ಬೆಂಗಳೂರು,
ವಿಧಾನಮಂಡಲದ ಅಧಿವೇಶನ ಮುಗಿಯುತಿದ್ದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆ ತೀವ್ರಗೊಂಡಿದೆ. ಯಾವುದೇ ಸಮಯದಲ್ಲಿ ಹೈಕಮಾಂಡ್ ಈ ಕುರಿತಾದ ಚರ್ಚೆಗೆ ಬರುವಂತೆ ನಾಯಕರಿಗೆ ಕರೆ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣ ವಿಶ್ವಾಸದಲ್ಲಿದೆ. ಈ ನಡುವೆ ಅನೇಕ ಮಂದಿ ಶಾಸಕರು ಹೈಕಮಾಂಡ್ ತಕ್ಷಣವೇ ಬಿಕ್ಕಟ್ಟು ಬಗೆಹರಿಸಬೇಕು ಎಂದು ಹೇಳಿದರೆ ಸದ್ಯದಲ್ಲಿಯೇ ವರಿಷ್ಠರು ಈ ಬಗ್ಗೆ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಅಭಿವೃದ್ಧಿ ಮಂತ್ರಿ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಹೈಕಮಾಂಡ್ ಈಗಾಗಲೇ ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದ್ದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಾಯಕರ ಈ ಮಾತುಗಳು ಹಾಗೂ ಅಧಿವೇಶನ ಸಮಯದಲ್ಲಿ ನಡೆದ ಲಿಂಗಾಯತ ಮತ್ತು ಪರಿಶಿಷ್ಟ ಜಾತಿ ವರ್ಗದ ಶಾಸಕ ಮಂತ್ರಿಗಳ ಪ್ರತ್ಯೇಕ ಸಭೆಗಳು ನಾಯಕತ್ವ ಕುರಿತಾದ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ ಎಂಬ ಸೂಚನೆ ನೀಡಿದೆ. ಈ ಬೆಳವಣಿಗೆಗಳ ನಡುವೆ ಸದ್ದು ಗದ್ದಲವಿಲ್ಲದೆ ಹೈಕಮಾಂಡ್ ಮಟ್ಟದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಬಲ ಲಾಭಿ-ನಡೆಸುತ್ತಿದ್ದಾರೆ. ಯಾವುದೇ ಪ್ರಚೋದನೆ ಉದ್ವೇಗ ಮತ್ತು ಆ ವೇಗಕ್ಕೆ ಒಳಗಾಗದೆ ಅವರು ನಾಯಕತ್ವ ಪಡೆದುಕೊಳ್ಳಲು ಪ್ರಯತ್ನ ಮುಂದುವರಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಸುರ್ಜೇವಾಲಾ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವರ ಜೊತೆ ಈ ಕುರಿತಂತೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಡಿಕೆ ಶಿವಕುಮಾರ್ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ಕೂಡ ಇದೀಗ ಡಿಕೆ ಶಿವಕುಮಾರ್ ಅವರ ಈ ನಡೆಯ ಬಗ್ಗೆ ಕೊಂಚ ಆಸಕ್ತಿ ವಹಿಸಿದ್ದು ಸದ್ಯದಲ್ಲಿಯೇ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿರುವ ಕೆಲವು ಪ್ರಭಾವಿ ಮುಖಂಡರು ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಕುರಿತಾದ ಗೊಂದಲಕ್ಕೆ ಇತಿಶ್ರೀ ಹಾಡುವಂತೆ ರಾಹುಲ್ ಗಾಂಧಿ ಅವರಲ್ಲಿ ಹೇಳಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಈ ವಾರದೊಳಗೆ ಉಭಯ ನಾಯಕರ ಜೊತೆ ಮಾತನಾಡುವ ಸಾಧ್ಯತೆ ಇದೆ ಫೆಬ್ರವರಿ 14ರಂದು ಹಾವೇರಿಯಲ್ಲಿ ನಡೆಯಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶಕ್ಕೆ ರಾಹುಲ್ ಗಾಂಧಿ ಆಗಮಿಸುವ ಸಾಧ್ಯತೆ ಇದ್ದು ಈ ಸಮಾವೇಶ ಮುಗಿದ ನಂತರ ಗೊಂದಲಗಳಿಗೆ ಉತ್ತರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. Create proper image using this image for web news
Previous Articleಜೈಲು ಸುಧಾರಣೆಗೆ ಅಲೋಕ್ ಕುಮಾರ್ ಖಡಕ್ ಕ್ರಮ
Next Article ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ!


2 ಪ್ರತಿಕ್ರಿಯೆಗಳು
Join Betano today and grab a massive welcome bonus to kickstart your winning streak. https://tikitakagm.org/it/app/ Betano: play today, brag tomorrow, withdraw whenever.
Jogue no Mostbet e ganhe 200% extra + 220 free spins logo no primeiro depГіsito – Pix Mostbet , Mostbet – o favorito cassino com bГґnus de 150% + 250 rodadas grГЎtis esperando por vocГЄ .