ಬೆಂಗಳೂರು,ಜೂ.7-ಜಮ್ಮು-ಕಾಶ್ಮೀರದಿಂದ ಪರಾರಿಯಾಗಿ ನಗರಕ್ಕೆ ಬಂದು ಮಸೀದಿಯಲ್ಲಿ ಹೆಸರು ಬದಲಿಸಿಕೊಂಡು, ತಲೆ ಮರೆಸಿಕೊಂಡಿದ್ದ ತಾಲೀಬಾನ್ ಉಗ್ರನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರದ ಓಕಳಿಪುರಂನ ಮಸೀದಿಯೊಂದರಲ್ಲಿ ತಾಲಿಬ್ ಎಂಬ ತಾಲಿಬಾನ್ ಉಗ್ರ ತಾಲಿಕ್ ಎಂಬುದಾಗಿ ಹೆಸರು ಬದಲಿಸಿಕೊಂಡು ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಾಗಿದ್ದನು.
ಹೆಸರು ಬದಲಿಸಿಕೊಂಡು ತಲೆಮರೆಸಿಕೊಂಡ ಉಗ್ರ ತಾಲಿಕ್ ನಗರದಲ್ಲಿ ಅಡಗಿರುವ
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಆತ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಾರಿಯಾಗಿ ಬಂದಿದ್ದ ಉಗ್ರನಿಗೆ ಓಕಳಿಪುರಂನ ಮಸೀದಿಯ ಮುಖ್ಯಸ್ಥ ಅನ್ವರ್ ಪಾಷ ಎಂಬುವರು ಆಶ್ರಯ ನೀಡಿದ್ದರು. ಈತ ಮಸೀದಿಯಲ್ಲಿ ಪಾಠ-ಪ್ರವಚನ ಮಾಡಿಕೊಂಡು ಇದ್ದ ಎಂದು ಹೇಳಲಾಗುತ್ತಿದೆ.
ಇನ್ನೂ ಕಾಶ್ಮೀರದಿಂದ ಪೊಲೀಸ್ ಪತ್ನಿಯನ್ನು ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಈತ ಬಂದಿದ್ದನಂತೆ. ಬೆಂಗಳೂರಿಗೆ ಬಂದ ಬಳಿಕ, ತಾಲಿಬ್ ಎನ್ನುವ ಹೆಸರು ತಾಲಿಕ್ ಎಂದು ಬದಲಾಯಿಸಿಕೊಂಡು ವಾಸಿಸುತ್ತಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Previous Articleತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರಿಂದ ಹತ್ತು ಕೋಟಿ ರೂ. ದೇಣಿಗೆ
Next Article ಮದುವೆ ಬೇಡ ಅಂದಿದ್ದಕ್ಕೆ..!!??