ನವದೆಹಲಿ: ಕಳೆದ ತಿಂಗಳು ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾದ ಭಾರಿ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ವಿಮಾನಯಾನ ನಿಯಮ ಉಲ್ಲಂಘನೆ ಆರೋಪದಡಿ ಇಂಡಿಗೋ ಸಂಸ್ಥೆಗೆ ₹22.2 ಕೋಟಿ ರೂಪಾಯಿ ದಂಡ ವಿಧಿಸಿದೆ.
ಇದಕ್ಕೂ ಜೊತೆಗೆ, ವಿಮಾನ ಸುರಕ್ಷತೆ ಹಾಗೂ ಸಿಬ್ಬಂದಿ ಕರ್ತವ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಲು ₹50 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರೆಂಟಿ ನೀಡುವಂತೆ ಡಿಜಿಸಿಎ ಸೂಚಿಸಿದೆ. ಸೂಚನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಬಳಿಕವೇ ಈ ಮೊತ್ತ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಆಡಳಿತಾತ್ಮಕ ಕ್ರಮವಾಗಿ, ಇಂಡಿಗೋ ಸಂಸ್ಥೆಯ ಆಪರೇಷನ್ಸ್ ಕಂಟ್ರೋಲ್ ಸೆಂಟರ್‌ನ ಹಿರಿಯ ಉಪಾಧ್ಯಕ್ಷರನ್ನು ತಕ್ಷಣವೇ ಹುದ್ದೆಯಿಂದ ತೆರವುಗೊಳಿಸುವಂತೆ ಡಿಜಿಸಿಎ ಆದೇಶಿಸಿದೆ. ಜೊತೆಗೆ, ಸಂಸ್ಥೆಯ ಸಿಇಒ ಹಾಗೂ ಸಿಒಒ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಕಳೆದ ತಿಂಗಳ ವಿಮಾನ ವೇಳಾಪಟ್ಟಿ ಗೊಂದಲ ಕುರಿತು ನಾಲ್ವರು ಸದಸ್ಯರ ಸಮಿತಿ ನಡೆಸಿದ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
Previous Articleಐಪಿಎಲ್ 2026: ಆರ್‌ಸಿಬಿ ಅಂಗಳಕ್ಕೆ ‘ನಂದಿನಿ’ ಎಂಟ್ರಿ?
Next Article ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

