗಳು ನಡೆದಿವೆ. ಇದರಲ್ಲಿ ಜನತಾ ಪಾರ್ಟಿ ಮೂರು ಮತ್ತು ಕಾಂಗ್ರೆಸ್ ಒಂದು ಬಾರಿ ಗೆದ್ದಿದ್ದನ್ನು ಬಿಟ್ಟರೆ ಉಳಿದ 8 ಅವಧಿಗೆ ಬಿಜೆಪಿ ಜಯಭೇರಿ ಬಾರಿಸಿದೆ ಅದರಲ್ಲೂ ರಾಜ್ಯ ಬಿಜೆಪಿಯ ಪ್ರಭಾವಿ ನಾಯಕ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ದಾಖಲೆಯ ಸತತ ಆರು ಬಾರಿ ಇಲ್ಲಿಂದ ಗೆಲುವನ್ನು ಸಾಧಿಸಿದ್ದರು.
ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಗಳ ಪೈಕಿ 1989ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸಿತ್ತು. ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ಜನತಾ ಪಾರ್ಟಿಯ ವಿ.ಎಸ್.ಕೃಷ್ಣ ಐಯ್ಯರ್ ಅವರನ್ನು ಸೋಲಿಸಿದ್ದರು. ಇದನ್ನು ಬಿಟ್ಟರೆ ಮತ್ತೆ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ.
ಈ ಬಾರಿ ಇಂತಹ ಅಭೇದ್ಯ ಕೋಟೆಯನ್ನು ಭೇದಿಸುವ ವಿಶ್ವಾಸದೊಂದಿಗೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಕಣಕ್ಕಿಳಿದಿದ್ದಾರೆ. ತಮ್ಮ ತಂದೆ ಹಾಗೂ ರಾಜ್ಯದ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಕ್ಷೇತ್ರಾದ್ಯಂತ ಬಿರುಸಿನ ಸಭೆಗಳನ್ನು ನಡೆಸುತ್ತಿರುವ ಸೌಮ್ಯ ರೆಡ್ಡಿ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ.
1991ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಖ್ಯಾತ ಅರ್ಥಶಾಸ್ತ್ರಜ್ಞ ಕೆ.ವೆಂಕಟಗಿರಿ ಗೌಡ ಅವರು ಅಂದು ಕಾಂಗ್ರೆಸ್ಸಿನ ಗುಂಡೂರಾವ್ ಅವರನ್ನು ಸೋಲಿಸಿ, ಇಲ್ಲಿ ಕಮಲ ಅರಳುವಂತೆ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೆ ಬಿಜೆಪಿ ಹಿಂದೆ ತಿರುಗದೇ ಗೆಲುವಿನ ಅಭಿಯಾನವನ್ನು ಮುಂದುವರಿಸಿ
1996ರಲ್ಲಿ ಬಿಜೆಪಿಯು ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತ್ ಕುಮಾರ್ ಅವರನ್ನು ಮೊದಲ ಬಾರಿಗೆ ಇಲ್ಲಿಂದ ಕಣಕ್ಕಿಳಿಸಿತು. ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ವರಲಕ್ಷ್ಮೀ ಗುಂಡೂರಾವ್ ಅವರಿಗೆ ಟಿಕೆಟ್ ನೀಡಿತ್ತು, ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅನಂತ್ ಕುಮಾರ್ ಕೇಂದ್ರ ಬಿಜೆಪಿಯಲ್ಲಿ ಅತ್ಯಂತ ವರ್ಚಸ್ವೀ ನಾಯಕರಾಗಿ ಹೊರಹೊಮ್ಮಿದರು.
ಆನಂತ್ ಕುಮಾರ್ ಸ್ಪರ್ಧಿಸಿದ್ದ ಚುನಾವಣೆಗಳ ಪೈಕಿ ಒಂದು ಬಾರಿ ಹೊರತುಪಡಿಸಿ ಉಳಿದೆಲ್ಲ ಚುನಾವಣೆಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದು ಮಾತ್ರವಲ್ಲ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು ಅಷ್ಟೇ ಅಲ್ಲ ಈ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಪರಿವರ್ತಿಸಿದರು. ಹೀಗಾಗಿ
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಅತ್ಯಂತ ಸುರಕ್ಷಿತ ಎಂದು ಹೇಳಬಹುದಾದ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕೂಡಾ ಒಂದು. ಅನಂತ್ ಕುಮಾರ್ ಅವರ ನಿಧನದ ನಂತರ ಯುವ ಮುಖಂಡ ತೇಜಸ್ವಿ ಸೂರ್ಯ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಎರಡನೇ ಬಾರಿ ಇಲ್ಲಿಂದ ಆಯ್ಕೆ ಬಯಸಿದ್ದು ಈ ಬಾರಿ ಕಾಂಗ್ರೆಸ್ಸಿನ ಸೌಮ್ಯ ರೆಡ್ಡಿ ಅವರಿಂದ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ.
ಬೆಂಗಳೂರು ರಾಜಕಾರಣದ ಮಟ್ಟಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರದು ಅಗ್ರಗಣ್ಯ ಹೆಸರು. ಬೆಂಗಳೂರಿನ ರಾಜಕಾರಣ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ರಾಮಲಿಂಗಾರೆಡ್ಡಿ ಅವರು ಅತ್ಯಂತ ನಿರ್ಣಾಯಕ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಬೆಂಗಳೂರಿನ ಬಹುತೇಕ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ಇವರು ಪರೋಕ್ಷ ಇಲ್ಲವೇ ಪ್ರತ್ಯಕ್ಷವಾಗಿ ಬೀರುವ ಪ್ರಭಾವ ನಿರ್ಣಾಯಕವೆನಿಸುತ್ತಿದೆ.
ಹೀಗಾಗಿ ಕಾಂಗ್ರೆಸ್ ಪಕ್ಷ ಬೆಂಗಳೂರು ದಕ್ಷಿಣವನ್ನು ಕೈವಶ ಮಾಡಿಕೊಳ್ಳುವ ದೃಷ್ಟಿಯಿಂದ ರಾಮಲಿಂಗಾರೆಡ್ಡಿ ಅವರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿತ್ತು ಆದರೆ ಚುನಾವಣೆಗೆ ಸ್ಪರ್ಧಿಸಲು ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ರಾಜಕೀಯವಾಗಿ ಹಲವಾರು ಪಟ್ಟುಗಳನ್ನು ಹಾಕಿ ಬಲ್ಲವರಾಗಿರುವ ರಾಮಲಿಂಗ ರೆಡ್ಡಿ ಈ ಬಾರಿ ಬಿಜೆಪಿಯ ಗೆಲುವಿಗೆ ಯಾವ ರೀತಿಯಾದ ಪ್ರತಿರೋಧ ಒಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಹಲವು ರಾಜಕೀಯ ಪಟ್ಟಗಳನ್ನ ಬಲ್ಲವರಾಗಿರುವ ತೇಜಸ್ವಿ ಸೂರ್ಯ ತಮ್ಮ ಚಿಕ್ಕಪ್ಪ ಹಾಗೂ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಚುನಾವಣೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಬ್ರಾಹ್ಮಣ ಸಮುದಾಯ ಮತ್ತು ಬಿಜೆಪಿ ಪರವಾದ ಮತಗಳನ್ನು ಕ್ರೂಢೀಕರಿಸುವತ್ತ ಗಮನಹರಿಸಿದ್ದಾರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಬಸವನಗುಡಿ, ಜಯನಗರ, ಚಿಕ್ಕಪೇಟೆ, ಬೊಮ್ಮನಹಳ್ಳಿ ಮತ್ತು ಪದ್ಮನಾಭ ನಗರ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಬಿ.ಟಿ.ಎಂ ಲೇಔಟ್, ಗೋವಿಂದರಾಜ ನಗರ, ಮತ್ತು ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ (Bengaluru South) 22,15,489 ಮತದಾರರಿದ್ದರು. ಈ ಪೈಕಿ 11,53,540 ಪುರುಷ ಹಾಗೂ 11,53,540 ಮಹಿಳಾ ಮತದಾರರಿದ್ದಾರೆ. 344 ಮತದಾರರು ತೃತೀಯಲಿಂಗಿಯರಿದ್ದಾರೆ.
ಒಕ್ಕಲಿಗ ಬ್ರಾಹ್ಮಣ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿಯ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಸ್ಥಳೀಯ ವಿಷಯಗಳಿಗಿಂತ ರಾಷ್ಟ್ರೀಯ ಮಟ್ಟದ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ.
ಲೋಕಸಭೆ ಚುನಾವಣೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಹಲವು ನೀತಿಗಳು, ನಾಯಕತ್ವ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಗಳ ಕುರಿತಂತೆ ಕ್ಷೇತ್ರದ ಮತದಾರರು ಹೆಚ್ಚಿನ ಚರ್ಚೆಯಲ್ಲಿ ತೊಡಗುತ್ತಿದ್ದಾರೆ ಹೀಗಾಗಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಸ್ಥಳೀಯ ರಾಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪ್ರತಿಷ್ಠೆ ಚುನಾವಣೆಯಲ್ಲಿ ಕೇಂದ್ರಬಿಂದುವಾಗಿದೆ.
11 ಪ್ರತಿಕ್ರಿಯೆಗಳು
гадание на индийских картах гадание на индийских картах .
автоматические гардины для штор provorota.su .
выведение из запоя https://vyvod-iz-zapoya-rostov11.ru .
вывод из запоя дешево ростов на дону вывод из запоя дешево ростов на дону .
срочный вывод из запоя на дому ростов https://vyvod-iz-zapoya-rostov11.ru .
вывод. из. запоя. ростов. вывод. из. запоя. ростов. .
вывод из запоя ростов-на-дону вывод из запоя ростов-на-дону .
вывод из запоя цены на дому ростов vyvod-iz-zapoya-rostov11.ru .
вывод из запоя стационарно ростов http://www.vyvod-iz-zapoya-rostov11.ru/ .
вывод из запоя капельница ростов вывод из запоя капельница ростов .
anonymous story anonymous story .