ಆಸ್ಟ್ರೇಲಿಯಾ: ಇಲ್ಲಿನ ಆಳ ಸಮುದ್ರದಲ್ಲಿ ಅತಿ ವಿಕಾರದ ಮೀನೊಂದು ಪತ್ತೆಯಾಗಿದೆ.
ಉಬ್ಬಿದ ಕಣ್ಣುಗಳನ್ನು ಹೊಂದಿರುವ ಅತ್ಯಂತ ವಿಕಾರವಾದ ಆಳ ಸಮುದ್ರದ ಜೀವಿಯನ್ನು ಆಗ್ನೇಯ ಆಸ್ಟ್ರೇಲಿಯಾದ ಆಳ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ.
ಈ ವಿಕಾರವಾದ ಮೀನನ್ನು ಹಿಡಿದ ವೃತ್ತಿಪರ ಮೀನುಗಾರರೊಬ್ಬರು ಇದರ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬಹುಶಃ ನಾವು ಈವರೆಗೆ ನೋಡಿದ ಅತ್ಯಂತ ವಿಕಾರವಾದ ಮೀನು ಇದಾಗಿದೆ. ನೋಡಲು ಕೊಳಕು ಎನಿಸಿದರೂ ತಿನ್ನಲು ಬಲು ರುಚಿ ಇರಬಹುದು ಎಂದು ಈ ಫೋಟೋಗೆ ಶೀರ್ಷಿಕೆ ನೀಡಲಾಗಿದೆ. ಸಮುದ್ರದ 1771 ಅಡಿ ಆಳದಲ್ಲಿ ಈ ಮೀನನ್ನು ಹಿಡಿಯಲಾಗಿದೆ. ಇದು ಸುಮಾರು 4 ಕೆಜಿ ತೂಕವನ್ನು ಹೊಂದಿದೆ.