Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಂಸದ-ಶಾಸಕರೇ ಹೀಗಾದರೆ ಪೊಲೀಸರೇನು ಮಾಡಬೇಕು?
    ಸುದ್ದಿ

    ಸಂಸದ-ಶಾಸಕರೇ ಹೀಗಾದರೆ ಪೊಲೀಸರೇನು ಮಾಡಬೇಕು?

    vartha chakraBy vartha chakraನವೆಂಬರ್ 30, 2022Updated:ನವೆಂಬರ್ 30, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು – ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸುವ ದೃಷ್ಟಿಯಿಂದ ಸಿಸಿಬಿ ಪೊಲೀಸರು ರೌಡಿ ಶೀಟರ್ ಗಳು, ಅಪರಾಧದ ಹಿನ್ನೆಲೆಯ ವ್ಯಕ್ತಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಕಾಲದಿಂದ ಕಾಲಕ್ಕೆ ಅವರ ಮನೆಗಳ ಮೇಲೆ ದಿಡೀರ್ ದಾಳಿ ನಡೆಸಿ ಎಚ್ಚರಿಕೆ ನೀಡುವುದು ಕ್ರಮ ಕೈಗೊಳ್ಳುವುದು ವಾಡಿಕೆ.
    ಮೊನ್ನೆ ಇಂತಹ ಚಟುವಟಿಕೆ ನಡೆದಾಗ ರೌಡಿ ಶೀಟರ್ ಸೈಲೆಂಟ್ ಸುನಿಲ್ ನಾಪತ್ತೆ ಎಂಬ ವರದಿಗಳು ಬಂದಿದ್ದವು.ಅವರ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬರಿಗೈಲಿ ಹಿಂತಿರುಗಿದ್ದರು. ಇದಾದ ಒಂದೇ ವಾರದಲ್ಲಿ ಸಿಸಿಬಿ ಕೇಂದ್ರ ಕಚೇರಿಯ ಅನತಿ ದೂರದಲ್ಲಿ ರಕ್ತದಾನ ಶಿಬಿರ ನಡೆಯತ್ತದೆ ಅದನ್ನು ಆಯೋಜಿಸಿದ ವ್ಯಕ್ತಿ ಸಿಸಿಬಿ ದಾಖಲೆಯಲ್ಲಿ ನಾಪತ್ತೆ.
    ಶಿಬಿರ ಆಯೋಜಿಸಿದ ಸೈಲೆಂಟ್ ಸುನಿಲ್ ಸಂಸದರಾದ ಪಿ.ಸಿ. ಮೋಹನ್, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಉದಯ್ ಗರುಡಾಚಾರ್ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ ಪೊಲೀಸರು ಶಾಸಕ-ಸಂದರಿದ್ದ ಕಾರ್ಯಕ್ರಮಕ್ಕೆ ಭದ್ರತೆ ನೀಡುತ್ತಾರೆ ಅದು ಅವರ ಕರ್ತವ್ಯ ಅಲ್ಲದೆ ಇವರು ಆಡಳಿತ ಪಕ್ಕಕ್ಕೆ ಸೇರಿದ ಕಾರಣ ಮತ್ತಷ್ಟು ಜಾಗ್ರತೆ ವಹಿಸಿದ್ದಾರೆ.
    ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದ
    ನಂತರ ಶಾಸಕರ ಜೊತೆ ಅವರದೇ ಕಾರಿನಲ್ಲಿ ಸುನಿಲ್ ಹೋಗುತ್ತಾರೆ. ರೌಡಿ ಪಟ್ಟಿಯಲ್ಲಿ ಹೆಸರಿದ್ದು, ಪೊಲೀಸ್ ದಾಖಲೆಗಳಲ್ಲಿ ನಾಪತ್ತೆಯಾದ ವ್ಯಕ್ತಿ ಆಡಳಿತ ಪಕ್ಚದ ಚುನಾಯಿತ ಸದಸ್ಯರ ಬೆಂಗಾವಲಿನಲ್ಲಿ ರಾಜಾರೋಷವಾಗಿ ಬಂದು ಹೋಗುತ್ತಾರೆಂದರೆ ಪೊಲೀಸರು ಏನು ಮಾಡಲು ಸಾದ್ಯ.
    ಇಷ್ಟಾಗಿಯೂ ಇಲ್ಲಿರುವ ಪ್ರಶ್ನೆ ಪೊಲೀಸರಿಗೆ ಸಿಗದ ವ್ಯಕ್ತಿ ಶಾಸಕ- ಸಂಸದರಿಗೆ ಸಿಕ್ಕಿದ್ದು ಹೇಗೆ..?
    ಸಿಸಿಬಿ ಕೇಂದ್ರ ಕಚೇರಿ ಪಕ್ಕದಲ್ಲೇ ರಕ್ತದಾನ ಶಿಬಿರ ಆಯೋಜಿಸಿದರೂ ಪೊಲೀಸರಿಗೆ ಗೊತ್ತಾಗಲಿಲ್ಲವೆ..?
    ಇಂತಹ ‌ಶಿಬಿರಗಳಿಗೆ ಪೊಲೀಸ್ ಅನುಮತಿ ಪಡೆಯಬೇಕಲ್ಲವೆ..?
    ಶಾಸಕ-ಸಂಸದರು ಪಾಲ್ಗೊಳ್ಳುವ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿಯಿರುವುದಿಲ್ಲವೆ..?
    ಸಿಸಿಬಿ ಪೊಲೀಸ್ ನ ಗುಪ್ತದಳ ಹಾಗೂ ಮಾಹಿತಿ ಸಂಗ್ರಹ ಪಡೆ ನಾಪತ್ತೆಯಾದ ರೌಡಿ ಶೀಟರ್ ಗಾಗಿ ಹುಡುಕಾಟ ನಡೆಸುವುದಿಲ್ಲವೆ..?
    ಇನ್ನೂ ಶಾಸಕರು ಆತ ನನ್ನ ಸ್ನೇಹಿತ. ಆದರೆ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿ ಎಂದು ಗೊತ್ತಿಲ್ಲ ಎಂದಿದ್ದಾರೆ
    ತಮ್ಮ ಜೊತೆಗೆ ತನ್ನ ಕಾರಿನಲ್ಲಿ ಬರುವ ಸ್ನೇಹಿತ ಯಾರೆಂದು ಗೊತ್ತಿಲ್ಲದಷ್ಟು ಅಮಾಯಕರೆ ಈ ಶಾಸಕರು..? ಅಂದ ಹಾಗೆ ಈ ಶಾಸಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದವರ ಮಗ.
    ಹಿಂದೊಮ್ಮೆ ಇದೇ ಸಿಸಿಬಿ ಪೊಲೀಸರು ನಡೆಸಿದ ರೌಡಿ ಪರೇಡ್ ವೇಳೆ ಹಾಜರಾಗಿದ್ದ ಈ ವ್ಯಕ್ತಿ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರೊಂದಿಗೆ ನಡೆದುಕೊಂಡ ವರ್ತನೆ ಮಾಧ್ಯಮಗಳಲ್ಲಿ ವಿವರವಾಗಿ ವರದಿಯಾಗಿತ್ತು. ಇದು ಶಾಸಕ-ಸಂಸದರ ಗಮನಕ್ಕೆ ಬಂದಿರಲಿಲ್ಲವೇ..?
    ಸಿಸಿಬಿ ಪೊಲೀಸರ ಕಾರ್ಯ ವೈಖರಿಗೆ ಇದು ಉತ್ತಮ ಉದಾಹರಣೆಯಲ್ಲವೆ..?

    Verbattle
    Verbattle
    Verbattle
    ತೇಜಸ್ವಿ ಸೂರ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಸುಗಮ ಸಂಚಾರಕ್ಕೆ ಸಲೀಂ ಸೂತ್ರ
    Next Article ಸಾಹೀಬ್ ಗಂಜ್ ದರೋಡೆಕೋರರ ಬಂಧನ
    vartha chakra
    • Website

    Related Posts

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಜನವರಿ 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಜನವರಿ 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಜನವರಿ 30, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪಾಪಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • mamak24_liPa ರಲ್ಲಿ 21 ದಿನಗಳು ಅರವಿಂದ ಕೇಜ್ರಿವಾಲ್ ಜೈಲಿನಿಂದ OUT!
    • EdwardBlivy ರಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇ ಗಳ ಭದ್ರತೆ ಹೆಚ್ಚಳ
    • Walterfak ರಲ್ಲಿ ವಾರಾಂತ್ಯದಲ್ಲಿ ಕಳ್ಳಿಯಾಗುತ್ತಿದ್ದ ಪ್ರೊಫೆಸರ್!
    Latest Kannada News

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಜನವರಿ 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಜನವರಿ 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಜನವರಿ 30, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.