ಬೆಂಗಳೂರು,ಫೆ.5-
ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಪಾವತಿಸುವವರಿಗೆ ಶೇ. 50 ರಿಯಾಯಿತಿ ಆರಂಭಗೊಂಡಿರುವ ಮೂರನೇ ದಿನವೂ ಕೋಟಿಗಟ್ಟಲೆ ರೂ. ದಂಡ ಸಂಗ್ರಹವಾಗಿದೆ. ಫೆ. 3ರಂದು ಈ ವಿನಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗಳಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು. ಮೂರನೇ ದಿನವಾದ ನಿನ್ನೆ ಕೂಡ ಭರ್ಜರಿ ದಂಡ ಪಾವತಿಯಾಗಿದ್ದು, 6,31,77,750 ರೂ. ಸಂಗ್ರಹಗೊಂಡಿದೆ.
ನಿನ್ನೆ ರಾತ್ರಿ 8.30ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಈ ಮೂರು ದಿನಗಳಲ್ಲಿ ಒಟ್ಟು 7,41,048 ಕೇಸ್ ಇತ್ಯರ್ಥಗೊಂಡಿದ್ದು, 22,32,47,750 ರೂ. ದಂಡ ಪಾವತಿಸಲ್ಪಟ್ಟಿದ್ದು, ಇಂದು ಕೂಡ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಸಂಜೆ ವೇಳೆಗೆ 25 ಕೋಟಿ ಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ.
ನಗರದ ಸಂಚಾರ ಪೊಲೀಸ್ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ (Infantry Road, TMC) ದಲ್ಲಿ ಕೌಂಟರ್ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿರುವುದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳತೊಡಗಿರುವುದರಿಂದ ದಂಡ ಪಾವತಿಗೆ ಭಾರಿ ಪ್ರಮಾಣದ ಜನಸಂದಣಿ ಉಂಟಾಗಿದೆ.
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ (Justice B.Veerappa) ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೆ ಶೇ.50 ವಿನಾಯಿತಿ ಸಿಗಲಿದೆ.

10 ಪ್ರತಿಕ್ರಿಯೆಗಳು
mcluck NE online casino McLuck mcluck ID
mcluck NE online casino McLuck mcluck ID
mcluck NE online casino McLuck mcluck ID
mcluck NE online casino McLuck mcluck ID
mcluck NE online casino McLuck mcluck ID
wowvegasus.com offers an astounding no-real-money casino knowledge chock-full with top-tier slots and semi-weekly giveaways. Players attraction the benevolent sign-up bonuses and the faculties to take first prize in redeemable Sweepstakes Coins through diverting gameplay.

Feast your eyes on Sweet Bonanza — a slot full of treats and tremendous multipliers! Free spins sweet bonanza review feature turns good spins into legendary ones. Try it now!