ವಾಷಿಂಗ್ಟನ್.
ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಚಲಾವಣೆಯಲ್ಲಿರುವ ಅಮೆರಿಕಾ ಡಾಲರ್ ಮೇಲೆ ಅಮೆರಿಕದ ‘ಸೆಕ್ರೆಟರಿ ಆಫ್ ಟ್ರೆಷರಿ’ ಅವರ ಸಹಿ, ಬಲ ಭಾಗದಲ್ಲಿ ‘ಟ್ರೆಷರರ್ ಆಫ್ ಯುನೈಟೆಡ್ ಸ್ಟೆಟ್ಸ್’ ಅವರ ಸಹಿ ಇರುತ್ತವೆ.
ಆದರೆ ಈಗ ಇದು ಬದಲಾಗುತ್ತಿದೆ ಡಾಲರ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರ ಮತ್ತು ಸಹಿ ಇರಲಿದೆ ಇದಕ್ಕೆ ಕಾರಣ ಗೊತ್ತೇ.
ಜಗತ್ತಿನ ಹಿರಿಯಣ್ಣ ಎಂದು ಖ್ಯಾತಿ ಪಡೆದಿರುವ
ಅಮೆರಿಕಾ ಈ ವರ್ಷ 250ನೇ ಸ್ವಾತಂತ್ರ್ಯೋತ್ಸವ
ವರ್ಷಾಚರಣೆ ಮಾಡುತ್ತಿದೆ
ಆ ಪ್ರಯುಕ್ತ ಟ್ರಂಪ್ ಅವರ ಭಾವಚಿತ್ರ ಇರುವ 24 ಕ್ಯಾರಟ್ ಗೋಲ್ಡ್ ಕಾಯಿನ್‌ಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಈ ತಿಂಗಳಾರಂಭದಲ್ಲಿ ಅಲ್ಲಿನ ಹಣಕಾಸು ಇಲಾಖೆ ಹೇಳಿತ್ತು. ಇದೀಗ ಅಮೆರಿಕಾ ಕರೆನ್ಸಿ ಡಾಲರ್ ಮೇಲೂ ಕೂಡ ಟ್ರಂಪ್ ಭಾವಚಿತ್ರ ಮತ್ತು ಸಹಿ ಇರಲಿದೆ.
1861ರ ಯುಎಸ್ ಡಾಲರ್ ಕಾಯ್ದೆ ಪ್ರಕಾರ ಡಾಲರ್ ಕರೆನ್ಸಿಯ ಎಡ ಭಾಗದಲ್ಲಿ ಅಮೆರಿಕದ ‘ಸೆಕ್ರೆಟರಿ ಆಫ್ ಟ್ರೆಷರಿ’ ಅವರ ಸಹಿ, ಬಲ ಭಾಗದಲ್ಲಿ ‘ಟ್ರೆಷರರ್ ಆಫ್ ಯುನೈಟೆಡ್ ಸ್ಟೇಟ್ಸ್’ ಅವರ ಸಹಿ ಇರುತ್ತವೆ. ಈ ಬಗ್ಗೆ ಮಾಹಿತಿ ನೀಡಿರುವ ‘ಅಮೇರಿಕಾ ಸೆಕ್ರೆಟರಿ ಆಫ್ ಟ್ರೆಷೇರಿ’ ಸ್ಕಾಟ್ ಬೇಸೆಂಟ್ ಅವರು, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಸರಿ ದಾರಿಗೆ ಬಂದಿದೆ. ಅಭಿವೃದ್ಧಿಯಲ್ಲಿ ಸ್ಥಿರತೆ ಕಂಡಿದೆ. ಸ್ವಾತಂತ್ರ್ಯೋತ್ಸವದ 250ನೇ ವರ್ಷಾಚರಣೆ ಸಂದರ್ಭದಲ್ಲಿ ಟ್ರಂಪ್ ಆಡಳಿತ ಒಂದು ಸುವರ್ಣಯುಗ. ಈ ಸುವರ್ಣಯುಗದಲ್ಲಿ ನಮ್ಮ ಕರೆನ್ಸಿಗಳಲ್ಲಿ ಅವರ ಸಹಿ ಇರುವುದು ಅತ್ಯಂತ ಅರ್ಹವಾದ ವಿಚಾರವಾಗಿದೆ’ ಎಂದು ಹೇಳಿದ್ದಾರೆ.
Previous Articleನೇಪಾಳ ಮಾಜಿ ಪ್ರಧಾನಿ ಬಂಧನ
Next Article ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

