ಬೆಂಗಳೂರು, ಸೆ.19 – ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಲ್ಲಾ ವರ್ಗ ಹಾಗೂ ಸಮುದಾಯಗಳ ವಿಶ್ವಾಸ ಗೆಲ್ಲುವ ದೃಷ್ಟಿಯಿಂದ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಬೇಕೆಂದು ಸಹಕಾರ ಸಚಿವ ರಾಜಣ್ಣ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಸಹಕಾರ ಸಚಿವ ರಾಜಣ್ಣ ಅವರ ಹೇಳಿಕೆಯನ್ನು ಬೆಂಬಲಿಸಿರುವ ಗೃಹ ಸಚಿವ ಡಾ. ಪರಮೇಶ್ವರ್, ಚುನಾವಣೆಯಲ್ಲಿ ಗೆಲ್ಲಲು ಜಾತಿವಾರು ಪ್ರಾತಿನಿಧ್ಯ ನೀಡಿ ಹೆಚ್ಚುವರಿ ಉಪಮುಖ್ಯಮಂತ್ರಿಗಳನ್ನು ಮಾಡಬೇಕು ಎಂಬ ಸಚಿವ ರಾಜಣ್ಣಅವರ ಹೇಳಿಕೆಯನ್ನು ಹೈಕಮಾಂಡ್ ಸರಿಯಾಗಿ ಅರ್ಥೈಸಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಸಿಗುತ್ತೆ ಎಂದರೆ ನನ್ನು ಸೇರಿದಂತೆ ಯಾರು ಬೇಡ ಎನ್ನುವುದಿಲ್ಲ. ಇಲ್ಲಿ ನನ್ನ ವೈಯಕ್ತಿಕ ಪ್ರಶ್ನೆ ಇಲ್ಲ. ಒಂದು ವೇಳೆ ನನಗೆ ಬೇಕು ಎಂದಿದ್ದರೆ ನಾನೇ ನೇರವಾಗಿ ಹೈಕಮಾಂಡ್ ಬಳಿಗೆ ಹೋಗಿ ಉಪಮುಖ್ಯಮಂತ್ರಿ ಮಾಡಿ ಎಂದು ಹೇಳುತ್ತಿದ್ದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ, ಲಿಂಗಾಯಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಜೊತೆಯಲ್ಲಿ ದೃಢವಾಗಿ ನಿಂತಿದ್ದವು.ಆ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಯಾಗಬೇಕು ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ವಾದವನ್ನು ತಾವು ಕೂಡ ಒಪ್ಪುವುದಾಗಿ ಸ್ಪಷ್ಟಪಡಿಸಿದರು.
ನಮ್ಮ ವೈಯಕ್ತಿಕ ಹೇಳಿಕೆಗಳು ಏನೇ ಇದ್ದರೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಸುಪ್ರಿಂ. ಹಾಗಾಗಿಯೇ ಹೈಕಮಾಂಡ್ ಸೂಚನೆ ಕೊಟ್ಟರೆ ಹೆಚ್ಚುವರಿ ಉಪಮುಖ್ಯಮಂತ್ರಿಗಳನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವಿವರಿಸಿದರು.
ಹೈಕಮಾಂಡ್ ರಾಜಣ್ಣ ಅವರ ಹೇಳಿಕೆಯನ್ನು ಗಮನಿಸಬೇಕು. ಉಪಮುಖ್ಯಮಂತ್ರಿಯಾದವರಿಗೆ ಜವಾಬ್ದಾರಿ ನೀಡಿ ನಿಮ್ಮ ಸಮುದಾಯದ ಮತಗಳನ್ನು ಕ್ರೋಢಿಕರಿಸಿ ಎಂದು ಸೂಚನೆ ನೀಡಬಹುದು ಎಂದು ಹೇಳಿದರು.
1 ಟಿಪ್ಪಣಿ
¡Hola buscadores de emociones !
Los slot giros gratis sin depósito están pensados para que conozcas el juego antes de apostar. Aprovecha esta ventaja como nuevo jugador. ¡No necesitas tarjeta!​
Aprovecha esta oferta sin requisitos de pago con 25 giros gratis sin depГіsito al instante.
¡Que tengas magníficas ganancias sorprendentes !