ಬೆಂಗಳೂರು,
ಮಹಾನಗರ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾದಕ ವಸ್ತು ಮಾರಾಟ, ಸಾಗಾಣಿಕೆ ಮತ್ತು ಸೇವನೆ ವಿರುದ್ಧ ಸಮರ ಸಾರಿರುವ ಪೊಲೀಸರು ಇದೀಗ ಈ ದಂಧೆಯಲ್ಲಿ ತೊಡಗಿದ್ದ ಇಬ್ಬರು ಇಂಜಿನಿಯರ್ ಗಳು,ಕಾನೂನು ವಿದ್ಯಾರ್ಥಿ,ಬೌನ್ಸರ್ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ಅಮೃತಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಕೋಗಿಲು ಲೇಔಟ್‌ನ ಎರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಕುಶಾಲ್‌ಗೌಡ(23)ರಾಜಾನುಕುಂಟೆಯ ಕಾನೂನು ವಿದ್ಯಾರ್ಥಿ ಶಶಾಂಕ್( 28) ಮರಳವಾಡಿಯ ಬೌನ್ಸರ್ ಸಾಗರ್(29) ದೊಡ್ಡಕಮ್ಮನಹಳ್ಳಿಯ ಕ್ಯಾಬ್ ಚಾಲಕ ವಿಲ್ಸನ್.ಎಸ್(48)ಅಕ್ಷಯನಗರದ ಆಶಿರ್ ಅಲಿ(36) ರಿಯಾಸ್(38)ಬೇಗೂರಿನ ಸಜಾದ್(34) ಎಲೆಕ್ಟ್ರಾನಿಕ್ ಸಿಟಿಯ ಶಿಹಾಬ್.ಕೆ.ಪಿ(30)ದೊಡ್ಡಗಮ್ಮನಹಳ್ಳಿಯ ಅಬ್ದುಲ್ ನಾಸಿರ್(28) ದೇವರಾಜ ಅರಸು ನಗರದ ಸಾಫ್ಟ್‌ವೇರ್ ಇಂಜಿನಿಯರ್ ಅಭಿನವ್.ಡಿ(21) ಎಂದು ಗುರುತಿಸಲಾಗಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳಿಂದ 36 ಸಾವಿರ ನಗದು,3 ಕೆ.ಜಿ ಹೈಡೋ ಗಾಂಜಾ, 50 ಗ್ರಾಂ ಎಂಡಿಎಂಎ, 500 ಗ್ರಾಂ ಚರಸ್, 500 ಎಲ್ಎಸ್ ಡಿ ಸ್ಟ್ರಿಪ್ಸ್ ಗಳು, 10 ಕೆಜಿ ಗಾಂಜಾ, 2 ಕಾರುಗಳು, 14 ಮೊಬೈಲ್ ಗಳು ಸೇರಿ 4 ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಬಂಧಿತರಲ್ಲಿ ಓರ್ವ ದೆಹಲಿ 7 ಮಂದಿ ಕೇರಳದವರು ಸೇರಿದ್ದಾರೆ ಇನ್ನಿಬ್ಬರು ಬೆಂಗಳೂರಿನವರಾಗಿದ್ದು,ಗ್ಯಾಂಗ್ ಕಟ್ಟಿಕೊಂಡು ಕೃತ್ಯದಲ್ಲಿ ತೊಡಗಿದ್ದರು ಎಂದು ಕಮೀಷನರ್ ಹೇಳಿದರು. ಮಾರತ್ ಹಳ್ಳಿಯ ಜಕ್ಕೂರು ರೈಲ್ವೆ ಟ್ರ್ಯಾಕ್ ಬಳಿ ನಾಲ್ವರು ವ್ಯಕ್ತಿಗಳು ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ ಮಾಹಿತಿಯನ್ನಾಧರಿಸಿ ದಾಳಿ ಮಾಡಿ, ಹೊರ ರಾಜ್ಯದ ಇಬ್ಬರು ವ್ಯಕ್ತಿಗಳು ಸೇರಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ವಿದೇಶ ಮತ್ತು ಹೊರ ರಾಜ್ಯದಿಂದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಹೈಡೋ ಗಾಂಜಾ, ಎಂಡಿಎಂಎ. ಚರಸ್, ಎಲ್.ಎಸ್.ಡಿ ಸ್ಪೀಪ್ ಗಳು ಹಾಗೂ ಗಾಂಜಾವನ್ನು ಖರೀದಿಸಿ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಐವರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರಿಂದ ಜಿಕೆಎಕೆ ಮೈದಾನದಲ್ಲಿ 2 ಕೆ.ಜಿ ಹೈಡೋ ಗಾಂಜಾ, 1 ಕಾರು, 8 ಮೊಬೈಲ್ ಗಳು 36 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಮಾಹಿತಿಯ ಮೇರೆಗೆ ಹೊರ ರಾಜ್ಯದ ಓರ್ವನನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ 500 ಎಲ್.ಎಸ್.ಡಿ ಸ್ಪಿಪ್ಟ್, 2 ಕೆ.ಜಿ ಗಾಂಜಾ ಸಮೇತ ವಶಕ್ಕೆ ಪಡೆದುಕೊಂಡು ಬಂಧಿಸಲಾಗಿದೆ ಎಂದು ಹೇಳಿದರು. Need proper image for post this article

