ನವದೆಹಲಿ: ಬೆಂಗಳೂರು ಮತ್ತು ದೆಹಲಿ ಮಧ್ಯೆ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ರೈಲನ್ನು ಹೈಜಾಕ್ ಮಾಡಲಾಗಿದೆ. ತಕ್ಷಣ ನೆರವು ನೀಡಿ ಎಂದು ಪ್ರಯಾಣಿಕನೊಬ್ಬ ಮಾಡಿದ ಟ್ವೀಟ್ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಈ ಟ್ವೀಟ್‌ಗೆ ತಕ್ಷಣ ಸ್ಪಂದಿಸಿದ ರೈಲ್ವೆ ಇಲಾಖೆ, ರೈಲು ಅಪಹರಣವಾಗಿಲ್ಲ. ಮಾರ್ಗ ಬದಲಿಸಲಾಗಿದೆ ಎಂಬ ಸ್ಪಷ್ಟನೆ ನೀಡಿತ್ತು.
ರೈಲು ಹಳಿ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಮಾರ್ಗದ ಬದಲಾಗಿ ಬೇರೆ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆ ಎಂಬ ಸ್ಪಷ್ಟೀಕರಣ ನೀಡಲಾಯಿತು.
ರೈಲ್ವೆ ಇಲಾಖೆಯ ಸ್ಪಷ್ಟೀಕರಣದ ಬಳಿಕ ಪ್ರಯಾಣಿಕರು ನಿಟ್ಟುಸಿರುಬಿಟ್ಟರು.
Previous Articleಪ್ರತಿಭಟನಾಕಾರರಿಂದ ಶ್ರೀಲಂಕಾ ಅಧ್ಯಕ್ಷರ ನಿವಾಸ ಲೂಟಿ
Next Article ನ್ಯಾಯಾಂಗ ನಿಂದನೆ: ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ