ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು upsc.gov.inನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದಾಗಿದೆ.
ಸೋಮವಾರ ಪ್ರಕಟಿಸಲಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ಈ ವರ್ಷ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದುಕೊಂಡಿದ್ದಾರೆ. ಶ್ರುತಿ ಸೇಂಟ್ ಸ್ಟಿಫನ್ಸ್ ಕಾಲೇಜು ಹಾಗು ಜೆಎನ್‌ಯುನ ಮಾಜಿ ವಿದ್ಯಾರ್ಥಿನಿ.
ಕರ್ನಾಟಕದ 22 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದಾವಣಗೆರೆಯ ಅವಿನಾಶ್ ಎಂಬುವರು 31ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬೆನಕ ಪ್ರಸಾದ್ 92, ನಿಖಿಲ್ ಬಸವರಾಜ್ ಪಾಟೀಲ್- 139, ಮೆಲ್ವನ್ 118, ವಿನಯ್ ಕುಮಾರ್ 151, ಚಿತ್ತರಂಜನ್ 155,ಅಪೂರ್ವ ಬಸೂರ್ 191, ಮನೋಜ್ ಹೆಗ್ಡೆ 213, ಮಂಜುನಾಥ್ 219, ರಾಜೇಶ್ ಪೊನ್ನಪ್ಪ 222, ಹರ್ಷವರ್ಧನ್ 318, ಗಜಾನನ ಬಾಳೆ 319, ವಿನಯ್ ಕುಮಾರ್ – 352, ಕಲ್ಪಶ್ರೀ 291, ಕ್ಯೂಮರ್ ಉದ್ದೇನ್ ಖಾನ್ 414, ಮೇಘನಾ 425, ಚೇತನ ಕೆ 532, ರವಿನಂದನ್ 455, ಸವಿತಾ 497, ಮೊಹ್ಮದ್ ಷರೀಫ್ 479, ಸಚಿನ್ 682, ಪ್ರಶಾಂತ್ ಕುಮಾರ್ 641, ರಾಘವೇಂದ್ರ 649ನೇ ರ್ಯಾಂಕ್ ಗಳಿಸಿದ್ದಾರೆ