ಪಾರ್ಟಿ ಮಾಡೋದು ತಪ್ಪಾ? ಎಂದು ಕೆಲವರು ಕೇಳಬಹುದು. ಆದರೆ, ಪ್ರಧಾನಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾದರೆ? ಇದು ನಡೆದಿದ್ದು ಫಿನ್ಲ್ಯಾಂಡ್ ನಲ್ಲಿ. ಫಿನ್ಲ್ಯಾಂಡ್ ಪ್ರಧಾನಿ ಸನ್ನ ಮಾರಿನ್ ಈಕೆಯ ವಯಸ್ಸು ಬರೀ 38. ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎನ್ನುವ ಹೆಗ್ಗಳಿಕೆ ಈಕೆಯದು. ಈಕೆಯ ಆಡಳಿತದ ಬಗ್ಗೆ ಅನೇಕ ಪ್ರಶ್ನೆಗಳಿದ್ದರೂ, ಈಗಾಗಲೇ ಆ ದೇಶದಲ್ಲಿ ವಿರೋಧ ಪಕ್ಷದವರು ಈಕೆಯ ಕಾರ್ಯವೈಖರಿ ಮತ್ತು ನಡವಳಿಕೆಯ ಬಗ್ಗೆ ಅನೇಕ ಬಾರಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರಿ ದುಡ್ಡಿನಲ್ಲಿ ದಿನಾ ಬೆಳಗ್ಗಿನ ಉಪಾಹಾರ ಮಾಡುವುದರ ಬಗ್ಗೆ ಆರಂಭವಾದ ಈಕೆಯ ಮೇಲಿನ ದೂರುಗಳು ಈಗ ಆಕೆ ಪಾರ್ಟಿ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ತಾರಕಕ್ಕೇರಿದೆ. ಇತ್ತೀಚೆಗೆ ಸನ್ನ ಮಾರಿನ್ ತನ್ನ ಸ್ನೇಹಿತರೊಡಗೂಡಿ ಫಿನ್ಲ್ಯಾಂಡ್ ದೇಶದ ಓರ್ವ ಪಾಪ್ ಸ್ಟಾರ್ ಜೊತೆಯಲ್ಲಿ ಕುಣಿದು ಕುಪ್ಪಳಿಸಿ ಓರ್ವ ಸಾಮಾನ್ಯ ವ್ಯಕ್ತಿಯಂತೆ ಕುಣಿದಾಡಿರುವುದು ಆ ದೇಶದ ಅನೇಕ ಜನರಿಗೆ ಸರಿ ಕಂಡು ಬಂದಿಲ್ಲ. ಈಕೆ ಡ್ರಗ್ಸ್ ನಶೆಯಲ್ಲಿ ಕುಣಿದಾಡಿರಬಹುದು ಎಂಬ ಆರೋಪವು ಸನ್ನ ಮಾರಿನ್ ಗೆ ಎದುರಾಯಿತು. ನನಗೆ ಆ ವಿಡಿಯೋ ಮಾಡುತ್ತಿರುವುದು ಗೊತ್ತಿತ್ತು. ಆದರೆ, ವಿಡಿಯೋ ಸಾರ್ವಜನಿಕ ವೀಕ್ಷಣೆಗೆ ಹೋಗುತ್ತದೆ ಎನ್ನುವುದು ಗೊತ್ತಿರಲಿಲ್ಲ. ಮತ್ತು ನನ್ನ ಮೇಲೆ ಡ್ರಗ್ಸ್ ಸೇವಿಸುವ ಅಪವಾದವಿರುವುದು ನನಗೆ ಸರಿ ಕಂಡು ಬರುತ್ತಿಲ್ಲ. ಆದರೂ, ಜನರ ಮನಸ್ಸಿನಲ್ಲಿ ಅನುಮಾನವಿರಬಹುದು ಎನ್ನುವ ಕಾರಣಕ್ಕಾಗಿ ನಾನು ಡ್ರಗ್ಸ್ ಟೆಸ್ಟನ್ನು ಮಾಡಿಕೊಂಡಿದ್ದೇನೆ, ಅದರ ಫಲಿತಾಂಶ ಇನ್ನೊಂದು ವಾರದಲ್ಲಿ ಬರಲಿದೆ. ನಾನು ಏನು ಅಕ್ರಮವಾಗಿರುವುದನ್ನು ಮಾಡಿಲ್ಲ, ನಾನು ಪಾರ್ಟಿಗೆ ಹೋಗಬಾರದು, ಕುಣಿಯಬಾರದು ಎಂದೇನಿಲ್ಲ ಎಂದು ಸನ್ನ ಮಾರಿನ್ ಹೇಳಿದ್ದಾರೆ. ಕಡಿಮೆ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದರೆ ಯಾವ ರೀತಿಯಲ್ಲಿ ದುರುಪಯೋಗವಾಗಬಹುದು ಎನ್ನುವುದಕ್ಕೆ ಸನ್ನ ಮಾರಿನ್ ಉದಾಹರಣೆ ಎಂದು ಆಕೆಯ ವಿರೋಧಿಗಳು ಸಾರುತ್ತಿದ್ದಾರೆ.
ಪಾರ್ಟಿಯಲ್ಲಿ ಕುಣಿದು ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾದ ಪ್ರಧಾನಿ!!
Previous Articleಬೇಲಿಯೇ ಎದ್ದು ಹೊಲ ಮೇಯ್ದಂತೆ.. ಶಿಕ್ಷಣ ಇಲಾಖೆ ಕಚೇರಿಯ ಆವರಣದಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಮಾರಾಟ..
Next Article ಹಿಂದೂ ವಿರೋಧಿ ಹೇಳಿಕೆಯಿಂದ ಬೇಸತ್ತು ಮೊಟ್ಟೆ ಎಸೆದೆ…!!