ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಇರುವ ದೇವಾಲಯಗಳನ್ನು ಧ್ವಂಸಗೊಳಿಸಿದ ಮುಸ್ಲಿಂರು ಅವುಗಳ ಜಾಗದಲ್ಲಿ ಮಸೀದಿಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ಇವುಗಳನ್ನು ತೆರವುಗೊಳಿಸಿ ಅವುಗಳನ್ನು ದೇವಾಲಯಗಳಾಗಿ ಪುನರುಜ್ಜೀವನಗೊಳಿಸುವಂತೆ ಆಗ್ರಹಿಸಿ ಕೆಲ ಹಿಂದೂ ಪರ ಸಂಘಟನೆಗಳು ಹೋರಾಟ ಆರಂಭಿಸಿರುವ ಬೆನ್ನಲ್ಲೇ ಪ್ರತಿ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ.
ಬಹುತೇಕ ಹಿಂದೂಪರ ಸಂಘಟನೆಗಳ ಮಾದರಿಯಲ್ಲೇ ಜೈನ ಸಂಘಟನೆಗಳು, ಬೌದ್ಧ ಧರ್ಮೀಯರು, ದಲಿತ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಬೌದ್ಧ ಧರ್ಮದ ಜನಪ್ರಿಯತೆಗೆ ಸಹಿಸದ ಬ್ರಾಹ್ಮಣ ವರ್ಗ, ದೇವರ ವಿಚಾರವಾಗಿ ಮೌನಧರಿಸಿದ ಗೌತಮ ಬುದ್ಧನನ್ನು `ನಾಸ್ತಿಕ’ ಎಂದು ದೂರಿದ್ದಲ್ಲದೆ, ಅವನ ಕೆಲವು ವೈಚಾರಿಕ ನಿಲುವುಗಳನ್ನು ಖಂಡಿಸುವ ಮೂಲಕ ಪ್ರತಿ ಹೋರಾಟ ಆರಂಭಿಸಿದರು ಇದರ ಪರಿಣಾಮವಾಗಿ ನಾಗಾರ್ಜುನಕೊಂಡ ಸೇರಿ ಅನೇಕ ಬೌದ್ಧ ಸ್ವರೂಪಗಳು ನಿರ್ನಾಮಗೊಂಡವು ಎಂದು ಇವರೀಗ ಆರೋಪಿಸತೊಡಗಿದ್ದಾರೆ.
ಶ್ರೀಶೈಲ ಭ್ರಮರಾಂಬಿಕಾ ಸೇರಿ ಹಲವು ದೇವಾಲಯಗಳು ಮೂಲದಲ್ಲಿ ಬೌದ್ಧ ಸ್ತೂಪಗಳಾಗಿವೆ ದೇಶದ ಪ್ರಮುಖ ದೇವಾಲಯಗಳ ವಾಸ್ತುಶಿಲ್ಪ ಶೈಲಿಯನ್ನು ಗಮನಿಸಿದಾಗ ಅವು ಜೈನ ಬಸದಿ ಇಲ್ಲವೇ ಬೌದ್ಧ ಸ್ತೂಪವನ್ನು ಹೋಲುತ್ತವೆ ಹೀಗಾಗಿ ಅವುಗಳನ್ನು ಮತ್ತೆ ಮೂಲ ಸ್ವರೂಪಕ್ಕೆ ತರುವಂತೆ ಅಗ್ರಹಿಸಿ ಹೋರಾಟ ಆರಂಭಿಸಲು ಸಿದ್ದತೆ ನಡೆಯುತ್ತಿದೆ.
ಈ ಸಂಬಂಧ ಸಮಾನ ಮನಸ್ಕ ಸದಸ್ಯರು ಮೈಸೂರು ಹಾಗು ಬೆಂಗಳೂರಿನಲ್ಲಿ ಒಂದೆರಡು ಸಭೆ ನಡೆಸಿದ್ದು ಪೂರ್ವಭಾವಿ ಮಾತುಕತೆ ನಡೆಸಿದ್ದಾರೆ.
ಪ್ರಮುಖವಾಗಿ ಕರಾವಳಿಯ ಮೂಡುಬಿದಿರೆ ಸೇರಿದಂತೆ ಹಲವೆಡೆ ಶಂಕರಾಚಾರ್ಯರ ಬೆಂಬಲಿಗರು ಜೈನ ಬಸದಿಗಳನ್ನು ಧ್ವಂಸಗೊಳಿಸಿ ದೇವಾಲಯಗಳನ್ನು ನಿರ್ಮಿಸಿರುವುದು ಹಲವು ದಾಖಲೆಗಳಲ್ಲಿ ಸಾಬೀತಾಗಿದೆ.ಸ್ವರೂಪವನ್ನು ಧ್ವಂಸಗೊಳಿಸಿ ಶ್ರೀಶೈಲಂ ಸೇರಿದಂತೆ ಹಲವು ದೇವಾಲಯ ನಿರ್ಮಾಣ ಮಾಡಿರುವುದು ಸಹ ಸಾಬೀತಾಗಿದೆ ಹೀಗಾಗಿ ಈ ಎಲ್ಲಾ ದೇವಾಲಯಗಳನ್ನು ತೆರವುಗೊಳಿಸಿ ಸ್ತೂಪ ಮತ್ತು ಬಸದಿಗಳಾಗಿ ಪುನರುಜ್ಜೀವನಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳ ಜೊತೆಗೆ ಕಾನೂನು ಹೋರಾಟಕ್ಕೂ ಸಿದ್ದತೆ ನಡೆಸಿದ್ದು ವಿದ್ಯಮಾನಗಳು ಕುತೂಹಲ ಮೂಡಿಸಿವೆ.
ನಮ್ಮ ದೇಗುಲ ನಮಗೆ ಕೊಡಿ: ಜೈನ, ಬೌದ್ಧರ ಆಗ್ರಹ
Previous Articleಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಪತ್ತೆ..!!
Next Article ಲಡಾಖ್‌ನಲ್ಲಿ ಸೇನಾ ವಾಹನ ನದಿಗುರುಳಿ 7 ಯೋಧರ ಸಾವು