ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ‘ವಿರಾಟಪುರ ವಿರಾಗಿ’ ಚಿತ್ರದ ಧ್ವನಿ ಸುರಳಿ ಬಿಡುಗಡೆ ಹಾಗೂ ಕುಮಾರೇಶ್ವರ ರಥ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಬಳಿಕ ಧ್ವನಿ ಸುರಳಿ ಬಿಡುಗಡೆ ಮಾಡಿ, ಮಾತನಾಡಿ ‘ಹಾನಗಲ್ ಕುಮಾರಸ್ವಾಮಿಗಳು ೧೨ ಶತಮಾನದ ಆಧ್ಯಾತ್ಮಿಕ ಕ್ರಾಂತಿ ಮಾಡಿದವರು. ವೀರಶೈವ ಲಿಂಗಾಯತ ಸಮುದಾಯವನ್ನು ಎತ್ತಿ ಹಿಡಿದವರು. ಅವರು ಸ್ಥಾಪನೆ ಮಾಡಿರುವ ಶಿವಯೋಗಿ ಮಂದಿರ ಮಹಾನ್ ಸಂಸ್ಥೆಯಾಗಿದೆ. ನಮ್ಮ ಪರಂಪರೆ. ಸಂಸ್ಕಾರವನ್ನು ಅದು ಕಾಪಾಡಿಕೊಂಡು ಬರುತ್ತಿದೆ. ಶಿವಯೋಗಿ ಮಂದಿರ ಜೀಣೋದ್ದಾರಕ್ಕಾಗಿ ಬಿ.ಎಸ್. ಯಡ್ಯೂರಪ್ಪನವರು ಸಿಎಂ ಆಗಿದ್ದ ವೇಳೆ ಅನುದಾನ ನೀಡಿದ್ದರು’ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಸಿ.ಎಂ, ‘ವೀರಶೈವ ಲಿಂಗಾಯತ ಸಮುದಾಯ ಚಲನಶೀಲ ಸಮಾಜ. ಎಲ್ಲರನ್ನೂ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಪ್ರಗತಿಪರವಾಗಿರುವ ಸಮಾಜವಾಗಿದೆ. ಬೆಳಗಾವಿಯ ಗಡಿಭಾಗದಿಂದ ಹಿಡಿದು ಕೊಳ್ಳಗಾಲದವರೆಗೂ ವೀರಶೈವ ಲಿಂಗಾಯತ ಮಠದ ಶಿಕ್ಷಣ ಸಂಸ್ಥೆಗಳನ್ನು ತೆರಯಲಾಗಿದೆ. ಸಿನಮಾ ಒಂದು ಒಳ್ಳೆಯ ಕೆಲಸವಾಗಿದೆ. ಸಂಶೋಧನೆ ಮಾಡಿ ಚಿತ್ರ ಮಾಡಿದ್ಸಾರೆ. ಸಿನಿಮಾದಲ್ಲಿನ ಜೀವನ ಚರಿತ್ರೆ ಎಲರಿಗೂ ಪ್ರೇರಣೆಯಾಗಬೇಕು’ ಎಂದರು ಬಸವರಾಜ್ ಬೊಮ್ಮಾಯಿ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಹಾಗೂ ಅನೇಕ ಮಠಾಧೀಶರು ಉಪಸ್ಥಿತರಿದ್ದರು. ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧರಿತ ಸಿನಿಮಾ ‘ವಿರಾಟಪುರ ವಿರಾಗಿ’ ಸಿದ್ಧವಾಗಿದೆ. ಸಮಾಧಾನ ಸಂಸ್ಥೆ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಹಿನ್ನೆಲೆಯನ್ನು ಸಾರುವುದಕ್ಕಾಗಿ ಕುಮಾರ ಶಿವಯೋಗಿಗಳ ನೆನಪಿನಲ್ಲಿ ‘ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ’ ನಡೆಸಲು ಉದ್ದೇಶಿಸಲಾಗಿದೆ.
ರಾಜ್ಯಾದ್ಯಂತ ಆರು ರಥಗಳು, ಹದಿಮೂರು ದಿನಗಳ ಕಾಲ, ಏಳು ಸಾವಿರ ಕಿಲೋ ಮೀಟರ್ ಪಯಣವನ್ನು ಮಾಡಲಿವೆ. ಈ ರಥಯಾತ್ರೆಯಲ್ಲಿ ಒಟ್ಟು 360 ಸಭೆಗಳನ್ನೂ ಆಯೋಜನೆ ಮಾಡಲಾಗಿದ್ದು, ಒಂದು ಕೋಟಿ ಜನರನ್ನು ಮುಟ್ಟುವ ಗುರಿಯನ್ನು ಹೊಂದಲಾಗಿದೆ ಎಂದು ಲಿಂಗದೇವರು ತಿಳಿಸಿದ್ದಾರೆ. ಡಿಸೆಂಬರ್ 20ರಂದು ಶುರುವಾಗಲಿರುವ ಈ ರಥಯಾತ್ರೆಯು ಜನವರಿ 1 ರಂದು ಗದಗನಲ್ಲಿ ಮುಕ್ತಾಯಗೊಳ್ಳಲಿದೆ.
Previous ArticleElon Musk ಗೆ ತಕ್ಷಣವೇ ಮೂರ್ಖನೊಬ್ಬ ಬೇಕಂತೆ!
Next Article Bharat Jodo ಯಾತ್ರೆ ನಿಲ್ಲಿಸಲು ಕೇಂದ್ರ ಸೂಚನೆ