ಇತ್ತೀಚೆಗಷ್ಟೇ ಬಿಡುಗಡೆಯಾದ ಲೈಗರ್ ಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿದ ನಂತರ ನಟ ವಿಜಯ್ ದೇವರಕೊಂಡ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಭಾರತದಾದ್ಯಂತ ಲೈಗರ್ ಅನ್ನು ಪ್ರಚಾರ ಮಾಡಿದ ವಿಜಯ್, ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿದ ನಂತರ ಅಂತಿಮವಾಗಿ ಚಿತ್ರ ಮೂಡಿ ಬಂದಿರುವ ರೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಲೈಗರ್ ವಿಜಯ್ ಅವರ ಪ್ಯಾನ್-ಇಂಡಿಯಾ ಚೊಚ್ಚಲ ಸಿನೆಮಾ ಎಂದು ಗುರುತಿಸಲ್ಪಟ್ಟಿತ್ತು. ಇದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಆದಾಗ್ಯೂ, ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ನೀಡಿದ ಕಳಪೆ ಪ್ರದರ್ಶನವು ವಿಜಯ್‌ಗೆ ಆಘಾತವನ್ನುಂಟುಮಾಡಿದೆ ಎಂದು ಟ್ರ್ಯಾಕ್ ಟಾಲಿವುಡ್ ಅನ್ನು ಉಲ್ಲೇಖಿಸಿ ವರದಿಯಯಾಗಿದೆ.
ಹೈದರಾಬಾದ್‌ನಲ್ಲಿ ಲೈಗರ್ ಅನ್ನು ವೀಕ್ಷಿಸಿದ ನಂತರ ವಿಜಯ್ ದೇವರಕೊಂಡ “ಅತ್ತರು” ಎಂದು ಟ್ರ್ಯಾಕ್ ಟಾಲಿವುಡ್ ಹೇಳಿದೆ. ಪ್ರೇಕ್ಷಕರ ಉತ್ಸಾಹವಿಲ್ಲದ ಪ್ರತಿಕ್ರಿಯೆಯು ಅವರ ಮನಸ್ಥಿತಿಯನ್ನು ಘಾಸಿಗೊಳಿಸಿದೆ. ಲೈಗರ್ ನ ಹಿಂದಿ ಆವೃತ್ತಿಯು ಶುಕ್ರವಾರ ಕೇವಲ ರೂ. 4.50 ಕೋಟಿ ರೂ. ಗಳಿಸಿತ್ತು. ಚಿತ್ರದ ಬಿಡುಗಡೆಯ ದಿನಾಂಕವು ಆಗಸ್ಟ್ 25 ಆಗಿದ್ದರೂ, ಅದು ಗುರುವಾರ ಸೀಮಿತ ಪರದೆಯ ಸಂಖ್ಯೆಯನ್ನು ಹೊಂದಿತ್ತು. ಗುರುವಾರ ಕೇವಲ 1.25 ಕೋಟಿ ರೂ. ಗಳಿಸಿತ್ತು.
ಪುರಿ ಕನೆಕ್ಟ್ಸ್ ಸಹಯೋಗದಲ್ಲಿ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಜಂಟಿಯಾಗಿ ಲಿಗರ್ ಅನ್ನು ನಿರ್ಮಿಸಿದೆ. ಅನನ್ಯ ಪಾಂಡೆ ನಟಿಸಿರುವ ಲೈಗರ್ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.