ಬೆಂಗಳೂರು:
ಮಹಾನಗರ ಬೆಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೊಸ ಯೋಜನೆ ಪ್ರಕಟಿಸಿದ್ದಾರೆ.
ಜಿಬಿಎ ವ್ಯಾಪ್ತಿಗೆ ಬರುವ 10 ಪ್ರಮುಖ ಕೆರೆಗಳಲ್ಲಿ ಪರಿಸರ ಸ್ನೇಹಿ ಬೋಟಿಂಗ್ ನಡೆಸಲು ಮಹೇಶ್ವರ ರಾವ್ ಅವರು ಹಸಿರು ನಿಶಾನೆ ತೋರಿದ್ದಾರೆ.
ಪ್ರವಾಸೋದ್ಯಮ ಉತ್ತೇಜನ ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ 10 ಕೆರೆಗಳಲ್ಲಿ ಬೋಟಿಂಗ್ ಗೆ ಅವಕಾಶ ನೀಡಿ ಅದರಿಂದ ಬರುವ ಆದಾಯದಲ್ಲಿ ಕೆರೆಗಳನ್ನು ನಿರ್ವಹಣೆ ಮಾಡಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಕೆರೆಗಳನ್ನು ಹಸ್ತಾಂತರ ಮಾಡಲು ಅಯುಕ್ತರು ಸೂಚಿಸಿದ್ದಾರೆ.
ಬೋಟಿಂಗ್ ವ್ಯವಸ್ಥೆ ನಡೆಸುವಾಗ ಕೆಲ ಷರತ್ತುಗಳೊಂದಿಗೆ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ತಲಾ ಎರಡು ಕೆರೆಗಳಲ್ಲಿ ಮಾತ್ರ ಬೋಟಿಂಗ್ ನಡೆಸಲು ಅನುಮತಿ ನೀಡಲು ತೀರ್ಮಾನಿಸಿದ್ದಾರೆ.
ಬೆಂಗಳೂರು ಪೂರ್ವ ನಗರಪಾಲಿಕೆಯ ವ್ಯಾಪ್ತಿಯಲ್ಲಿ ವೆಂಗಯ್ಯನ ಕೆರೆ, ರಾಂಪುರ ಕೆರೆ. ಬೆಂಗಳೂರು ದಕ್ಷಿಣ ನಗರಪಾಲಿಕೆಯಲ್ಲಿ
ಬೇಗೂರು ಮತ್ತು ಮಡಿವಾಳ ಕೆರೆಗಳಲ್ಲಿ ಬೋಟಿಂಗ್‌ಗೆ ಅವಕಾಶ ಕಲಿಸಿಕೊಡಲಾಗಿದೆ.
ಈ ಕೆರೆಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಬೋಟಿಂಗ್ ವ್ಯವಸ್ಥೆಯನ್ನು ಕೆಲವು ಷರತ್ತುಗಳೊಂದಿಗೆ ಅನುಮೋದನೆಯನ್ನು ನೀಡಲಾಗಿದೆ.
ಬೋಟಿಂಗ್‌ನಲ್ಲಿ ಪೆಟಲ್ ಹಾಗೂ ಬ್ಯಾಟರಿ ಬೋಟ್‌ಗಳನ್ನು ಮಾತ್ರ ಉಪಯೋಗಿಸಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆಯ ಭೌತಿಕ ರಚನೆಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕೆರೆಯ ನೀರು ಮಲಿನಗೊಳ್ಳದಂತೆ ಕ್ರಮವಹಿಸುವುದು ಹಾಗೂ ಯಾವುದೇ ಪ್ಲಾಸ್ಟಿಕ್ ಬಾಟಲ್ ಗಳನ್ನು ಮತ್ತು ಇತರೆ ಯಾವುದೇ ಪ್ಲಾಸ್ಟಿಕ್ ಮಿಶ್ರಿತ ಸಾಮಾಗ್ರಿಗಳನ್ನು ಕೆರೆಯ ಅವರಣಕ್ಕೆ ಹಾಕದಂತೆ ಕ್ರಮವಹಿಸಬೇಕು.
ಬೋಟಿಂಗ್ ವ್ಯವಸ್ಥೆಯನ್ನು ಕೈಗೊಳ್ಳುವ ಸ್ಥಳದಲ್ಲಿ ತಿಳುವಳಿಕೆ ಫಲಕ ಅಳವಡಿಕೆ ಮಾಡಿ ಸೂಕ್ತ ಸ್ಥಳದಲ್ಲಿ ಕಸದ ಬುಟ್ಟಿ ಇಡಬೇಕು. ಕೆರೆಗಳಲ್ಲಿ ಶೇ.30 ರಷ್ಟು ಮತ್ತು ಅದಕ್ಕಿಂತ ಹೆಚ್ಚು ನೀರು ಸಂಗ್ರಹಗೊಂಡಲ್ಲಿ ಬೋಟಿಂಗ್ ವ್ಯವಸ್ಥೆ ಕೈಗೊಳ್ಳಬೇಕು. ಕೆರೆಗಳ ಕೋಡಿಯಲ್ಲಿ ನೀರು ಹರಿಯುವ ಸಂದರ್ಭದಲ್ಲಿ ಬೋಟಿಂಗ್ ಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ
Previous Articleಹಿಂದೂಗಳು ಮೂರು ಮಕ್ಕಳನ್ನು ಹೆರಬೇಕಂತೆ!
Next Article ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

