ಬೆಂಗಳೂರು,ನ.3- ಬೆಳಕಿನ ಹಬ್ಬ ದೀಪಾವಳಿ (Deepavali) ಸಮೀಪಿಸುತ್ತಿರುವಂತೆಯೇ ಇತ್ತ ಪರಿಸರ ಮತ್ತು ಶಬ್ದಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ದೀಪಾವಳಿ ಹಬ್ಬವನ್ನು ನ.11 ರಿಂದ 15 ರ ವರೆಗೆ ಆಚರಿಸಲಿದ್ದು, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಯಥಾಸ್ಥಿತಿ ಪಾಲನೆ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಅದರಂತೆ ಪಟಾಕಿಯನ್ನು ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಹೊಡೆಯಲು ಅವಕಾಶ ಇರಲಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಹೊಡೆಯಬೇಕು ಎಂದು ಹೇಳಲಾಗಿದೆ.
ನಿಯಮಗಳ ವಿವರ:
ಪಟಾಕಿ ಬಳಕೆ ಸುಪ್ರೀಂ ಕೋರ್ಟ್ ಹಲವು ನಿರ್ದೇಶನಗಳನ್ನ ನೀಡಿದ್ದು, ಪಟಾಕಿ ಮಾರಾಟದ ಮೇಲೆ ಅಧಿಕಾರಿಗಳು ಗಂಭೀರ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಪರಿಶೀಲನೆ ವೇಳೆ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಮಾರುತ್ತಿದ್ದರೆ ಇಡೀ ಗೋದಾಮು ವಶಕ್ಕೆ ಪಡೆಯಬೇಕು. ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಹಸಿರು ಪಟಾಕಿ ಕ್ಯೂಆರ್ ಕೋಡ್ ಚಿಹ್ನೆ ಇಲ್ಲದ ಪಟಾಕಿಗಳನ್ನು ವಶಕ್ಕೆ ಪಡೆಯಬೇಕು. ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು.
ಪಟಾಕಿಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ನವೆಂಬರ್ 5 ರಿಂದ 20 ರ ವರೆಗೆ ನಿರಂತರ ವಾಯುಮಾಲಿನ್ಯ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಮಾಪನದ ಮೂಲಕ ಪರೀಕ್ಷೆ ಮಾಡಬೇಕು. ಹೊರ ರಾಜ್ಯದ ಅನಧಿಕೃತ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ.
ಕಡ್ಡಾಯ ಪಾಲನೆ:
ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪೊಲೀಸರ ಮೂಲಕ ನಿಯಮ ಪಾಲನೆಯ ಬಗ್ಗೆ ಕ್ರಮ ವಹಿಸಬೇಕು.ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ನಿಷೇಧಿತ ಸ್ಥಳಗಳಲ್ಲಿ ಪಟಾಕಿ ಹೊಡೆಯುವಂತಿಲ್ಲ. ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಂಡಳಿ ತಿಳಿಸಿದೆ.


1 ಟಿಪ್ಪಣಿ
?Celebremos a cada creador del destino!
La modernizaciГіn digital impulsa cambios positivos. casas de apuestas sin registro Esto mejora la experiencia. La simplicidad es clave.
Casas de apuestas sin licencia EspaГ±a facilitan jugar desde cualquier lugar con conexiГіn a internet. Algunos jugadores disfrutan de apuestas en deportes alternativos y ligas menos comunes. Las plataformas ofrecen tambiГ©n versiones demo para probar estrategias sin riesgo.
apuestas sin licencia: informaciГіn honesta para apostar mejor casas de – bikesworldrevista.es
?Que la suerte te beneficie con que el destino te brinde emocionantes turnos apasionantes !