ಸೂರ್ಯನಿಂದ ಭೂಮಿಗೆ ಮೂರು ರೀತಿಯ ಕಿರಣಗಳು ಬರುತ್ತವೆ – ಒಂದು ಬೆಳಕಿನ ಕಿರಣ, ಇನ್ನೊಂದು ಕಿರಣ ಮತ್ತೊಂದು ಅಲ್ಟ್ರಾ ವಯಲೆಟ್ ಕಿರಣ. ಮಾನವನ ಅಸ್ತಿತ್ವಕ್ಕೆ ಮತ್ತು ಆರೋಗ್ಯಕ್ಕೆ ಸೂರ್ಯನ ಬೆಳಕು ಮತ್ತು ಶಾಖದ ಅವಶ್ಯಕತೆ ಇದೆ, ಆದರೆ ಅವುಗಳೊಂದಿಗೆ ಭೂಮಿಯನ್ನು ತಲುಪುವ ಅಲ್ಟ್ರಾ ವಯಲೆಟ್ ಕಿರಣಗಳು ಮಾನವನ ಚರ್ಮಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅಲ್ಟ್ರಾ ವಯಲೆಟ್ ಕಿರಣಗಳು ಸುಲಭವಾಗಿ ಭೂಮಿಯ ಜೀವಗೋಳವನ್ನು ತಲುಪುವುದಿಲ್ಲ ಏಕೆಂದರೆ ಅವು ಸೂರ್ಯನಿಂದ ಹೊರಟು ಭೂಮಿಯನ್ನು ತಲುಪುವ ಸಂದರ್ಭದಲ್ಲಿ ಭೂಮಿಯ ವಾತಾವರಣದಲ್ಲಿ ಸೆರೆಹಿಡಿಯಲ್ಪಟ್ಟು ತಮ್ಮ ಬಲವನ್ನು ಕಳೆದುಕೊಳ್ಳುತ್ತದೆ.
ಆದರೆ ಒಂದು ಪಕ್ಷ ಆ ಕಿರಣಗಳು ನಾವು ಜೀವಿಸುವ ಪದರಕ್ಕೆ ತಲುಪಿದರೂ ಮಾನವ ದೇಹ ಒಂದು ಮಟ್ಟಕ್ಕೆ ಅಲ್ಟ್ರಾ ವಯಲೆಟ್ ಕಿರಣಗಳನ್ನು ಸಹಿಸಲು ಸನ್ನದ್ದವಾಗಿದೆ. ಹಾಗೇ ಚರ್ಮವು ಕೂಡ ಆ ಕಿರಣಗಳ ಘಾಸಿಯನ್ನು ಸಂಭಾಳಿಸಬಹುದು. ಆದರೆ ಅಲ್ಟ್ರಾ ವಯಲೆಟ್ ಕಿರಣಗಳ ಪ್ರಮಾಣ ಜಾಸ್ತಿ ಆದರೆ ಅದರಿಂದ ಮಾನವನ ಚರ್ಮಕ್ಕೆ ದೊಡ್ಡ ರೀತಿಯಲ್ಲಿ ಘಾಸಿಯಾಗುವ ಸಾಧ್ಯತೆ ಇದೆ. ಅಂಥ ಸಂದರ್ಭದಲ್ಲಿ ಜನ ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ಪಡೆಯಬೇಕಾಗುತ್ತದೆ.
ವಿಶೇಷವೆಂದರೆ ಇಂದು ಎಂದರೆ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಅಲ್ಟ್ರಾ ವಯಲೆಟ್ ಕಿರಣಗಳ ಪ್ರಮಾಣ ಅತಿ ಹೆಚ್ಚು ಇದೆ ಎಂದು ವರದಿಯಾಗಿದೆ ಹೀಗಿರುವಾಗ ಜನ ಹೊರಗೆ ನಡೆದಾಡಬೇಕೆಂದರೆ ಮುಖವನ್ನು ಮತ್ತು ದೇಹದ ತೆರೆದ ಭಾಗಗಳಿಗೆ ಸನ್ ಸ್ಕ್ರೀನ್ ಹಚ್ಚಿಕೊಂಡು ಓಡಾಡಿದರೆ ಉತ್ತಮ. ಅವಶ್ಯಕತೆ ಇಲ್ಲದಿದ್ದರೆ ಹೊರಗೆ ಓಡಾಡುವುದು ಸೂಕ್ತವೇ ಅಲ್ಲ ಎನ್ನಲಾಗಿದೆ ಈ ಬಗ್ಗೆ ಮಾಹಿತಿ ಇದ್ದು ಜನ ತಮ್ಮ ಚರ್ಮವನ್ನು ರಕ್ಷಿಸಿಕೊಂಡರೆ ಅಲ್ಟ್ರಾ ವಯಲೆಟ್ ಕಿರಣಗಳಿಂದ ತಮ್ಮ ಚರ್ಮಕ್ಕಾಗುವ ಹಾನಿಯನ್ನು ತಡೆಯಬಹುದು