ಬೆಂಗಳೂರು,
ಮಹಾನಗರ ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ ತೆರಳುವ ಮಹಿಳೆಯರು ಇಲ್ಲಿನ ಶೌಚಾಲಯಗಳನ್ನು ಬಳಸುವ ಮೊದಲು ಸಂಪೂರ್ಣ ಎಚ್ಚರ ವಹಿಸುವುದು ಅಗತ್ಯ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೋದ ಮಹಿಳೆಯರು ಇಲ್ಲಿನ ಶೌಚಾಲಯ ಬಳಸಲು ಹೋಗಿದ್ದಾರೆ. ಆದರೆ ಅಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುವ ಕ್ಯಾಮರಾ ಕಂಡು ಬಿಚ್ಚಿಬಿದ್ದಿದ್ದಾರೆ. ತಕ್ಷಣವೇ ಶೌಚಾಲಯದಿಂದ ಹೊರಗೆ ಬಂದ ಕೆಲವು ಮಹಿಳೆಯರು ಮತ್ತು ಯುವತಿಯರು ದೊಡ್ಡದಾಗಿ ಕಿರುಚಾಡಿ ಗಲಾಟೆ ಆರಂಭಿಸಿದ್ದಾರೆ.
ಚಿತ್ರಮಂದಿರದ ಸಿಬ್ಬಂದಿ ತಮ್ಮ ಥಿಯೇಟರ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದಾಗ ಯುವಕನೊಬ್ಬ ಮಹಿಳಾ ಶೌಚಾಲಯಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಯುವಕ ಯಾರು, ಈ ಕೃತ್ಯದ ಹಿಂದಿನ ಉದ್ದೇಶವೇನು, ಈ ಹಿಂದೆ ಇಂತಹ ಕೃತ್ಯಗಳನ್ನು ನಡೆಸಿದ್ದಾನೆಯೇ ಅಥವಾ ಇದು ಮೊದಲ ಬಾರಿಯೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Previous Articleಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?
Next Article ಭಾರತೀಯ ಸೇನೆಯ ‘ಭೈರವ’ ಗೊತ್ತಾ..?
