ಡೆರೋನ್ ಅಸಿಮೊಗ್ಲು, ಸೈಮನ್ ಜಾನ್ಸನ್, ಜೇಮ್ಸ್ ರಾಬಿನ್ಸನ್ ಎಂಬ ಅಮೆರಿಕನ್ ಆರ್ಥಿಕ ವಿಜ್ಞಾನಿಗಳು 2024ರ ಸಾಲಿನ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಮತ್ತು ಬಹುಮಾನವನ್ನು ಪಡೆದಿದ್ದಾರೆ. ಈ ಪ್ರಶಸ್ತಿ ಪಡೆದಿರುವ ಡೆರನ್ ಮತ್ತು ಸಿಮೋನ್ ಜಾನ್ಸನ್ ಅವರು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧಕರಾಗಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಅವರು ಚಿಕಾಗೋ ಯೂನಿವರ್ಸಿಟಿಯಲ್ಲಿ ರಿಸರ್ಚ್ ನಡೆಸುತ್ತಾರೆ.
ಈ ಮೂವರು ಆರ್ಥಿಕ ತಜ್ಞರು, ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಹಾಗೂ ಅವುಗಳಿಂದ ಪ್ರಗತಿ ಮೇಲೆ ಏನು ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದಾರೆ. ಇವರ ಈ ಸಾಧನೆಗಾಗಿ ನೊಬೆಲ್ ಪುರಸ್ಕಾರ ಲಭಿಸಿದೆ.
ಯಾಕೆ ಕೆಲ ದೇಶಗಳು ಶ್ರೀಮಂತವಾಗಿವೆ ಎಂಬ ಪ್ರಶ್ನೆಗೆ ಈ ಮಾವರು ತಜ್ಞರಿಂದ ಉತ್ತರ…
ವಿವಿಧ ದೇಶಗಳ ನಡುವೆ ಶ್ರೀಮಂತಿಕೆಯಲ್ಲಿ ಯಾಕೆ ದೊಡ್ಡ ಅಂತರ ಇದೆ ಎನ್ನುವ ಪ್ರಶ್ನೆ ಇಟ್ಟುಕೊಂಡು ಈ ಮೂವರು ಆರ್ಥಿಕ ತಜ್ಞರು ಸಂಶೋಧನೆ ನಡೆಸಿದ್ದಾರೆ. ಸಾಮಾಜಿಕ ಸಂಸ್ಥೆಗಳ ರಚನೆಯ ಸ್ವರೂಪ ಮತ್ತು ಅವುಗಳಿಂದ ಆರ್ಥಿಕ ಬೆಳವಣಿಗೆಯ ಮೇಲಾಗುವ ಪರಿಣಾಮಗಳ ಮೇಲೆ ಇವರು ಅಧ್ಯಯನ ನಡೆಸಿ ಪ್ರಸ್ತುಪಡಿಸಿದ್ದಾರೆ.
ಒಂದು ದೇಶದ ಸಮೃದ್ಧಿಗೆ ಸಾಮಾಜಿಕ ಸಂಸ್ಥೆಗಳ ಮಹತ್ವ ಏನು ಎಂಬುದನ್ನು ಇವರು ಮೂರು ಪ್ರಮುಖ ಅಂಶಗಳಲ್ಲಿ ವಿವರಿಸಿದ್ದಾರೆ.
- ಸಮಾಜದಲ್ಲಿ ಸಂಪನ್ಮೂಲಗಳು ಹೇಗೆ ನಿಯೋಜನೆ ಆಗುತ್ತವೆ. ಅವುಗಳನ್ನು ನಿರ್ಧರಿಸುವ ಅಧಿಕಾರ ಯಾರಿಗೆ ಇರುತ್ತದೆ ಎನ್ನುವುದು ಮೊದಲ ಅಂಶ.
- ಜನಸಮುದಾಯದವರು ಒಗ್ಗೂಡಿ, ಆಡಳಿತಾರೂಢ ವರ್ಗಕ್ಕೆ ಸೆಡ್ಡು ಹೊಡೆಯುವ ಅಧಿಕಾರ ಬಳಸುವುದು ಎರಡನೇ ಅಂಶ
- ಮೂರನೇ ಅಂಶವೆಂದರೆ, ಅಧಿಕಾರ ಅನುಭವಿಸುವ ಮೇಲ್ಮಟ್ಟದ ಜನರು ಸಂಪನ್ಮೂಲ ಹಂಚಿಕೆಯ ಅಧಿಕಾರವನ್ನು ಜನಸಾಮಾನ್ಯರಿಗೆ ಒಪ್ಪಿಸುವ ಅನಿವಾರ್ಯ ಸ್ಥಿತಿ ಬರುವುದು.
ಈ ಮೇಲಿನ ಮೂರು ಅಂಶಗಳು ಒಂದು ದೇಶದ ಸಮೃದ್ಧತೆಯ ಮೇಲೆ ಪರಿಣಾಮ ಬೀರಲಿದೆ ಎನ್ನುವ ಥಿಯರಿಯನ್ನು ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ಎ ರಾಬಿನ್ಸನ್ ಅವರು ತಮ್ಮ ಅಧ್ಯಯನದಲ್ಲಿ ನಿರೂಪಿಸಿದ್ದಾರೆ.
ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಬಗ್ಗೆ – ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ನಿಂದ ನೀಡಲಾಗುವ ಪ್ರಶಸ್ತಿ ಇದಾಗಿದ್ದು, ಆರ್ಥಿಕ ವಿಜ್ಞಾನ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿಗೆ ನೊಬೆಲ್ ಫೌಂಡೇಶನ್ನ ಅನುಮೋದನೆ ಇದೆ. ಈ ಕಾರಣಕ್ಕೆ ಇದನ್ನು ಪರೋಕ್ಷವಾಗಿ ನೊಬೆಲ್ ಬಹುಮಾನ ಎಂದೂ ಪರಿಗಣಿಸಲಾಗುತ್ತದೆ.
ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿ ಮತ್ತು ಉದ್ಯಮಿಯ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ.
1969ರಿಂದ ಸ್ವೀಡನ್ನ ಸ್ವೆರಿಗೆಸ್ ರಿಕ್ಸ್ ಬ್ಯಾಂಕ್ ಆರ್ಥಿಕ ವಿಜ್ಞಾನ ವಿಭಾಗದಲ್ಲೂ ಪ್ರಶಸ್ತಿ ನೀಡುತ್ತಿದೆ. ಇದಕ್ಕೆ ನೊಬೆಲ್ ಫೌಂಡೇಶನ್ನ ಅನುಮೋದನೆ ಇದೆಯಾದ್ದರಿಂದ ನೊಬೆಲ್ ಬಹುಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದು ಅಧಿಕೃತ ನೊಬೆಲ್ ಪುರಸ್ಕಾರ ಎನಿಸುವುದಿಲ್ಲ.


3 ಪ್ರತಿಕ್ರಿಯೆಗಳು
Нужен трафик и лиды? https://avigroup.pro/kazan/ SEO-оптимизация, продвижение сайтов и реклама в Яндекс Директ: приводим целевой трафик и заявки. Аудит, семантика, контент, техническое SEO, настройка и ведение рекламы. Работаем на результат — рост лидов, продаж и позиций.
Нужен трафик и лиды? сайт студии avigroup SEO-оптимизация, продвижение сайтов и реклама в Яндекс Директ: приводим целевой трафик и заявки. Аудит, семантика, контент, техническое SEO, настройка и ведение рекламы. Работаем на результат — рост лидов, продаж и позиций.
Продажа тяговых АКБ https://faamru.com для складской техники любого типа: вилочные погрузчики, ричтраки, электрические тележки и штабелеры. Качественные аккумуляторные батареи, долгий срок службы, гарантия и профессиональный подбор.